ಲಿಂಗಾಯತ ಧರ್ಮದ ರಕ್ಷಕ ಮಡಿವಾಳ ಮಾಚಿದೇವ

blank

ದಾವಣಗೆರೆ: ಧರ್ಮ, ಸತ್ಯ, ಅಹಿಂಸೆಗಾಗಿ ಜೀವನವನ್ನೇ ತ್ಯಾಗ ಮಾಡಿದ ಮಡಿವಾಳ ಮಾಚಿದೇವರು ಲಿಂಗಾಯತ ಧರ್ಮವನ್ನು ಸಂರಕ್ಷಣೆ ಮಾಡಿದರು ಎಂದು ಮೈಸೂರಿನ ಬಸವ ಧ್ಯಾನ ಮಂದಿರದ ಶ್ರೀ ಬಸವಲಿಂಗಮೂರ್ತಿ ಸ್ವಾಮೀಜಿ ಹೇಳಿದರು.
ಶ್ರಾವಣ ಮಾಸದ ನಿಮಿತ್ತ ವಿರಕ್ತಮಠದಲ್ಲಿ ಹಮ್ಮಿಕೊಂಡಿರುವ, ಕಲ್ಯಾಣದಿಂದ ಉಳವಿಯೆಡೆಗೆ-114ನೇ ವರ್ಷದ ಪ್ರವಚನ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.
ಬಸವ ಕಲ್ಯಾಣದಲ್ಲಿ ಶರಣರ ಕಾಯಕ ಮಾಡುವವರು, ಮದ್ಯಪಾನ-ದುಶ್ಚಟಕ್ಕೆ ಒಳಗಾಗದ ಹಾಗೂ ಅಹಂಕಾರವಿಲ್ಲದವರ ಬಟ್ಟೆಗಳನ್ನು ಮಾಚಿದೇವರು ಮಡಿ ಮಾಡುತ್ತಿದ್ದರು. ಕಲ್ಯಾಣಕ್ಕೆ ಬರುವ ಹೊಸಬರಿಗೆ ಆಧ್ಯಾತ್ಮಿಕ ಮಾರ್ಗದರ್ಶನ ಹಾಗೂ ದೀಕ್ಷಾ ಸಂಸ್ಕಾರವನ್ನು ಚನ್ನಬಸವಣ್ಣನವರಿಂದ ಕೊಡಿಸಿ ಅವರ ಬಟ್ಟೆಗಳನ್ನು ಮಡಿ ಮಾಡಿಕೊಡುತ್ತಿದ್ದರು. ಅವರಿಗೆ ದಾಸರಾಗಿ ಸೇವೆ ಸಲ್ಲಿಸುತ್ತಿದ್ದರು ಎಂದು ಹೇಳಿದರು.
ಶರಣರ ನಿಂದನೆ ಮಾಡುವವರು, ಮಡಿಯಾದ ಸ್ವಚ್ಛ ಬಟ್ಟೆಗಳನ್ನು ಮುಟ್ಟಿ ಮೈಲಿಗೆ ಮಾಡುವವರನ್ನು ಮಾಚಿದೇವರು ಖಡ್ಗದಿಂದ ಬೆದರಿಸಿ ದೂರ ಸರಿಸಿ ಬಟ್ಟೆಗಳು ಸ್ವಚ್ಛವಾಗಿರುವಂತೆ ಕಾಪಾಡುತ್ತಿದ್ದರು ಎಂದು ಸ್ಮರಿಸಿದರು.
ಅಕ್ಕಮಹಾದೇವಿ ತಾಯಿಯವರು ಕಲ್ಯಾಣಕ್ಕೆ ಬಂದಾಗ ಅವರನ್ನು ಸ್ವಾಗತಿಸಿದ್ದು ಮಡಿವಾಳ ಮಾಚಿದೇವರು, ಅನುಭವ ಮಂಟಪದಲ್ಲಿ ಚನ್ನಬಸವಣ್ಣನವರಿಂದ ಇಷ್ಟಲಿಂಗವನ್ನು ಕೊಡಿಸಿದರು. ಶರಣರು ಉಳವಿಗೆ ಹೋಗುವಾಗ ನೇತೃತ್ವ ವಹಿಸಿ ವಚನ ಸಾಹಿತ್ಯದ ಸಂರಕ್ಷಣೆ ಮಾಡಿ ಸೈನಿಕರಂತೆ ಹೋರಾಡಿದರು ಕೊನೆಯಲ್ಲಿ ದಾರಿಯಲ್ಲಿರುವಂತಹ ಸ್ಥಳದಲ್ಲಿ ಶತ್ರು ಸೈನಿಕರಿಂದ ಕೊಲೆಯಾದರು, ಧರ್ಮಕ್ಕೋಸ್ಕರವಾಗಿ ತನ್ನ ಜೀವನವನ್ನು ತ್ಯಾಗ ಮಾಡಿ ಇತಿಹಾಸದಲ್ಲಿ ದಾಖಲಾದರು ಎಂದು ವಿವರಿಸಿದರು.

Share This Article

ಎಷ್ಟು ಪ್ರಮಾಣದಲ್ಲಿ ಮದ್ಯ ಸೇವಿಸಿದ್ರೆ ಲಿವರ್​ ಡ್ಯಾಮೇಜ್​ ಆಗುತ್ತದೆ! ಇಲ್ಲಿದೆ ನೋಡಿ ಅಚ್ಚರಿ ವರದಿ | Liver Health

Liver Health: ದೇಶದಲ್ಲಿ ಮದ್ಯ ಸೇವಿಸುವವರ ಸಂಖ್ಯೆ ಅಧಿಕವಾಗಿಯೇ ಇದೆ. ಲಿಕ್ಕರ್​ ಕುಡಿಯುವುದು ಸಹ ಒಂದು…

ಏಳನೇ ತಿಂಗಳಲ್ಲಿ ಹೆರಿಗೆಯಾದರೆ ಏನಾಗುತ್ತದೆ?; ಮಗುವಿನ ಆರೋಗ್ಯದ ಮೇಲಾಗುವ ಪರಿಣಾಮವೇನು.. ತಿಳಿದುಕೊಳ್ಳಲೇಬೇಕಾದ ಮಾಹಿತಿ | Health Tips

ಗರ್ಭಾವಸ್ಥೆಯಲ್ಲಿ ಮಗುವನ್ನು 9 ತಿಂಗಳುಗಳ ಕಾಲ ಇಟ್ಟುಕೊಳ್ಳುವುದು ಮುಖ್ಯ ಎಂದು ವೈದ್ಯರು ಸೇರಿದಂತೆ ಎಲ್ಲಾ ತಜ್ಞರು…

ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಬೇಕೇ?; ಅಡುಗೆಮನೆಯಲ್ಲಿನ ಈ 2 ವಸ್ತುಗಳನ್ನು ತಪ್ಪದೆ ಬಳಸಿ | Health Tips

ಇತ್ತೀಚಿನ ದಿನಗಳಲ್ಲಿ ಕಳಪೆ ಜೀವನಶೈಲಿ ಮತ್ತು ಅನಿಯಮಿತ ಆಹಾರ ಪದ್ಧತಿಯಿಂದಾಗಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವ ಸಮಸ್ಯೆ…