ಆಭರಣ ಪ್ರದರ್ಶನ-ಮಾರಾಟ ಉತ್ಸವ

ದಾವಣಗೆರೆ: ಗೋಲ್ಡನ್ ಕ್ರೀಪರ್ ಸಂಸ್ಥೆಯು ಶನಿವಾರ ಎಸ್‌ಎಸ್ ಕನ್ವೆನ್‌ಷನ್ ಸೆಂಟರ್‌ನಲ್ಲಿ ಆಯೋಜಿಸಿದ್ದ ಆಭರಣ ಪ್ರದರ್ಶನ ಮತ್ತು ಮಾರಾಟ ಉತ್ಸವವನ್ನು ಶಾಸಕ ಶಾಮನೂರು ಶಿವಶಂಕರಪ್ಪ, ನಟಿ ಆಶಿಕಾ ರಂಗನಾಥ್ ಉದ್ಘಾಟಿಸಿದರು.

ಗೌರಿ ಗಣೇಶ ಹಬ್ಬ, ಮದುವೆ ಮತ್ತಿತರ ಶುಭಕಾರ್ಯಗಳ ಹಿನ್ನೆಲೆಯಲ್ಲಿ ಈ ಮೇಳ ಏರ್ಪಡಿಸಿದ್ದು, ದೇಶದ 30 ಅಗ್ರ ಶ್ರೇಣಿಯ ಆಭರಣ ತಯಾರಕರು ಭಾಗವಹಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಸಂಸ್ಥೆಯ ಮಾಲೀಕರಾದ ಬಿ.ಎನ್.ಜಗದೀಶ್, ಹೇಮಲತಾ ಜಗದೀಶ್ ಉಪಸ್ಥಿತರಿದ್ದರು.