ವಿಮೆ ಹಣದಾಸೆಗೆ ವ್ಯಾಪಾರಿ ಹತ್ಯೆ

blank

ದಾವಣಗೆರೆ: ನಲವತ್ತು ಲಕ್ಷ ರೂ. ವಿಮೆ ಮೇಲಿನ ದುರಾಸೆಯಿಂದ ಸ್ನೇಹಿತರ ಜತೆ ಸೇರಿ ಹಣ್ಣಿನ ವರ್ತಕನನ್ನು ಕೊಲೆಗೈದ ಆರೋಪದ ಮೇಲೆ ಆತನ ಸಂಬಂಧಿ ಗಣೇಶ್ ಸೇರಿ ನಾಲ್ವರು ಪೊಲೀಸರ ಅತಿಥಿಯಾಗಿದ್ದಾರೆ.
ದಾವಣಗೆರೆ ಇಮಾಂ ನಗರದ ದುಗ್ಗೇಶ್ (32) ಕೊಲೆಗೀಡಾದ ವರ್ತಕ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಜಾದ್ ನಗರ ಪೊಲೀಸರು, ಗಣೇಶ, ಅನಿಲ, ಶಿವಕುಮಾರ್, ಮಾರುತಿ ಅವರನ್ನು ಬಂಧಿಸಿ ಪಲ್ಸರ್ ಬೈಕ್ ವಶಪಡಿಸಿಕೊಂಡಿದ್ದಾರೆ.
ಬಸಾಪುರ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ದುಗ್ಗೇಶ್‌ನನ್ನು ಆಸ್ಪತ್ರೆಗೆ ಕರೆದೊಯ್ದಿದದ್ದು ಬಿಟ್ಟರೆ ತಮ್ಮದೇನೂ ಪಾತ್ರವಿಲ್ಲ ಎಂದು ಕಟ್ಟು ಕಥೆ ಹೆಣೆದು ಪಾರಾಗಲು ಯತ್ನಿಸಿದ್ದ ಹಂತಕರು ಪೊಲೀಸ್ ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟಿದ್ದಾರೆ.
ವಿವರ:
ದುಗ್ಗೇಶ್ ಚಿಕ್ಕವನಿದ್ದಾಗಲೇ ಆತನ ತಂದೆ-ತಾಯಿ ತೀರಿ ಹೋಗಿದ್ದರಿಂದ ಅಜ್ಜಿ ಜತೆ ಇಮಾಂ ನಗರದಲ್ಲಿ ವಾಸವಾಗಿದ್ದನು. ಹಣ್ಣಿನ ವ್ಯಾಪಾರ ಮಾಡಿಕೊಂಡು ಜೀವಿಸುತ್ತಿದ್ದನು. ಖಾಸಗಿ ಬ್ಯಾಂಕ್‌ನಲ್ಲಿ 40 ಲಕ್ಷ ರೂ. ಮೊತ್ತದ ಇನ್ಶೂರೆನ್ಸ್ ಹೊಂದಿದ್ದನು. ದುಗ್ಗೇಶ್ ಕೊಲೆಗೈದರೆ 40 ಲಕ್ಷ ರೂ. ಕೈಸೇರುತ್ತದೆ ಎಂದು ಪ್ಲಾನ್ ಮಾಡಿದ ಗಣೇಶ್ ಆತನ ಸಹಚರರು ಸೋಮವಾರ ಮನೆ ಬಳಿ ತೆರಳಿ ಮಾತನಾಡುವುದಿದೆ ಎಂದು ದುಗ್ಗೇಶನನ್ನು ಬಸಾಪುರದತ್ತ ಕರೆದೊಯ್ದಿದ್ದರು. ಮಾರ್ಗಮಧ್ಯೆ ಎರಡು ಟವೆಲ್ ಬಳಸಿ ಉಸಿರುಕಟ್ಟಿಸಿ ಕೊಲೆಗೈದು, ಮನೆಗೆ ಶವ ತಂದಿಟ್ಟು ಕಾಲ್ಕಿತ್ತಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.
ಕೊಲೆಗೊಂದು  ಕಟ್ಟುಕಥೆ
ಕಟ್ಟುಕಥೆ ಹೆಣೆದು ಕೊಲೆ ಪ್ರಕರಣದಿಂದ ಬಚಾವಾಗಲು ಆರೋಪಿಗಳು ಪ್ರಯತ್ನಿಸಿದ್ದರು. ದುಗ್ಗೇಶ್‌ನನ್ನು ಮನೆಯಿಂದ ಹೊರಗೆ ಕರೆದೊಯ್ದವರು ಇವರೇ ಆಗಿದ್ದರೂ ನಾವು ಬಸಾಪುರ ರಸ್ತೆಯ ಬೀರಲಿಂಗೇಶ್ವರ ದೇವಸ್ಥಾನ ಬಳಿ ವಾಕ್ ಮಾಡುತ್ತಿದ್ದಾಗ ಅಲ್ಲಿ ದುಗ್ಗೇಶ್ ರಕ್ತದ ಮಡುವಿನಲ್ಲಿ ಬಿದ್ದಿದ್ದ. ತಕ್ಷಣ ಬಾಪೂಜಿ ಆಸ್ಪತ್ರೆಗೆ ಕರೆದುಕೊಂಡು ಹೋದವು. ವೈದ್ಯರು ತುಂಬ ಕ್ರಿಟಿಕಲ್ ಇದೆ ಎಂದಿದ್ದರಿಂದ ಬೇರೆ ಆಸ್ಪತ್ರೆಗೆ ಹೋದೆವು ಎಂದಿದ್ದರು. ಆದರೆ ಅವರು ಬಾಪೂಜಿ ಬಿಟ್ಟು ಬೇರಾವ ಆಸ್ಪತ್ರೆಗೂ ಹೋಗಿರಲಿಲ್ಲ ಎಂದು ಎಸ್ಪಿ ತಿಳಿಸಿದ್ದಾರೆ.
ದುಗ್ಗೇಶ್‌ಗೆ ಒಬ್ಬ ಸಹೋದರನಿದ್ದು ಆತನ ಹೆಸರು ಗೋಪಿ. ತನ್ನ  ಸಂಬಂಧಿ ಗಣೇಶ್ ನೆರವಿನಿಂದ ಗೋಪಿ ಅವರಿವರ ಬಳಿ ಕೈ ಸಾಲ ಪಡೆದು ಇತ್ತಿಚೆಗೆ ಊರು ತೊರೆದಿದ್ದನು. ಆರೋಪಿತರು ನಿನ್ನ ತಮ್ಮನ ಫೋನ್ ನಂ. ಕೊಡು, ಸಾಲ ತೀರಿಸಲು ಹೇಳು ಎಂದು ಪದೇ ಪದೆ ದುಗ್ಗೇಶ್‌ಗೆ ಹೇಳುತ್ತ ಬಂದಿದ್ದರು.  ಕೊಲೆಗೆ ಕಾರಣವಾಗಿರಬಹುದಾದ ಇನ್ನಿತರ ಅಂಶಗಳ ಬಗ್ಗೆಯೂ ತನಿಖೆ ನಡೆದಿದೆ ಎಂದು ಎಸ್ಪಿ ತಿಳಿಸಿದ್ದಾರೆ.

Share This Article

ಋತುಸ್ರಾವದ ಸಮಯದಲ್ಲಿ ಮೊಸರು ಸೇವಸಬಹುದೇ.. ಬೇಡವೇ; ಗೊಂದಲಕ್ಕೆ ಇಲ್ಲಿದೆ ಪರಿಹಾರ | Health Tips

ಮೊಸರು ಅಥವಾ ಉಪ್ಪಿನಕಾಯಿ ತಿನ್ನುವುದರಿಂದ ಋತುಸ್ರಾವದ ಸಮಯದಲ್ಲಿ ಸಮಸ್ಯೆಯಾಗುತ್ತದೆ ಎಂಬ ನಂಬಿಕೆಯಿದೆ. ಆದರೆ ಯಾವುದೇ ಆಹಾರವು…

ಉಸಿರಾಟದ ವ್ಯಾಯಾಮ ಗೊರಕೆ ಸಮಸ್ಯೆಗೆ ಪರಿಹಾರ; ಇದು ಸುಳ್ಳೋ-ಸತ್ಯವೋ.. ವೈದ್ಯರು ಹೇಳೋದೇನು? | Health Tips

ನಿದ್ರಿಸುವಾಗ ಗೊರಕೆ ಹೊಡೆಯುವ ವ್ಯಕ್ತಿಗೆ ಮಾತ್ರವಲ್ಲದೆ ಸುತ್ತಮುತ್ತಲಿನವರಿಗೂ ತೊಂದರೆಯ ಅನುಭವವಾಗುತ್ತದೆ. ಸಾಮಾನ್ಯವಾಗಿ ಇದನ್ನು ಲಘುವಾಗಿ ತೆಗೆದುಕೊಳ್ಳಲಾಗುತ್ತದೆ.…

Vastu Tips : ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ!ಸಾಲದ ಸುಳಿಗೆ ಸಿಲುಕುತ್ತೀರಿ..!

Vastu Tips: ದೃಷ್ಟ ಚೆನ್ನಾಗಿದ್ದರೆ ಕೆಲವರು ರಾತ್ರೋರಾತ್ರಿ ಲಕ್ಷಾಧಿಪತಿಗಳಾಗುತ್ತಾರೆ. ಕೆಲವರು  ಐಷಾರಾಮಿ ಜೀವನ ನಡೆಸಲು ಕಷ್ಟಪಡುತ್ತಾರೆ. ಅವರು…