ದಾವಣಗೆರೆ: ದೌರ್ಜನ್ಯಕ್ಕೀಡಾದ ಬಾಲಕಿಯರು, ಮಹಿಳೆಯರಿಗೆ ಆಪ್ತ ಸಮಾಲೋಚನೆ ಮಾಡುವ ಜತೆಗೆ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಆಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ತಿಳಿಸಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ವಿಧಾನ್ ಸೆ ಸಮಾಧಾನ್’ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೌರ್ಜನ್ಯಪೀಡಿತ ಮಹಿಳೆಯರಿಗೆ ಕಾನೂನು ಸಲಹೆ, ಆರ್ಥಿಕ ಪರಿಹಾರ, ತಾತ್ಕಾಲಿಕ ಆಶ್ರಯ, ರಕ್ಷಣೆ ಜತೆಗೆ ಸ್ವಾವಲಂಬಿ ಬದುಕಿಗೆ ಅನುಕೂಲವಾಗುವಂತೆ ತರಬೇತಿ ನೀಡುವುದು, ಮತ್ತು ಅವರನ್ನು ಆರ್ಥಿಕ ಸಶಕ್ತರನ್ನಾಗಿ ಮಾಡುವುದೇ ’ವಿಧಾನ್ ಸೆ ಸಮಾಧಾನ್’ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ನಿತ್ಯ ವ್ಯವಹಾರದಲ್ಲಿ ಕಾನೂನು ಚೌಕಟ್ಟಿನ ವಿಚಾರಕ್ಕೆ ಬಂದಾಗ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಆಶ್ರಯದ ಅಗತ್ಯವಿರುವ ಮಹಿಳೆಯರಿಗೆ ಅಲ್ಪಾವಧಿ ವಸತಿಗೃಹ ಅಥವಾ ಇಲಾಖೆಯ ಸ್ವೀಕಾರ ಕೇಂದ್ರ, ರಾಜ್ಯ ಮಹಿಳಾ ನಿಲಯಗಳಲ್ಲಿ ತಾತ್ಕಾಲಿಕವಾಗಿ ಆಶ್ರಯ ನೀಡಲಾಗುವುದು.
ಆಗತ್ಯವಿದ್ದಲ್ಲಿ ತರಬೇತಿಯುಳ್ಳ ಸಲಹೆಗಾರರ ಮೂಲಕ ಸಮಾಲೋಚನೆಯ ಸೇವೆ ನೀಡಲಾಗುವುದು. ಕಾನೂನು ನೆರವು ಅವಶ್ಯಕತೆಯುಳ್ಳ ಪ್ರಕರಣಗಳಿಗೆ ವಕೀಲರನ್ನು ನೇಮಿಸಿಕೊಳ್ಳಲು ಆರ್ಥಿಕ ನೆರವು ನೀಡಲಾಗುವುದು. ರಕ್ಷಣೆ ಕೋರಿ ಬಂದ ಮಹಿಳೆಯರು ವಿದ್ಯಾಭ್ಯಾಸ ಮುಂದುವರೆಸಲು ಇಚ್ಛಿಸಿದಲ್ಲಿ ಆರ್ಥಿಕ ನೆರವು ಒದಗಿಸಿ ವಸತಿಗೃಹಗಳಲ್ಲಿ ಆಶ್ರಯ ನೀಡಲಾಗುವುದು ಎಂದು ಹೇಳಿದರು.
ಸಾಂತ್ವನ ಕೇಂದ್ರದಲ್ಲಿ ದೂರು ದಾಖಲಿಸಿದ ಮಹಿಳೆಗೆ ಅಗತ್ಯವಿದ್ದಲ್ಲಿ ಜಿಲ್ಲಾ ಸಮಿತಿ ನಿರ್ಧಾರದಂತೆ ಆರ್ಥಿಕ ಪರಿಹಾರ ಸಿಗಲಿದೆ. ಸಂತ್ರಸ್ತೆ ಸಾವಿಗೀಡಾದಲ್ಲಿ ಅವರ ಮಕ್ಕಳ ಶಿಕ್ಷಣ ಹಾಗೂ ಪುನರ್ವಸತಿಗಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಠೇವಣಿ ಇಡಲಾಗುವುದು. ಉದ್ಯೋಗಸ್ಥ ಮಹಿಳೆಯರ ವಸತಿಗೃಹದಲ್ಲಿ ಗರಿಷ್ಠ ವರ್ಷದವರೆಗೆ ಇರಲು ಅವಕಾಶವಿದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ ಮಾತನಾಡಿ ಸಂವಿಧಾನದ ಆಶಯದಂತೆ ಮಹಿಳೆಯರು ಮತ್ತು ಮಕ್ಕಳಿಗೆ ವಿಶೇಷ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. 1990ರಲ್ಲಿ ಅನುಷ್ಠಾನವಾದ ರಾಷ್ಟ್ರೀಯ ಮಹಿಳಾ ಕಾಯ್ದೆಯು ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ, ವೈವಾಹಿಕ ಜೀವನದ ತೀವ್ರಥರದ ಸಮಸ್ಯೆಗಳು, ಅತ್ಯಾಚಾರ, ದೌರ್ಜನ್ಯದ ವಿರುದ್ಧ್ದ ಮಹಿಳೆಯರಿಗೆ ಸೂಕ್ತ ಸಲಹೆ-ಸಹಕಾರಕ್ಕೆ ಇಲಾಖೆಯ ನೆರವನ್ನು ನೀಡಲಿದೆ ಎಂದರು.
ಸಮಾಜದ ದುರ್ಬಲ ಮತ್ತು ವಂಚಿತ ವರ್ಗಗಳಿಗೆ ಉಚಿತ ಮತ್ತು ಸಮರ್ಥ ಕಾನೂನು ಸೇವೆಗಳನ್ನು ಒದಗಿಸುವ ಮನೋಭಾವ ಮತ್ತು ಉದ್ದೇಶವು ದುರ್ಬಲ ವರ್ಗದವರಿಗೆ ಅವರ ವಿವಿಧ ಕಾನೂನು ಮತ್ತು ಸಾಂವಿಧಾನಿಕ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಅಗತ್ಯವಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾಪ್ರಶಾಂತ್ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಉಪನಿರ್ದೇಶಕ ಡಾ.ಕೆ.ಕೆ ಪ್ರಕಾಶ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿ ಗುರುಪ್ರಸಾದ್, ಹಿರಿಯ ವಕೀಲರಾದ ಎಚ್.ಎನ್.ಸುಧಾ, ಸಿ.ಪಿ. ಅನಿತಾ ಇದ್ದರು.
ರಾಷ್ಟ್ರೀಯ ಮಹಿಳಾ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧ್ದಿ ಇಲಾಖೆ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
—
ಸಂತ್ರಸ್ತೆಯರಲ್ಲಿ ಮೂಡಿಸಿ ಆತ್ಮಸ್ಥೈರ್ಯ

ಈ 3 ರಾಶಿಯ ಮಹಿಳೆಯರಿಗೆ ಹಣದ ಮೇಲಿನ ಗೀಳು, ಐಷಾರಾಮಿ ಜೀವನದ ಆಸೆ ಹೆಚ್ಚು! Zodiac Signs
Zodiac Signs : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ…
ಸೂರ್ಯ, ಗುರು ಗ್ರಹದಿಂದ ರೂಪುಗೊಳ್ಳಲಿದೆ ಕೇಂದ್ರ ಯೋಗ: ಈ 3 ರಾಶಿಯವರಿಗೆ ಹಣದ ಸಮಸ್ಯೆ ದೂರ! Kendra Yoga
Kendra Yoga : ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ರಾಶಿ, ನಕ್ಷತ್ರ ಹಾಗೂ ಗ್ರಹಗಳ…
ನಿಮಗೆ ಜ್ವರ ಬಂದ್ರೆ ಈ ರೀತಿ ಮಾಡ್ತೀರಾ? ಈ ವಿಷಯಗಳನ್ನು ನೀವು ಖಂಡಿತ ತಿಳಿದುಕೊಳ್ಳಲೇಬೇಕು? Fever
Fever : ದೇಹದ ಉಷ್ಣತೆಯು ಸಾಮಾನ್ಯ ತಾಪಮಾನಕ್ಕಿಂತ ಹೆಚ್ಚಾದಾಗ, ಜನರಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ. ಜ್ವರ ಬಂದಾಗ…