ದಾವಣಗೆರೆ: ಸೆ.15ರಿಂದ 21ರ ವರೆಗೆ ಕೆನಡಾದಲ್ಲಿ ನಡೆಯಲಿರುವ ಕಾಮನ್ವೆಲ್ತ್ ಚಾಂಪಿಯನ್ಷಿಪ್ಗೆ ಆಯ್ಕೆಯಾಗಿರುವ ನಗರದ ಕ್ರೀಡಾಪಟು ಪಿ.ಮಂಜಪ್ಪ ಅವರಿಗೆ ನೆರವಾಗಲು ಶಿವಸೈನ್ಯ ಸಂಘದವರು ಸಾರ್ವಜನಿಕರಿಂದ ಶುಕ್ರವಾರ ದೇಣಿಗೆ ಸಂಗ್ರಹಿಸಿದರು.
ಇಲ್ಲಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ತಾಲೂಕು ಕಚೇರಿ ಪ್ರದೇಶದಲ್ಲಿ ಸಾರ್ವಜನಿಕರನ್ನು ಭೇಟಿಯಾದ ಸಂಘದ ಪದಾಧಿಕಾರಿಗಳು ಕ್ರೀಡಾಪಟುವಿನ ಭವಿಷ್ಯದ ದೃಷ್ಟಿಯಿಂದ ನೆರವು ನೀಡುವಂತೆ ಮನವಿ ಮಾಡಿಕೊಂಡರು.
ಸಾರ್ವಜನಿರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಇನ್ನೂ ಮೂರ್ನಾಲ್ಕು ದಿನ ದೇಣಿಗೆ ಸಂಗ್ರಹ ಕಾರ್ಯ ಮುಂದುವರಿಸಲಾಗುವುದು. ನಂತರ ಸಂಗ್ರಹಗೊಂಡ ಹಣವನ್ನು ಕ್ರೀಡಾಪಟುವಿಗೆ ನೀಡಲಾಗುವುದು ಎಂದು ಸಂಘದ ಜಿಲ್ಲಾಧ್ಯಕ್ಷ ಗಣೇಶ್ ತಿಳಿಸಿದರು. ಮುಖಂಡರಾದ ಪ್ರವೀಣ್, ಆಕಾಶ್, ವಿನಯ್, ಶ್ರೀಧರ್ ಇತರರು ಇತರರಿದ್ದರು.
ಹಮಾಲಿ ಮಾಡಿ ಜೀವನ ಸಾಗಿಸುವ ಪಿ.ಮಂಜಪ್ಪ ಬಡತನ ಹಿನ್ನೆಲೆಯ ಯುವಕ. ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವರು 2.40 ಲಕ್ಷ ರೂ. ಗಳನ್ನು ರಾಜ್ಯ ಪವರ್ ಲಿಫ್ಟಿಂಗ್ ಅಸೋಸಿಯೇಷನ್ಗೆ ಪಾವತಿಸಬೇಕಿದೆ.