ದಾವಣಗೆರೆ: ಗಾಂಧಿನಗರ, ಎಸ್‌ಒಜಿ ಕಾಲನಿ, ಶಾಮನೂರು ಸೇರಿ ಪಾಲಿಕೆ ವ್ಯಾಪ್ತಿಯ ಎಲ್ಲ ರುದ್ರಭೂಮಿಗಳಲ್ಲಿ ಸಾರ್ವಜನಿಕರಿಂದ ಹಣ ಪಡೆಯದೆ ಉಚಿತ ಶವಸಂಸ್ಕಾರ ನಡೆಸಬೇಕೆಂಬ ಮೇಯರ್ ಕೆ.ಚಮನ್‌ಸಾಬ್ ನಿರ್ದೇಶನಕ್ಕೆ ಪಾಲಿಕೆ ಸಾಮಾನ್ಯ ಸಭೆ ಅಸ್ತು ಎಂದಿತು.
ಗಾಂಧಿನಗರ ರುದ್ರಭೂಮಿಯಲ್ಲಿ ಗುಣಿ ತೆಗೆಯಲು ಅಲ್ಲಿನ ಸಿಬ್ಬಂದಿ 4ರಿಂದ 5 ಸಾವಿರ ರೂ. ಹಣ ಕೇಳುತ್ತಾರೆ. ಅಂತ್ಯಸಂಸ್ಕಾರ ಮಾಡಲು ಬಂದವರು ಹಣ ತಂದಿರುವುದಿಲ್ಲ. ಹಣ ಕೇಳುವುದು ಸರಿಯಲ್ಲ ಎಂದು ಸದಸ್ಯರು ದೂರಿದರು.
ನಿರ್ದಿಷ್ಟ ಶುಲ್ಕ ನಿಗದಿಗೊಳಿಸಬೇಕು ಎಂದು ಕೆಲವರು ಹೇಳಿದರು. ಸದಸ್ಯೆಯೊಬ್ಬರು ಮಾತನಾಡಿ ಕನಿಷ್ಠ 2 ಸಾವಿರ ರೂ. ಶುಲ್ಕ ನಿಗದಿಯಾದಲ್ಲಿ ಸಾರ್ವಜನಿಕರಿಗೂ ಅನುಕೂಲ. ಅದರಲ್ಲಿ ಸ್ಮಶಾನ ಸಿಬ್ಬಂದಿಗೆ ವೇತನ ನೀಡಲು ಅನುಕೂಲವಾಗಲಿದೆ ಎಂದು ಹೇಳಿದರು.
ವಿನಾಯಕ ಪೈಲ್ವಾನ್ ಮಾತನಾಡಿ ನಾನು ಮೇಯರ್ ಆಗಿದಾನಿಂದಲೂ ನಾಲ್ಕೈದು ಬಾರಿ ಭೇಟಿ ನೀಡಿದ್ದೇನೆ. ಅಲ್ಲಿನ ವ್ಯವಸ್ಥೆ ಸುಧಾರಿಸಿಲ್ಲ. ಸ್ಮಶಾನದಲ್ಲಿ ಕೆಲಸ ಮಾಡುವವರನ್ನೇ ನಿಯೋಜನೆ ಮಾಡಿ ಪಾಲಿಕೆಯಿಂದಲೇ ಅವರಿಗೆ ವೇತನ ನೀಡಬೇಕು ಎಂದರು.
ರುದ್ರಭೂಮಿ ಕೆಲಸಕ್ಕೆ ಈ ಹಿಂದೆ ನಿಯೋಜಿಸಿದ್ದ 12 ಜನ ಸಿಬ್ಬಂದಿಗೆ ಕರೊನಾ ವೇಳೆ ಪಾರ್ಕ್ ನಿರ್ವಹಣೆ ವಹಿಸಲಾಗಿತ್ತು. ಈಗ ಅವರು ಇಲ್ಲಿ ಕೆಲಸ ಮಾಡಲು ಆಸಕ್ತಿ ವಹಿಸಿದ್ದಾರೆ ಎಂದು ಆಯುಕ್ತರು ಹೇಳಿದರು.
ಸ್ಮಶಾನದಲ್ಲಿ ಕೆಲಸ ನಿರ್ವಹಿಸುವುದು ಕಷ್ಟಕರ. ಹೀಗಾಗಿ ಅಲ್ಲಿನ ಸಿಬ್ಬಂದಿಯನ್ನೇ ಬಳಸಿಕೊಂಡು ಹೆಚ್ಚುವರಿ ಜನರನ್ನು ಗುತ್ತಿಗೆ ಆಧಾರದಡಿ ಕೆಲಸಕ್ಕೆ ನಿಯೋಜಿಸಬೇಕು. ಸಾರ್ವಜನಿಕರಿಂದ ಶುಲ್ಕರಹಿತವಾಗಿ ಅಂತ್ಯಸಂಸ್ಕಾರಕ್ಕೆ ಅವಕಾಶ ಕಲ್ಪಿಸಬೇಕೆಂದು ಮೇಯರ್ ರೂಲಿಂಗ್ ನೀಡಿದರು.
ನೈರ್ಮಲ್ಯ ಇರುವ ಕೆರೆ ಸುತ್ತಮುತ್ತ ನೀವು, ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳು ಸ್ವಚ್ಛತೆ ಮಾಡುತ್ತೀರಿ. ಗಾಂಧಿನಗರ ರುದ್ರಭೂಮಿ ಹಾಳಾಗಿದೆ. ಅಲ್ಲಿನ ನೈರ್ಮಲ್ಯ ಕಾಪಾಡಲು ಕಾರ್ಯಕ್ರಮ ರೂಪಿಸಿ ಎಂದು ಎ.ನಾಗರಾಜ್ ಆಯುಕ್ತರಿಗೆ ಹೇಳಿದರು.
ಜಿಲೇಬಿ ಅಂಡರ್‌ಪಾಸ್!
ಬಿಜೆಪಿ ಸರ್ಕಾರದ ಕೆಲಸಕ್ಕೆ ಅಶೋಕ ಥಿಯೇಟರ್ ಬಳಿಕ ರೈಲ್ವೆ ಅಂಡರ್‌ಪಾಸ್ ಒಂದೇ ಸಾಕ್ಷಿ. ಅಂತಹ ಜಿಲೇಬಿ ಅಂಡರ್‌ಪಾಸ್ ದೇಶದಲ್ಲೇ ಹೆಸರಾಗಿದೆ ಎಂದು ಮೇಯರ್ ಚಮನ್‌ಸಾಬ್ ಕಿಚಾಯಿಸಿದರು.
ಈ ಅಂಡರ್‌ಪಾಸ್‌ನಲ್ಲಿ ವಾಹನಗಳು ಓಡಾಡದ ಸ್ಥಿತಿ ಇದೆ. ಈ ಕಾಮಗಾರಿ ವಹಿಸಿಕೊಂಡ ಇಂಜಿನಿಯರ್ ಹಾಗೂ ನಿರ್ಮಿಸಿದ ರಾಜಕಾರಣಿ ಇಬ್ಬರ ಪ್ರತಿಮೆಗಳನ್ನು ಅಲ್ಲಿ ಸ್ಥಾಪಿಸಬೇಕು ಎಂದು ಎ.ನಾಗರಾಜ್ ವ್ಯಂಗ್ಯವಾಡಿದರು.
ಇದು ದ್ವಿಚಕ್ರ, ತ್ರಿಚಕ್ರ ವಾಹನಗಳು ಹಾಗೂ ಪಾದಚಾರಿಗಳಿಗಾಗಿ ಮಾಡಿದ ಅಂಡರ್‌ಪಾಸ್. ಇನ್ನೊಂದೆಡೆ ಮತ್ತೊಂದು ಅಂಡರ್‌ಪಾಸ್, ಪರ್ಯಾಯ ರಸ್ತೆ ಮಾಡುವುದು ಬಾಕಿ ಇದೆ ಎಂದು ಎಸ್‌ಟಿ ವೀರೇಶ್ ಹೇಳಿದರು.
ನೀವು ಮಾಡಿದ್ದು ಒಂದೇ ಸಾಕು. ಮತ್ತೊಂದನ್ನು ಮಾಡುವುದು ಬೇಡ. ಜಿಲ್ಲಾ ಸಚಿವರು ಇದಕ್ಕೆ ಹೊಸ ಪ್ಲಾೃನ್ ಮಾಡಿದ್ದಾರೆ ಎಂದು ಆಡಳಿತ ಪಕ್ಷದ ಸದಸ್ಯರು ಪ್ರತಿಕ್ರಿಯಿಸಿದರು.
ಕೆಎಸ್‌ಆರ್‌ಟಿಸಿ ಬಳಿ ಮೊದಲು ನೀರು ನಿಲ್ಲುತ್ತಿತ್ತು. ಸಚಿವರ ಕ್ರಮದಿಂದಾಗಿ ಈಗ ನೀರು ನಿಲ್ಲದಂತಾಗಿದೆ. ಇದರ ಕ್ರೆಡಿಟ್ ಸಚಿವರಿಗೆ ಸಲ್ಲಬೇಕು ಎಂದು ಎ.ನಾಗರಾಜ್ ಹೇಳಿದರು. ಈ ಕೆಲಸ ಮಾಡಿದ್ದು ನಾನು ಎಂದು ವೀರೇಶ್ ಸಮರ್ಥಿಸಿಕೊಂಡರು.
ಜನರಿಗಾಗಿ ಹೆಲ್ಪ್ ಡೆಸ್ಕ್
ನಗರಪಾಲಿಕೆಯಲ್ಲಿ ವಿವಿಧ ಕೆಲಸಗಳಿಗಾಗಿ ಬರುವ ಜನರಿಗೆ ಮಾರ್ಗದರ್ಶನ ನೀಡಿ, ಆಯಾ ವಿಭಾಗಕ್ಕೆ ಕರದೊಯ್ಯಲು ಹೆಲ್ಪ್ ಡೆಸ್ಕ್ ಆರಂಭಿಸಲಾಗುವುದು. ಇದಕ್ಕೆ ಇಬ್ಬರು ಗುಮಾಸ್ತರನ್ನು ನಿಯೋಜಿಸಲಾಗುವುದು ಎಂದು ಮೇಯರ್ ಹೇಳಿದರು.
ಇದರ ಜತೆಯಲ್ಲೇ ಮೇಯರ್ ಮತ್ತು ಆಯುಕ್ತರು ಸೇರಿ ಸಾರ್ವಜನಿಕರು ಅಹವಾಲು ಸ್ವೀಕಾರಕ್ಕೆ ಸಮಯಕ್ಕೆ ನಿಗದಿಪಡಿಸಿಕೊಳ್ಳಬೇಕೆಂದು ವೀರೇಶ್ ಆಗ್ರಹಿಸಿದರು.
ರಸ್ತೆಗಳ ಗುಂಡಿ ಮುಚ್ಚಲು ಕ್ರಮ
ಸದಸ್ಯರ ಆರೋಪಕ್ಕೆ ಪ್ರತಿಕ್ರಿಯಿಸಿದ ಆಯುಕ್ತು ಜಲಸಿರಿ ಮತ್ತು ಮಳೆ ಹಿನ್ನೆಲೆಯಲ್ಲಿ ನಗರದಲ್ಲಿ ಅನೇಕ ಸ್ತೆಗಳಲ್ಲಿ ಗುಂಡಿ ಬಿದ್ದಿದೆ. ಗುಂಡಿ ಮುಚ್ಚುವ ಕೆಲಸ ಪೂರ್ಣಗೊಂಡಿಲ್ಲ. ವಲಯವಾರು ಗುಂಡಿಗಳನ್ನು ಮುಚ್ಚಲು ಶೀಘ್ರವೇ ಟೆಂಡರ್ ಕರೆಯಲಾಗಿದೆ. ಎಲ್ಲ ಡ್ರೈನ್‌ಗಳ ಹೂಳೆತ್ತಿದ್ದರಿಂದ ದಾವಣಗೆರೆಯಲ್ಲಿ ಮಳೆಯಾದರೂ ಯಾವುದೇ ಪ್ರವಾಹ ಕಂಡುಬಂದಿಲ್ಲ ಎಂದು ಸ್ಪಷ್ಟನೆ ನೀಡಿದರು.
ರುದ್ರಭೂಮಿಗಳಲ್ಲಿನ್ನು ಉಚಿತ ಶವಸಂಸ್ಕಾರ ಮೇಯರ್ ನಿರ್ದೇಶನ
ರಾತ್ರಿ 12 ಗಂಟೆಯ ಬಳಿಕ ಮಲಗುವ ಅಭ್ಯಾಸವಿದೆಯೇ? ಈ ಡೇಂಜರಸ್ ಕಾಯಿಲೆ ಬರಬಹುದು ಎಚ್ಚರ | Late Sleeping
Late Sleeping : ಒಬ್ಬ ವ್ಯಕ್ತಿಯು ಆರೋಗ್ಯವಾಗಿರಲು ಪ್ರತಿದಿನ ರಾತ್ರಿ ಸರಿಯಾದ ಸಮಯಕ್ಕೆ ನಿದ್ದೆ ಮಾಡುವುದು…
Skin Care | ಚಳಿಗಾಲದಲ್ಲಿ ತ್ವಚೆ ಆರೈಕೆಗಾಗಿ ಅಲೋವೆರಾ ಫೇಸ್ಪ್ಯಾಕ್; ನೀವೊಮ್ಮೆ ಟ್ರೈ ಮಾಡಿ
ಚಳಿಗಾಲ ಆರಂಭವಾಯಿತು ಎಂದರೆ ಸಾಕು ತ್ವಚೆಯಲ್ಲಿ ಸಣ್ಣದಾಗಿ ಬಿರುಕು ಕಾಣಿಸಿಕೊಳ್ಳುವುದನ್ನು ನಾವು ನೊಡಬಹುದು. ಇನ್ನು ಮುಖದ…
15 ನಿಮಿಷದಲ್ಲಿ ತಯಾರಿಸಿ ಟೊಮೆಟೊ ಸಾಸ್; ಇಲ್ಲಿದೆ ನೋಡಿ ಮಾಡುವ ಸಿಂಪಲ್ Recipe
ಕೆಲವು ಪದಾರ್ಥಗಳು ಅಂಗಡಿಯಿಂದ ತಂದರೆ ಮಾತ್ರ ರುಚಿಯಾಗಿರುತ್ತದೆ ಎಂದು ಹೇಳಲಾಗುತ್ತದೆ. ಅದರಲ್ಲಿ ಟೊಮೆಟೊ ಸಾಸ್ ಕೂಡ…