28.5 C
Bengaluru
Monday, January 20, 2020

ಆದಿಪೂಜಿತನ ಅನಾದಿ ರೂಪ ವೈಭವ

Latest News

ವಿಪಕ್ಷ ನಾಯಕ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕವಾಗಲಿ: ಜಿ. ಪರಮೇಶ್ವರ್

ಬೆಂಗಳೂರು: ವಿಪಕ್ಷ ನಾಯಕ ಸ್ಥಾನ ಮತ್ತು ಕಾಂಗ್ರಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕವಾಗಿರಲಿ ಎಂಬ ಅಭಿಪ್ರಾಯವನ್ನು ಹಿರಿಯ ಕಾಂಗ್ರೆಸ್ ನಾಯಕ ಡಾ.ಜಿ.ಪರಮೇಶ್ವರ್...

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ಗುರುತು ಪತ್ತೆ

ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ಚಿತ್ರ ಸಿಸಿಟಿವಿಯಲ್ಲಿ ಸೆರೆಯಾಗಿದೆ.ವಿಮಾನ ನಿಲ್ದಾಣದಲ್ಲಿರುವ ಸಿಸಿಟಿವಿಯಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ದೃಶ್ಯ ಪತ್ತೆಯಾಗಿದೆ.ಶಂಕಿತ...

ವಸತಿ ಸಹಾಯಧನ ಹೆಚ್ಚಳ ಕೋರಿ ಪ್ರಧಾನಿ ಬಳಿ ರಾಜ್ಯದ ನಿಯೋಗ : ವಸತಿ ಸಚಿವ ವಿ.ಸೋಮಣ್ಣ

ಬೆಂಗಳೂರು: ವಿಧಾನ ಸೌಧ ಕೊಠಡಿಯಲ್ಲಿ ಬೆಂಗಳೂರು ನಗರ ವಸತಿ ಯೋಜನೆ ಕುರಿತು ಸಂಸದ, ಶಾಸಕರ ಸಭೆಯಲ್ಲಿ ಸೋಮವಾರ ಈ ವಿಷಯ ತಿಳಿಸಿದರು.ಕೇಂದ್ರ ಸಹಾಯಧನ...

ಜೂಜುಕೋರರ ಗಡಿಪಾರು ಖಚಿತ: ಎಸ್‌ಪಿ ವಂಶಿಕೃಷ್ಣ ಎಚ್ಚರಿಕೆ

ಪಾವಗಡ: ಮಟ್ಕಾ ಮತ್ತು ಇಸ್ಪೀಟು ಆಡುವವರನ್ನು ಮತ್ತು ಆಡಿಸುವವರನ್ನು ಗಡಿಪಾರು ವಾಡಲು ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ತುಮಕೂರು ಜಿಲ್ಲಾ ಎಸ್‌ಪಿ ಡಾ.ಕೆ.ವಂಶಿಕೃಷ್ಣ...

ವಿಶ್ವಶಾಂತಿಗೆ ಸಂತರ ಮಾರ್ಗದರ್ಶನ ಅಗತ್ಯ: ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

ತುಮಕೂರು: ವಿಶ್ವವೇ ಸಂಕಷ್ಟದ ಸನ್ನಿವೇಶದಲ್ಲಿದ್ದು ಜನರ ಭಯ ತೊಲಗಿಸಲು ಸುಖ-ಶಾಂತಿ ನೆಲೆಸಲು ಸಂತರ ಮಾರ್ಗದರ್ಶನ ಅಗತ್ಯವಿದೆ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು. ಸಿದ್ಧಗಂಗಾ...

ಡಿ.ಎಂ.ಮಹೇಶ್ ದಾವಣಗೆರೆ: ಆದಿಪೂಜಿತ ಗಣೇಶನ ಉತ್ಸವಕ್ಕೆ ಜಿಲ್ಲೆಯೆಲ್ಲೆಡೆ ಭರ್ಜರಿ ಸಿದ್ಧತೆ ಪೂರ್ಣಗೊಂಡಿವೆ. ಕಾನೂನುಗಳ ಹೇರಿಕೆ ನಡುವೆಯೂ ಸಾರ್ವಜನಿಕ ಸಂಘ ಸಂಸ್ಥೆಗಳಲ್ಲಿ ಗಣೇಶನ ಪ್ರತಿಷ್ಠಾಪನೆ ಉತ್ಸಾಹ ಕುಗ್ಗಿಲ್ಲ.

ದಾವಣಗೆರೆ ನಗರಪಾಲಿಕೆ ವ್ಯಾಪ್ತಿಯಲ್ಲಿ ಈ ಬಾರಿ 350ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಯಾಗಲಿವೆ. ಪಾಲಿಕೆ, ಪೊಲೀಸ್, ಬೆಸ್ಕಾಂ ಇತರೆ ಇಲಾಖೆ ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸಿದ್ದಾರೆ.

ಪೊಲೀಸ್ ಬಂದೋಬಸ್ತ್: ಜಿಲ್ಲೆಯಲ್ಲಿ ಶಾಂತಿಯುತ ಹಬ್ಬ ಆಚರಣೆಗೆ ಪೊಲೀಸ್ ಇಲಾಖೆ ಕ್ರಮ ವಹಿಸಿದೆ. 4 ಕೆಎಸ್‌ಆರ್‌ಪಿ, 8 ಡಿಎಆರ್, 800 ಮಂದಿ ಪೊಲೀಸರು, 539 ಗೃಹರಕ್ಷಕ ದಳ ಸಿಬ್ಬಂದಿ, 1 ಕ್ಯೂಆರ್‌ಟಿ ತಂಡ ಕಾರ್ಯ ನಿರ್ವಹಿಸಲು ಸಜ್ಜಾಗಿದೆ. ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪಾಲಿಕೆಯ ಪರಿಸರ ಇಂಜಿನಿಯರ್, ಆರೋಗ್ಯ ನಿರೀಕ್ಷಕರು ಒಳಗೊಂಡಂತೆ 4 ತಂಡಗಳಲ್ಲಿ ಒಟ್ಟು 17 ಜನ ಸಿಬ್ಬಂದಿ ಗಣೇಶ ಉತ್ಸವ ನಿರ್ವಹಣೆ ಮಾಡಲಿದ್ದಾರೆ. ಗಣೇಶ ವಿಸರ್ಜನೆಗೆ 30 ಟ್ರಾೃಕ್ಟರ್ ವ್ಯವಸ್ಥೆ ಮಾಡಲಾಗಿದೆ. ಹೆಚ್ಚುವರಿ ಎರಡು ಟ್ರಾೃಕ್ಟರ್ ಮೀಸಲಿರಿಸಲಾಗಿದೆ. ವಿಸರ್ಜನಾ ಮಾರ್ಗಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಸಂಘ ಸಂಸ್ಥೆಗಳಿಗೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿದೆ.

ಎಲ್ಲೆಲ್ಲಿ ಏನು ವಿಶೇಷ: ಹಿಂದು ಮಹಾಗಣಪತಿ ಟ್ರಸ್ಟ್, ನಗರದ ಹೈಸ್ಕೂಲ್ ಮೈದಾನದಲ್ಲಿ ನಿರ್ಮಿಸಿರುವ ಧರ್ಮಸ್ಥಳದ ಮಂಜುನಾಥಸ್ವಾಮಿ ದೇಗುಲದ ಆಕರ್ಷಕ ಮಹಾಮಂಟಪ ಭಕ್ತರ ದರ್ಶನಕ್ಕೆ ಸಿದ್ಧವಾಗಿದೆ. ಕೊಲ್ಕತಾದ ಕಲಾವಿದರು ಈ ಮಾದರಿ ನಿರ್ಮಿಸಲು ಒಂದೂವರೆ ತಿಂಗಳ ಪರಿಶ್ರಮ ಹಾಕಿದ್ದಾರೆ. ಇದಕ್ಕೆ ಸುಮಾರು 50 ಲಕ್ಷ ರೂ. ವೆಚ್ಚವಾಗಿದೆ.

45 ಅಡಿ ಎತ್ತರ, 170 ಅಡಿ ಅಗಲ ಹಾಗೂ 130 ಅಡಿ ಉದ್ದದ ವಿಸ್ತೀರ್ಣದಲ್ಲಿ ಈ ಮಂಟಪದಲ್ಲಿ ಮಂಜುನಾಥ ಹಾಗೂ ಗಣೇಶ ಮೂರ್ತಿ ಕಾಣಬಹುದು. ಮಂಜುನಾಥ ಸ್ವಾಮಿಯ ರೂಪಕ ಪ್ರದರ್ಶನವಿದೆ. ಸೆ.20ರ ವರೆಗೆ ಸಾರ್ವಜನಿಕರಿಗೆ ಪ್ರವೇಶವಿದೆ.

ಷಣ್ಮುಖನ ಅವತಾರ: ವಿನೋಬನಗರದ 2ನೇ ಮುಖ್ಯರಸ್ತೆಯ ಶ್ರೀ ವೀರವರಸಿದ್ಧಿ ವಿನಾಯಕ ಸೇವಾ ಸಮಿತಿಯಿಂದ ಈ ಬಾರಿ ನವಿಲನ್ನೇರಿದ ಷಣ್ಮುಖನ ಅವತಾರದಲ್ಲಿ ಗಣೇಶ ಪ್ರತಿಷ್ಠಾಪನೆಯಾಗಲಿದ್ದಾನೆ. ಸೆ.9ರ ವರೆಗೆ ನಿತ್ಯ ಸಂಜೆ ರಾಮಾಯಣದ ದೃಶ್ಯಾವಳಿ ಪ್ರದರ್ಶನ ನಡೆಯಲಿದೆ.

ನವಿಲುಗರಿಗಳ ಬೆನಕ: ಹಿಂದೂ ಯುವಶಕ್ತಿ ಸಂಘ, ತೊಗಟವೀರ ಸಮುದಾಯ ಭವನದಲ್ಲಿ 5,001 ನವಿಲುಗರಿಗಳನ್ನು ಬಳಸಿ ವಿಶೇಷ ಬೆನಕನನ್ನು ನಿರ್ಮಿಸಿದೆ. 13 ಅಡಿ ಎತ್ತರ, ಐದಡಿ ಅಗಲದ ಗಣಪತಿ ಇದಾಗಿದೆ.

ಮಣ್ಣಿನ ಮೂರ್ತಿಗೆ ಕೊಲ್ಕತಾ ಕಲಾವಿದ ಸಂಜಿತ್ ರೂಪ ನೀಡಿದ್ದು, ಸಮಿತಿ ಕಲಾವಿದರು ಕೈ ಜೋಡಿಸಿದ್ದಾರೆ. ಸೆ.11ರ ವರೆಗೆ ವೀಕ್ಷಣೆಗೆ ಅವಕಾಶವಿದೆ.

ಪೇಪರ್ ಗಣಪತಿ: ನಿಟುವಳ್ಳಿಯ ಶ್ರೀ ಸಿದ್ಧಗಂಗಾ ಶಾಲೆಯಲ್ಲಿ 10.5 ಅಡಿ ಎತ್ತರದ ಪರಿಸರಸ್ನೇಹಿ ಗಣಪತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. 30 ಕಿಲೋ ದಿನಪತ್ರಿಕೆ, 20 ಕಿಲೋ ಮೈದಾ ಗಮ್, 15 ಕೆಜಿ ರಟ್ಟನ್ನು ಬಳಸಿ, ಕಾರ್ಬನ್ ಪೌಡರ್‌ನಿಂದ ಪೇಂಟ್ ಮಾಡಿದ ಪೇಪರ್ ಗಣಪತಿ ಇದಾಗಿದೆ.

ಪ್ರೌಢಶಾಲಾ ಹಾಗೂ ಪಿಯು ಕಾಲೇಜು ವಿದ್ಯಾರ್ಥಿಗಳು ಕಳೆದೊಂದು ವಾರದಿಂದ ಸಂಸ್ಥೆ ನಿರ್ದೇಶಕ ಜಯಂತ್ ಅವರ ಮಾರ್ಗದರ್ಶನದಲ್ಲಿ ತಯಾರಿಸಿದ್ದಾರೆ. ನಾಳೆ ಗಾಂಧಿವೃತ್ತದಿಂದ ಮೆರವಣಿಗೆ ನಡೆಸಿ ಪ್ರತಿಷ್ಠಾಪಿಸಲಾಗುತ್ತಿದೆ. ಗಣಪನನ್ನು ನೋಡಲು ಸೆ. 22ರವರೆಗೆ ಅವಕಾಶವಿದೆ.

ಗ್ರಾಮೀಣ ಕ್ರೀಡೆಗಳ ಗಜಪತಿ: ಜಿಲ್ಲಾ ಕ್ರೀಡಾಂಗಣದಲ್ಲಿ ಒಂದೂವರೆ ಅಡಿ ಎತ್ತರದ 13 ಗಣೇಶ ಮೂರ್ತಿಗಳು ಕುಸ್ತಿ, ಖೋಖೋ ಹಾಗೂ ಕಬಡ್ಡಿ ಮೊದಲಾದ ಗ್ರಾಮೀಣ ಕ್ರೀಡೆಗಳ ಮಾದರಿಯಲ್ಲಿ ಕಂಗೊಳಿಸಲಿವೆ. ನವಭಾರತ ವ್ನಿೇಶ್ವರ ಸಂಘ ಹಾಗೂ ಜಿಲ್ಲಾ ಕ್ರೀಡಾಪಟುಗಳು ಸಂಘದ ಸಹಯೋಗದಲ್ಲಿ ಪ್ರದರ್ಶನ ಆಯೋಜನೆಗೊಂಡಿದ್ದು, ಸೆ.6ರವರೆಗೆ ಪ್ರದರ್ಶಿಸಬಹುದು.

ಪ್ರವಾಸಿ ತಾಣಗಳ ಫಲಕ: ಶ್ರೀ ಗುರು ದ್ರೋಣ ಕ್ರೀಡಾ ಸಮಿತಿ ಆಶ್ರಯದಲ್ಲಿ ವಿನಾಯಕ ಗೆಳೆಯರ ಬಳಗದಿಂದ ಭಗತ್‌ಸಿಂಗ್ ನಗರದ ಆಟೋ ನಿಲ್ದಾಣದ ಬಳಿ ಬಂಗಾರ ವರ್ಣದ ಮಂಟಪದಲ್ಲಿ ಹಂಸಾರೂಢ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿದೆ. ಕರ್ನಾಟಕದ 30 ಜಿಲ್ಲೆಗಳ ಪ್ರಮುಖ ಪ್ರವಾಸಿ ತಾಣಗಳ ಮಾಹಿತಿ ಒಳಗೊಂಡ ಚಿತ್ರ ಫಲಕಗಳನ್ನು ಪ್ರದರ್ಶಿಸಲಾಗಿದೆ.

ಮಕ್ಕಳಿಂದ ನೇಗಿಲಯೋಗಿ ನಾಟಕ: ಮಾರ್ಕಂಡೇಶ್ವರ ನೇಕಾರ ಯುವಕರ ಸಂಘದಿಂದ ಎಸ್‌ಕೆಪಿ ರಸ್ತೆಯ ಮಾರ್ಕಂಡೇಶ್ವರ ಕಲ್ಯಾಣ ಮಂಟಪದಲ್ಲಿ ಈ ಬಾರಿಯ ಗಣೇಶೋತ್ಸವ ಅಂಗವಾಗಿ ಶಾಲಾ ಮಕ್ಕಳು ರೈತರ ಸಂಕಷ್ಟ ಕುರಿತಾದ ನೇಗಿಲಯೋಗಿ ನಾಟಕ ಪ್ರದರ್ಶನ ನೀಡುವರು. ಸೆ.2ರಿಂದ ಸೆ.6ರ ವರೆಗೆ ನಿತ್ಯ ಸಂಜೆ 5.30ರಿಂದ ರಾತ್ರಿ 9ರ ವರೆಗೆ ವೀಕ್ಷಿಸಬಹುದು.

ಪಿ.ಜೆ.ಬಡಾವಣೆಯ ಪ್ರಿನ್ಸ್ ವಿನಾಯಕ ಗ್ರೂಪ್ ಈ ಬಾರಿಯೂ ಗಣೇಶೋತ್ಸವ ನಡೆಸುತ್ತಿದೆ. ಇತ್ತೀಚೆಗೆ ರಾಜಕೀಯ ವಲಯದಲ್ಲಿ ಸುದ್ದಿಯಾಗಿದ್ದ ಅನರ್ಹ ಶಾಸಕರ ಚಿತ್ರಣದ ಮೂರ್ತಿ ಮಾದರಿಗಳನ್ನು ಪ್ರದರ್ಶಿಸಲಾಗುತ್ತಿದೆ.

ಭಕ್ತ ಸಿರಿಯಾಳ ರೂಪಕ: ಪಿ.ಜೆ.ಬಡಾವಣೆಯ 6ನೇ ಮುಖ್ಯರಸ್ತೆಯಲ್ಲಿ ಹಿಂದೂ ಯುವಶಕ್ತಿ ಸಂಘಟನೆಯಿಂದ ಹಮ್ಮಿಕೊಂಡ ವಿನಾಯಕೋತ್ಸವ ಅಂಗವಾಗಿ ಭಕ್ತಸಿರಿಯಾಳ ರೂಪಕ ಪ್ರದರ್ಶನವನ್ನು ಸೆ.11ರ ವರೆಗೆ ವೀಕ್ಷಿಸಬಹುದು.

ಸ್ತಸ್ವಿಕ್ ಗ್ರೂಪ್‌ನಿಂದ 3ಡಿ ವರ್ಟಿಕಲ್ ಷೋ: ಮಂಡಿಪೇಟೆಯ ಕೋದಂಡರಾಮ ದೇವಸ್ಥಾನದಲ್ಲಿ ಸ್ತಸ್ವಿಕ್ ಗ್ರೂಪ್‌ನ ಗಣೇಶೋತ್ಸವದಲ್ಲಿ 3ಡಿ ವರ್ಟಿಕಲ್ (ಹಾಲೋಗ್ರಾಂ ಷೋ) ಪ್ರದರ್ಶನ ನಡೆಯಲಿದೆ. ಇದು ಕರ್ನಾಟಕದಲ್ಲೇ ಮೊದಲ ಪ್ರಯೋಗ ಎನ್ನಲಾಗುತ್ತಿದೆ.

ಆಂಜನೇಯ ಸ್ವಾಮಿಯ ಲಂಕಾ ದಹನದವರೆಗಿನ ಕಥನ, ಕಾರ್ಟೂನ್‌ಗಳು, ಕರ್ನಾಟಕದ ಐತಿಹಾಸಿಕ ಸ್ಮಾರಕಗಳು, ಪರಿಸರ ನಾಶದ ದುಷ್ಪರಿಣಾಮವನ್ನು ತಲಾ 16 ನಿಮಿಷದ ಚಿತ್ರಣವನ್ನು 3ಡಿ ಎಫೆಕ್ಟ್‌ನಲ್ಲಿ ಕಾಣಬಹುದು.

ಸೆ. 2ರಿಂದ ಸೆ. 11ರ ವರೆಗೆ ನಿತ್ಯ ಸಂಜೆ 5.30ರಿಂದ ರಾತ್ರಿ 10.30ರ ವರೆಗೆ ಈ ಪ್ರದರ್ಶನ ಇರಲಿದೆ. ಮಧ್ಯಾಹ್ನದ ವೇಳೆ ಶಾಲಾ ಮಕ್ಕಳಿಗೆ ವಿಶೇಷ ಪ್ರದರ್ಶನ ಏರ್ಪಡಿಸಲಾಗುತ್ತದೆ. ಮಾಹಿತಿಗೆ ಕೆ.ಆರ್.ಆದಿತ್ಯ-ಮೊ.ಸಂ. 97421-58555 ಸಂಪರ್ಕಿಸಬಹುದಾಗಿದೆ.

ವಾಸವಿ ಸಂಘದಿಂದ ಷಾಡೋ ಪ್ಲೇ: ಎಸ್‌ಕೆಪಿ ರಸ್ತೆಯ ವಾಸವಿ ಯುವಜನ ಸಂಘದಿಂದ ಗಣೇಶೋತ್ಸವದಲ್ಲಿ ಈ ಬಾರಿ ಷಾಡೋ ಪ್ಲೇ (ನೆರಳಿನ ಚಿತ್ರ ಪ್ರದರ್ಶನ) ವಿಶೇಷ ಆಕರ್ಷಣೆ ಇದೆ. ಸುನಂದಮ್ಮ ಕಾಸಲ್ ವಿಠ್ಠಲ್ ಕಲ್ಯಾಣಮಂದಿರದಲ್ಲಿ ಬೆಂಗಳೂರಿನ ಖ್ಯಾತ ಕಲಾವಿದ ಪ್ರಹ್ಲಾದ್ ಆಚಾರ್ ನಿತ್ಯ ಸಂಜೆ 5ರಿಂದ 9ರ ವರೆಗೆ ಈ ಪ್ರದರ್ಶನ ನಡೆಸಿಕೊಡುವರು. ಸ್ವಾತಂತ್ರೃ ಹೋರಾಟ, ಪುಣ್ಯಕೋಟಿ ಕಥೆ, ಪೌರಾಣಿಕ ಪ್ರಸಂಗಗಳನ್ನು ಇಲ್ಲಿ ಕಟ್ಟಿಕೊಡಲಾಗುವುದು. ಸೆ.3ರಿಂದ ಸೆ.7ರ ವರೆಗೆ ಇದನ್ನು ವೀಕ್ಷಿಸಬಹುದು ಎಂದು ಅಧ್ಯಕ್ಷ ಆರ್.ಎನ್.ಅಜಿತ್ ತಿಳಿಸಿದ್ದಾರೆ.

ವಿಡಿಯೋ ನ್ಯೂಸ್

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...

VIDEO| ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ;...

ಮಂಗಳೂರು: ಬಜಪೆ ಬಳಿಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶ್ರಾಂತಿ ಜಾಗದಲ್ಲಿ ಅನುಮಾನಾಸ್ಪದ ಬ್ಯಾಗ್​ನಲ್ಲಿ ಸಜೀವ ಬಾಂಬ್​ ಪತ್ತೆಯಾಗಿದೆ. ಏರ್ ಪೋರ್ಟ್ ಹೊರಭಾಗದಲ್ಲಿರುವ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಬ್ಯಾಗ್​ ಪತ್ತೆಯಾಗಿದ್ದು, ಬೆಳಗ್ಗೆ 10.30ರಿಂದ ಅದು...

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...