ನೆರೆ ಸಂತ್ರಸ್ತರಿಗೆ ನೆರವಿನ ಪ್ರವಾಹ

ದಾವಣಗೆರೆ: ಜಿಲ್ಲೆಯ ಜನರು ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ನೆರವು ನೀಡಲು ಹಣ, ಆಹಾರಧಾನ್ಯ, ಹೊಸ ಬಟ್ಟೆ ಸೇರಿ ವಿವಿಧ ವಸ್ತುಗಳನ್ನು ಸಂಗ್ರಹಿಸಿ ಸಂಬಂಧಿತ ತಾಲೂಕು ಆಡಳಿತಕ್ಕೆ ನಿರಂತರವಾಗಿ ನೀಡುತ್ತಿದ್ದಾರೆ.

ದಾವಣಗೆರೆ, ನಗರ ಸೇರಿದಂತೆ ಹೊನ್ನಾಳಿ, ಜಗಳೂರು, ಹರಪನಹಳ್ಳಿ ತಾಲೂಕಿನ ವಿವಿಧ ಗ್ರಾಮಸ್ಥರು ಹಗಲು-ರಾತ್ರಿ ಎನ್ನದೇ ಆಹಾರ ಸಾಮಗ್ರಿ ಸಿದ್ಧತೆ, ದೇಣಿಗೆ ಸಂಗ್ರಹ, ವೈಯಕ್ತಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಈ ಮೂಲಕ ನಿಮ್ಮ ಸಹಾಯಕ್ಕೆ ನಾವಿದ್ದೇವೆ ಭಯಪಡಬೇಡಿ ಎಂದು ಪ್ರವಾಹ ಪೀಡಿತರಿಗೆ ಧೈರ್ಯ ತುಂಬುತ್ತಿದ್ದಾರೆ.

Leave a Reply

Your email address will not be published. Required fields are marked *