ಹಿಂದು ಎಂಬುದು ಶ್ರೇಷ್ಠ ಸತ್ಯ ವಚನಾನಂದ ಸ್ವಾಮೀಜಿ ಹೆಳಿಕೆ

ದಾವಣಗೆರೆ: ಹಿಂದು ಎಂಬುದು ಶ್ರೇಷ್ಠ ಸತ್ಯ. ಬಸವ, ಜೈನ ಹಾಗೂ ಬೌದ್ಧ ಪಥವಾಗಲೀ ಅವುಗಳ ಮೂಲ ಬಂದಾಗ ನಾವೆಲ್ಲ ಹಿಂದುಗಳು ಎಂಬುದಾಗಿ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಪುನರುಚ್ಚರಿಸಿದ್ದಾರೆ.
ರಾಣೆಬೆನ್ನೂರಿನ ಕಾರ್ಯಕ್ರಮದ ವೇದಿಕೆಯಲ್ಲಿ ವೀರಶೈವ-ಲಿಂಗಾಯತರು ಹಿಂದುಗಳು ಎಂದು ಹೇಳಿಕೆ ನೀಡಿದ್ದ ಶ್ರೀಗಳು ದಾವಣಗೆರೆಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ನಾವು ಯಾವ ರಾಷ್ಟ್ರದಲ್ಲಿದ್ದೇವೆ. ಇದನ್ನು ಯಾವ ರೀತಿ ಬೆಳೆಸಬೇಕೆಂಬುದರ ಬಗ್ಗೆ ಯೋಚಿಸಬೇಕು. ಹಿಂದು ಎಂಬುದು ಸನಾತನವಾದ, ಶುದ್ಧ ಜೀವನ ಪದ್ಧತಿ. ಹಿಂದುತ್ವದ ವಟವೃಕ್ಷದಲ್ಲಿ ಸಾಕಷ್ಟು  ರೆಂಬೆ ಕೊಂಬೆಗಳಿವೆ. ಅಲ್ಲಮಪ್ರಭು ಬಸವಾದಿ ಶರಣರು, ಗೌತಮ ಬುದ್ಧ, ಮಹಾವೀರ ಸೇರಿ ಹಲವು ಮಹನೀಯರಿದ್ದಾರೆ.
ನಾವೆಲ್ಲ ಹಿಂದುಗಳು. ಪ್ರಮಾಣಪತ್ರದಲ್ಲಿ ಹಿಂದು ಲಿಂಗಾಯತ ಎಂದು ಬರೆಸಿದ್ದೆವು. ಮಹನೀಯರೆಲ್ಲ ಹಿಂದು ಎಂದು ಹೇಳಿದ್ದರೂ ಅಚರಣೆಯಲ್ಲಿ ಬದಲಾವಣೆ ಇರಬಹುದು. ಹಿಂದು ಎನ್ನುವುದು ಮಹಾಸಾಗರವಾಗಿದ್ದು, ನಾವೆಲ್ಲರೂ ಅದರಲ್ಲಿನ ನದಿಗಳಂತೆ. ಸಾಮಾಜಿಕವಾಗಿ ನಾವೆಲ್ಲ ಒಂದಾಗಿದ್ದರೂ ತಾತ್ವಿಕವಾಗಿ ಬೇರೆ ಬೇರೆ ಆಗಬಹುದು.  ಸಾಮಾಜಿಕವಾಗಿ, ಬೌದ್ಧಿಕವಾಗಿ ಇಡೀ ವೀರಶೈವ ಲಿಂಗಾಯತ ಒಂದು ಎಂಬುದು ನಮ್ಮ ಭಾವನೆ. ಅದು ಹಿಂದು ಧರ್ಮಕ್ಕೆ ಪೂರಕ ಆಗಬೇಕು ಎಂದು ಹೇಳಿದರು.
ಪಂಚಮಸಾಲಿ, ಲಿಂಗಾಯತ ಸಮಾಜದ ಉಪಪಂಗಡವಾಗಿದ್ದು, ಮುಂಬರುವ ಜನಗಣತಿಯಲ್ಲಿ ಲಿಂಗಾಯತ ಅಥವಾ ಪಂಚಮಸಾಲಿ ಎಂದು ಬರೆಸಬೇಕೇ ಎಂಬುದರ ಬಗ್ಗೆ ಮುಂದಿನ ದಿನದಲ್ಲಿ ತೀರ್ಮಾನ ಮಾಡಲಿದ್ದೇವೆ ಎಂದೂ ಪ್ರತಿಕ್ರಿಯಿಸಿದರು.
—-

Share This Article

ಮಧ್ಯಾಹ್ನ, ರಾತ್ರಿ ಊಟದಲ್ಲಿ ಜಾಸ್ತಿ ಉಪ್ಪು ಸೇವಿಸಿದ್ರೆ ಕ್ಯಾನ್ಸರ್‌ ಬರೋದು ಪಕ್ಕಾ! ಇರಲಿ ಎಚ್ಚರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…

ಮಕ್ಕಳಿಗೆ ಬಾಳೆಹಣ್ಣು ಕೊಡುವ ಮುನ್ನ ಈ ವಿಚಾರಗಳು ನಿಮಗೆ ಗೊತ್ತಿರಲಿ ಇಲ್ಲದಿದ್ರೆ ಆರೋಗ್ಯ ಕೆಡಬಹುದು ಎಚ್ಚರ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…

ತೂಕ ಕಳೆದುಕೊಂಡಿದ್ದೀರಾ? ಲಘುವಾಗಿ ಪರಿಗಣಿಸಬೇಡಿ, ನಿಮಗೆ ಈ ಆರೋಗ್ಯ ಸಮಸ್ಯೆಗಳಿರಬಹುದು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…

ಈ ಸುದ್ದಿಗಳನ್ನೂ ಮಿಸ್​ ಮಾಡ್ಬೇಡಿ