ದಾವಣಗೆರೆ: ಯಾವುದೇ ವಿಶ್ವವಿದ್ಯಾಲಯವು ಅದರ ಕ್ರಮಾಂಕಗಳು, ಜನಪ್ರಿಯತೆಗಿಂತಲೂ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು ಎಂದು ಜಿಎಂ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ. ಎಚ್.ಡಿ. ಮಹೇಶಪ್ಪ ಹೇಳಿದರು.
ನಗರದ ಜಿಎಂ ವಿಶ್ವವಿದ್ಯಾಲಯದ ಕೇಂದ್ರ ಗ್ರಂಥಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಶಿಕ್ಷಣ ಮೇಳ ಉದ್ಘಾಟಿಸಿ ಮಾತನಾಡಿದರು.
ಕ್ರಮಾಂಕಗಳ ಬಗ್ಗೆ ಊಹೆ ಮಾಡುವುದು ಸಹಜ. ಹೀಗಾಗಿ ಅದುವೇ ಮುಖ್ಯ ಅಂಶವಲ್ಲ. ಪರಸ್ಪರ ಜನಪ್ರಿಯತೆ ಇರುವ ಅನಿವಾರ್ಯತೆಯಿಲ್ಲ. ಈ ಎಲ್ಲದಕ್ಕೂ ಮಿಗಿಲಾಗಿ, ಗುಣಮಟ್ಟವೇ ಪ್ರಧಾನವಾಗಿ ಇರಬೇಕು ಎಂದು ತಿಳಿಸಿದರು.
ಕ್ಯಾಂಸ್‌ನಲ್ಲಿನ ಆರಾಮದಾಯಕ ಹಾಗೂ ಸುರಕ್ಷತೆಯೇ ಉನ್ನತ ಅಧ್ಯಯನಕ್ಕೆ ಅನುಕೂಲ. ಇದು ನಿಮ್ಮ ಶೈಕ್ಷಣಿಕ ಜೀವನದಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ ಎಂದ ಅವರು, ವಿದೇಶದಲ್ಲಿನ ಉನ್ನತ ಶಿಕ್ಷಣದ ಬಗ್ಗೆ ತಿಳಿಯುವ ಕುತೂಹಲ ಮತ್ತು ಸೇರ ಬಯಸುವ ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ಈ ಶಿಕ್ಷಣ ಮೇಳವು ಸಹಕಾರಿಯಾಗಲಿದೆ ಎಂದು ಹೇಳಿದರು.
ಕುಲ ಸಚಿವ ಡಾ. ಬಿ.ಎಸ್. ಸುನಿಲ್ ಕುಮಾರ್ ಮಾತನಾಡಿ ಮೇಳದಲ್ಲಿ ಸಿಗುವ ಮಾಹಿತಿಯು ಆತ್ಮವಿಶ್ವಾಸ ನೀಡಲಿದೆ. ನಿರ್ಧಾರಗಳನ್ನು ಸೂಕ್ತವಾಗಿ ತೆಗೆದುಕೊಳ್ಳಬಹುದು. ವಿವಿಯಿಂದಲೂ ಸದಾ ಬೆಂಬಲ ದೊರೆಯಲಿದೆ. ನೀವು ತೆಗೆದುಕೊಳ್ಳುವ ಯಾವುದೇ ನಿರ್ಧಾರದ ಕುರಿತು ಗೊಂದಲ ಬೇಕಿಲ್ಲ ಎಂದು ತಿಳಿಸಿದರು.
ಜಿಎಂ ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಡಾ. ಗಿರೀಶ್ ಬೋಳಕಟ್ಟಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಧನಾತ್ಮಕತೆ ತುಂಬಾ ಮುಖ್ಯ. ನಿರ್ಧಾರ ತೆಗೆದುಕೊಳ್ಳುವ ಹಂತದಲ್ಲಿ ವಿಶಾಲ ದೃಷ್ಟಿಕೋನದಿಂದ ಯೋಚಿಸಬೇಕು ಎಂದಾದಲ್ಲಿ ಹೆಚ್ಚಿನ ಅವಕಾಶಗಳು ದೊರೆಯಲಿವೆ. ನಿಮ್ಮ ಯೋಚನೆಗಳ ವಿಧಾನವೂ ಬದಲಾಗುತ್ತದೆ. ಜ್ಞಾನ ಪಡೆಯಲು ದೇಶ ಸುತ್ತು ಕೋಶ ಓದು ಎಂಬ ಹಿರಿಯರ ಮಾತಿದೆ. ಅಂತೆಯೇ ಜ್ಞಾನ ಪಡೆಯಲು ಎಷ್ಟು ಶಿಕ್ಷಣ ಪಡೆದರೂ ಸಾಲದು. ಅದು ನಿರಂತರವಾಗಿರಬೇಕು ಎಂದರು.
ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ ನಡೆದ ಶಿಕ್ಷಣ ಮೇಳದಲ್ಲಿ 500 ಕ್ಕೂ ಹೆಚ್ಚು ನೋಂದಣಿ ಮಾಡಿಸಲಾಯಿತು. ಕಾರ್ಯಕ್ರಮದಲ್ಲಿ ಅರಿಝೋನ ಸ್ಟೇಟ್ ಯೂನಿವರ್ಸಿಟಿ, ಪೇಸ್ ಯೂನಿವರ್ಸಿಟಿ, ಯೂನಿವರ್ಸಿಟಿ ಆಫ್ ಕನೆಕ್ಟಿಕಟ್, ಯೂನಿವರ್ಸಿಟಿ ಆಫ್ ಒರಿಗಾನ್, ಸೈಮನ್ಸ್ ವಿವಿ, ಯೂನಿವರ್ಸಿಟಿ ಆಫ್ ಅಕ್ರೋನ್, ಹಲ್ಟ್ ಯೂನಿವರ್ಸಿಟಿ, ಡ್ರೆಕ್ಸಲ್ ಯೂನಿವರ್ಸಿಟಿ, ಟೆಂಪಲ್ ಯೂನಿವರ್ಸಿಟಿ, ಮೈಮಿ ವಿಶ್ವವಿದ್ಯಾಲಯದ ತಜ್ಞರು ಆಗಮಿಸಿದ್ದರು. ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕ, ಪ್ರವೇಶ ಪರೀಕ್ಷೆ, ವಿದ್ಯಾರ್ಥಿವೇತನ ದ ಬಗ್ಗೆ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಎಜು ಟ್ರಸ್ಟ್ ಸಂಸ್ಥೆಯ ಸಿಇಒ ಅರುಣ್ ಪ್ರಸಾದ್, ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ಸವಿತಾ ಅರುಣ್, ಜಿಎಂಯು ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕ ಟಿ.ಆರ್. ತೇಜಸ್ವಿ ಕಟ್ಟಿಮನಿ ಇದ್ದರು.
ವಿಶ್ವವಿದ್ಯಾಲಯಕ್ಕೆ ಕ್ರಮಾಂಕಕ್ಕಿಂತ ಗುಣಮಟ್ಟ ಮುಖ್ಯ

ಅಪ್ಪಿತಪ್ಪಿಯೂ ಈ ಆಹಾರಗಳನ್ನು ತುಪ್ಪದೊಂದಿಗೆ ಸೇವಿಸಬೇಡಿ; ಉತ್ತಮ ಆರೋಗ್ಯಕ್ಕಾಗಿ ತಿಳಿದುಕೊಳ್ಳಲೇಬೇಕಾದ ಮಾಹಿತಿ | Health Tips
ಭಾರತೀಯ ಪಾಕಪದ್ಧತಿಯಲ್ಲಿ ತುಪ್ಪಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಆಯುರ್ವೇದದಲ್ಲಿ ತುಪ್ಪವು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಆರೋಗ್ಯಕ್ಕೂ…
ಕಾಫಿ ಕುಡಿಯುವಾಗ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ; ನಿಮಗಾಗಿ ಹೆಲ್ತಿ ಮಾಹಿತಿ | Health Tips
ಪ್ರಪಂಚದಾದ್ಯಂತ ಕಾಫಿ ಪ್ರಿಯರನ್ನು ಕಾಣಬಹುದು. ಇಲ್ಲಿಯವರೆಗೆ ಕಾಫಿಯ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿದ್ದು, ಇದು ಅದರ…
ಕಪ್ಪು ದ್ರಾಕ್ಷಿ vs ಹಸಿರು ದ್ರಾಕ್ಷಿ.. ಆರೋಗ್ಯಕ್ಕೆ ಯಾವುದು ಉತ್ತಮ..? grapes
grapes: ದ್ರಾಕ್ಷಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಈ ಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಹಸಿರು…