ಕಮಲ-ತೆನೆ ಮೈತ್ರಿಗೆ ಧಕ್ಕೆ ತರದೀರಿ

ದಾವಣಗೆರೆ: ಹರಿಹರ ತಾಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನ ವಿಚಾರವಾಗಿ ಗೊಂದಲ ಸೃಷ್ಟಿಸದೇ ತಮ್ಮನ್ನು ಮುಂದುವರಿಸಬೇಕು ಎಂದು ತಾಪಂ ಅಧ್ಯಕ್ಷೆ ಶ್ರೀದೇವಿ ಮಂಜಪ್ಪ ಮನವಿ ಮಾಡಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೆಡಿಎಸ್-ಕಾಂಗ್ರೆಸ್ ಸದಸ್ಯರು ಒಟ್ಟಾಗಿ ಅಧಿಕಾರ ಹಿಡಿಯಲು ಅವಿಶ್ವಾಸ ಮಂಡನೆಗೆ ತಂತ್ರಗಾರಿಕೆ ನಡೆಸಿದ್ದಾರೆ. ಬಿಜೆಪಿ-ಜೆಡಿಎಸ್ ಮಧ್ಯೆ ಆಗಿದ್ದ ಒಪ್ಪಂದ ಮುರಿದು ಹಾಕುವ ಪ್ರಯತ್ನಕ್ಕೆ ಕೆಲವರು ಕೈ ಹಾಕಿದ್ದಾರೆ ಎಂದು ದೂರಿದರು.

ಕಾಂಗ್ರೆಸ್ ಬೆಂಬಲಿತ ಕುಂಬಳೂರು ಕ್ಷೇತ್ರದ ಸದಸ್ಯರನ್ನು ಅಧ್ಯಕ್ಷ ಸ್ಥಾನಕ್ಕೆ ತರಲು ಪ್ರಯತ್ನಿಸಿದ್ದಾರೆ. ಆದ್ದರಿಂದ ಮಾಜಿ ಶಾಸಕ ಎಚ್. ಎಸ್.ಶಿವಶಂಕರ್ ಅವರು ತಮ್ಮ ಪಕ್ಷದ ಸದಸ್ಯರಿಗೆ ಒಪ್ಪಂದದಂತೆ ಮುಂದುವರಿಯಲು ಸೂಚಿಸಲು ವಿನಂತಿಸಿದರು.

ಮೂರು ವರ್ಷದ ಅವಧಿಯಲ್ಲಿ ಸದಸ್ಯರಿಗೆ ಯಾವುದೇ ಮಾಹಿತಿ ನೀಡಿಲ್ಲ ಎಂಬುದಾಗಿ ಹೊಳೆಸಿರಿಗೆರೆ ಸದಸ್ಯ ಕೊಟ್ರೇಶ್‌ಗೌಡ್ ನೀಡಿದ ಹೇಳಿಕೆ ಸತ್ಯಕ್ಕೆ ದೂರುವಾದುದು. ಅನುದಾನವನ್ನು ಎಲ್ಲ 15 ಸದಸ್ಯರ ಕ್ಷೇತ್ರಕ್ಕೆ ಸಮನವಾಗಿ ಹಂಚಲಾಗಿದೆ ಎಂದರು.

ಮಾಜಿ ಶಾಸಕ ಬಿ.ಪಿ.ಹರೀಶ್ ಚುನಾವಣೆ ಬಂದಾಗ ಮಾತ್ರ ಮಾತನಾಡುತ್ತಾರೆಂಬ ಆರೋಪ ಸುಳ್ಳು ಹಾಗೂ ಮಹಿಳಾ ಸದಸ್ಯರಲ್ಲಿ ಭಿನ್ನಮತ ಇದೆ ಎಂಬುದು ಕೂಡ ಉಹಾಪೊಹ ಎಂದು ತಾಪಂ ಸದಸ್ಯರೊಬ್ಬರ ಆರೋಪಕ್ಕೆ ಪ್ರತಿಕ್ರಿಯಿಸಿದರು.

ಮುಖಂಡರಾದ ಭಾನುವಳ್ಳಿ ಕೊಟ್ರೇಶ್, ಆರ್.ಬಿ.ರೆಹಮಾನ್, ನಗರಸಭೆ ಸದಸ್ಯ ರಜನಿಕಾಂತ್, ಬಿಜೆಪಿ ಎಸ್‌ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪಿ.ಹನುಮಂತಪ್ಪ ಇತರರಿದ್ದರು.

Leave a Reply

Your email address will not be published. Required fields are marked *