ವಿಪತ್ತು ನಿರ್ವಹಣೆಗೆ ತಂಡ

ದಾವಣಗೆರೆ: ಪ್ರವಾಹಪೀಡಿತ ಪ್ರದೇಶಗಳಲ್ಲಿ ಜನರ ರಕ್ಷಣೆಗಾಗಿ ಬೆಂಗಳೂರಿನಿಂದ ರಾಜ್ಯ ವಿಪತ್ತು ನಿರ್ವಹಣೆ ಹಾಗೂ ರಕ್ಷಣಾ ದಳದ ತಂಡವು ಜಿಲ್ಲೆಗೆ ಆಗಮಿಸಿದೆ.

ಈ ತಂಡದ ಸದಸ್ಯರು ಸಾರಥಿ-ಚಿಕ್ಕಬಿದರಿಯ ನಡುವೆ ಬೋಟ್‌ಗಳಲ್ಲಿ ಸಾರ್ವಜನಿಕರನ್ನು ಸುರಕ್ಷಿತವಾಗಿ ದಾಟಿಸುವ ಕೆಲಸ ಮಾಡಿದರು. ಈ ತಂಡದವರು ದೇವರಬೆಳಕೆರೆಯ ಗೃಹರಕ್ಷಕ ದಳದ ಪ್ರಾದೇಶಿಕ ತರಬೇತಿ ಶಾಲೆಯ ಕಟ್ಟಡದಲ್ಲಿ ತಂಗಿದ್ದಾರೆ.

ಮಳೆಹಾನಿ ಸಹಾಯವಾಣಿ ಸ್ಥಾಪನೆ: ಜಿಲ್ಲೆಯಾದ್ಯಂತ ಕಳೆದ 4 ದಿನಗಳಿಂದ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಸಾರ್ವಜನಿಕರಿಗೆ ನೆರವಾಗಲು ಜಿಲ್ಲಾಧಿಕಾರಿ ಕಾರ್ಯಾಲಯ ಹಾಗೂ ಎಲ್ಲಾ ತಾಲೂಕು ಕಚೇರಿಗಳಲ್ಲಿ 24*7 ಕಾರ್ಯ ನಿರ್ವಹಿಸುವಂತೆ ಸಹಾಯವಾಣಿ ತೆರೆಯಲಾಗಿದೆ.

ಅತಿವೃಷ್ಟಿಯಿಂದ ಜೀವಹಾನಿ, ಜಾನುವಾರು ಜೀವಹಾನಿ ಮತ್ತು ಸಾರ್ವಜನಿಕ ಆಸ್ತಿಹಾನಿ, ಮನೆಹಾನಿ ಹಾಗೂ ಇತರೆ ಹಾನಿಯಾಗುವ ಸಂಭವವಿರುತ್ತದೆ.

ಮಲೆನಾಡ ಭಾಗದಲ್ಲಿ ಸತತವಾಗಿ ಮಳೆಯಾಗುತ್ತಿರುವುದರಿಂದ ತುಂಗಭದ್ರಾ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಸಾಕಷ್ಟು ಹೆಚ್ಚಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆಯಿದೆ.

ಸಹಾಯವಾಣಿ ವಿವರ: ಜಿಲ್ಲಾಧಿಕಾರಿ ಕಾರ್ಯಾಲಯ ದಾವಣಗೆರೆ 1077/08192-234034, ಹೊನ್ನಾಳಿ ತಾಲೂಕು ಕಚೇರಿ 08188-251025, ಹರಿಹರ ತಾಲೂಕು ಕಚೇರಿ 08192-272950/242777, ದಾವಣಗೆರೆ ತಾಲೂಕು ಕಚೇರಿ 08192-235344, ಚನ್ನಗಿರಿ ತಾಲೂಕು ಕಚೇರಿ 08189-228025, ಜಗಳೂರು ತಾಲೂಕು ಕಚೇರಿ 08196-227338. ಈ ಸಹಾಯವಾಣಿಗೆ ಸಾರ್ವಜನಿಕರು ಮಳೆಯಿಂದಾಗುವ ಹಾನಿಗಳಿಗೆ ಸಂಪರ್ಕಿಸಲು ಜಿಲ್ಲಾಧಿಕಾರಿ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.