25 C
Bangalore
Thursday, November 14, 2019

ದೊಡ್ಡ ಓಬಜ್ಜಿಹಳ್ಳಿಯಲ್ಲೊಂದು ಸುಂದರ ಹೂದೋಟ

Latest News

ಈ ಪುಟ್ಟ ಪಕ್ಷಿಗಳು ಜಗತ್ತಿನ ಅತಿ ಸಣ್ಣ ಹಮ್ಮಿಂಗ್​ ಬರ್ಡ್​ಗಳಾ? ಅಸಲಿ ವಿಷಯ ಬೇರೆನೇ ಇದೆ…ಅಷ್ಟಕ್ಕೂ ಇವು ಏನು ಗೊತ್ತಾ?

ನವದೆಹಲಿ: ಮಾನವನ ಉಗುರಿಗಿಂತಲೂ ಸಣ್ಣ ಗಾತ್ರದ ಎರಡು ಪಕ್ಷಿಗಳ ಫೋಟೋ ಇಂಟರ್​ನೆಟ್​ನಲ್ಲಿ ವೈರಲ್​ ಆಗುತ್ತಿದೆ. ವ್ಯಕ್ತಿಯೋರ್ವನ ಹೆಬ್ಬೆರಳಿನ ಉಗುರಿನ ಮೇಲೆ ಹಾಗೂ ತೋರುಬೆರಳಿನ ಮೇಲೆ ಈ...

ಉಪ ಚುನಾವಣೆಯ 10 ಕ್ಷೇತ್ರಗಳ ಜೆಡಿಎಸ್​ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ನಾಳೆ 4 ಕ್ಷೇತ್ರಗಳ ಅಭ್ಯರ್ಥಿ ಹೆಸರು ಬಹಿರಂಗ

ಬೆಂಗಳೂರು: ಶಾಸಕರ ಅನರ್ಹತೆಯಿಂದ ತೆರವಾಗಿರುವ 17 ಕ್ಷೇತ್ರಗಳ ಉಪ ಚುನಾವಣೆಗೆ ಜೆಡಿಎಸ್​ 10 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಪಟ್ಟಿ ಪ್ರಕಟಿಸಿದೆ. ಪಕ್ಷದ ಕಚೇರಿ...

ನ್ಯಾಯಾಲಯದ ತೀರ್ಪಿಗೂ ಬೆಲೆಕೊಡದ ಪತಿ; ಪತ್ನಿಯನ್ನ ಮನೆಗೆ ಸೇರಿಸಲು ನಕಾರ

ಮಂಡ್ಯ: ವಿಚ್ಛೇದನ ಪಡೆಯಲು ನ್ಯಾಯಾಲಯದ ಮೆಟ್ಟಿಲೇರಿದ್ದ ಪತಿಗೆ ನ್ಯಾಯಾಲಯ ಪತ್ನಿಯನ್ನು ಮನೆಗೆ ಕರೆದುಕೊಂಡು ಹೋಗುವಂತೆ ತೀರ್ಪು ನೀಡಿ 10 ತಿಂಗಳು ಉರುಳಿದ್ದರೂ, ತನ್ನನ್ನು...

ವಿದ್ಯುಕ್ತವಾಗಿ ಬಿಜೆಪಿ ಸೇರಿದ 16 ಅನರ್ಹ ಶಾಸಕರು: ರೋಷನ್​ಬೇಗ್​ಗೆ ಇನ್ನೂ ಸಿಕ್ಕಿಲ್ಲ ಗ್ರೀನ್​ ಸಿಗ್ನಲ್​

ಬೆಂಗಳೂರು: ರಾಜ್ಯ ಬಿಜೆಪಿ ಕಚೇರಿಯಲ್ಲಿ 16 ಅನರ್ಹ ಶಾಸಕರು ಗುರುವಾರ ವಿದ್ಯುಕ್ತವಾಗಿ ಬಿಜೆಪಿ ಸೇರಿದರು. ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ...

ಮಧುಮೇಹ ನಿರ್ವಹಣೆ ಸುಲಭ: ನಿಯಂತ್ರಣ ತಪ್ಪಿದರೆ ಹುಟ್ಟುವ ಮಗುವಿಗೂ ಮಾರಕ

ಗರ್ಭಧಾರಣೆ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಮಧುಮೇಹವನ್ನು ನಿಯಂತ್ರಿಸಿಕೊಳ್ಳದಿದ್ದರೆ ತಾಯಿಗೆ ಮಾತ್ರವಲ್ಲ, ಹುಟ್ಟುವ ಮಗುವಿಗೂ ಅಪಾಯವಾಗಲಿದೆ. ಸಹಜ ಹೆರಿಗೆ ಕಷ್ಟವಾಗಲಿದ್ದು,...

ಡಿ.ಎಂ. ಮಹೇಶ್, ದಾವಣಗೆರೆ, 

ಅದೊಂದು ಹೂ ದೋಟ. ಬಣ್ಣ ಬಣ್ಣದ ಹೂಗಳ ಆಕರ್ಷಣೆ. ಅಲ್ಲಿ ನಿಂತರೆ ಕಣ್ಣಿಗೆ ಹಬ್ಬ. ಮನಸ್ಸು ಆ ಹೂಗಳ ರಾಶಿಯಲ್ಲಿ ತಾನೂ ಒಂದಾಗಿ ನಳ ನಳಿಸಲಾರಂಭಿಸುತ್ತದೆ. ಎಷ್ಟು ನೋಡಿದರೂ ಸಾಕೆನಿಸದಷ್ಟು ಸೆಳೆತ…

ಇದು ತಾಲೂಕಿನ ದೊಡ್ಡ ಓಬಜ್ಜಿಹಳ್ಳಿಯ ರೈತ ಪಿ. ಸೂರ್ಯನಾರಾಯಣ ಅವರ ಹೂದೋಟ. ಮದುವೆ ಮತ್ತಿತರ ಶುಭ ಸಮಾರಂಭಗಳಲ್ಲಿ ಮಾಡುವ ಡೆಕೋರೇಷನ್‌ನಲ್ಲಿ ಬಳಸುವ ಜರ್ಬೇರಾ, ಕಾರ್ನೇಸಿಯಾ ಹೂಗಳು ಅಲ್ಲಿ ನಮ್ಮನ್ನು ಸ್ವಾಗತಿಸುತ್ತವೆ. ಭತ್ತ ಬೆಳೆಯುತ್ತಿದ್ದ ಸೂರ್ಯನಾರಾಯಣ ವರ್ಷದಿಂದೀಚೆಗೆ ಪುಷ್ಪ ಕೃಷಿಯತ್ತ ಮುಖ ಮಾಡಿದ್ದಾರೆ. ತಮ್ಮ ಹಾಗೂ ಸೊಸೆ ಹೆಸರಿನ ಎರಡೆಕರೆ ಜಮೀನನ್ನು ಸುಂದರ ಹೂದೋಟವಾಗಿ ಮಾರ್ಪಡಿಸಿದ್ದಾರೆ. ಕುಟುಂಬಕ್ಕೆ ಉತ್ತಮ ಆದಾಯದ ಥೈಲಿ ಇದಾಗಿದೆ.

ಕಳೆದ ವರ್ಷ ಪ್ರಾಯೋಗಿಕವಾಗಿ ಅರ್ಧ ಎಕರೆ ಜಾಗದಲ್ಲಿ ಜರ್ಬೆರಾ ಹೂ ಬೆಳೆದು ಯಶ ಕಂಡಿದ್ದರು. ಆ ನಂತರ 1.5 ಎಕರೆಯಲ್ಲಿ ಕಾರ್ನೇಸಿಯ ಬೆಳೆದಿದ್ದಾರೆ. ಇದೇ ಬೆಳೆಗೆ ಇನ್ನರ್ಧ ಎಕರೆ ಭೂಮಿಯನ್ನೂ ಹದ ಮಾಡುತ್ತಿದ್ದಾರೆ. ತಾಲೂಕಿನಲ್ಲಿ ಕಾರ್ನೇಸಿಯಾದ ಮೊದಲ ಬೆಳೆಗಾರ ಇವರೇ!

ಗಿಡಗಳು, ಕೃಷಿ ಹೊಂಡ, ಪಾಲಿಹೌಸ್, ಪ್ಯಾಕ್ ಹೌಸ್ ಇತ್ಯಾದಿಗೆಲ್ಲ ತೋಟಗಾರಿಕೆ ಇಲಾಖೆಯಿಂದ ಸಬ್ಸಿಡಿಯ ಪ್ರಯೋಜನ ಪಡೆದಿದ್ದಾರೆ. ಈ ಎರಡೂ ಪ್ರಭೇದದ ಹೂ ಗಿಡಗಳಿಗೆ ಮೂರು ವರ್ಷ ಮಾತ್ರ ಆಯಸ್ಸು. ಜರ್ಬೇರಾ ದಿನಕ್ಕೆ ಸುಮಾರು 1500 ಹೂ ಬಿಟ್ಟರೆ, ಕಾರ್ನೇಸಿಯ ಅಂದಾಜು 4 ಸಾವಿರ ಹೂ ಬಿಡುತ್ತದೆ. ಇಲ್ಲಿನ ಹೂಗಳು ಬೆಂಗಳೂರಿಗೆ ರಫ್ತಾಗುತ್ತಿವೆ.

ಎರಡೂ ಬೆಳೆಗೂ ತೆಂಗಿನ ನಾರಿನ ಪುಡಿ, ತಿಪ್ಪೆ ಗೊಬ್ಬರ ಮಾತ್ರ ಬಳಸುತ್ತಾರೆ. 2 ಕೊಳವೆ ಬಾವಿಗಳಿವೆ. ಈ ಬಾರಿ ಭದ್ರಾ ನೀರು ಆಸರೆಯಾಗಿದೆ. ಕೃಷಿ ಹೊಂಡ ಇರುವುದರಿಂದ ನೀರಿನ ಸಮಸ್ಯೆ ಇಲ್ಲ. ಹನಿ ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದು, ನೀರಿನ ಉಳಿತಾಯವೂ ಆಗುತ್ತಿದೆ.

ಜರ್ಬೆರಾಗೆ 14 ಲಕ್ಷ ರೂ., ಕಾರ್ನೇಸಿಯಾಗೆ 45 ಲಕ್ಷ ರೂ. ವೆಚ್ಚ ಮಾಡಿದ್ದೇವೆ. ಕಾರ್ನೇಸಿಯಾಗೆ ವೆಚ್ಚ ಹೆಚ್ಚು. ರೋಗ ಕಡಿಮೆ. ತಿಂಗಳಿಗೆ ಜರ್ಬೆರಾದಿಂದ 80 ಸಾವಿರ ರೂ., ಕಾರ್ನೇಸಿಯದಿಂದ 1 ಲಕ್ಷ ರೂ. ಮೀರಿ ಅದಾಯ ಬರುವ ನಿರೀಕ್ಷೆ ಇದೆ ಎನ್ನುತ್ತಾರೆ ಸೂರ್ಯನಾರಾಯಣರ ಪುತ್ರ ಸತೀಶ್. ಸಂಬಂಧಿ ಸಾಫ್ಟ್ ವೇರ್ ಇಂಜಿನಿಯರ್ ಶ್ರೀಕಾಂತ್ ಸಲಹೆಯಂತೆ ಹೂ ಬೆಳೆಗೆ ಕಾಲಿಟ್ಟಿದ್ದೇವೆ. ಮಗ ಸತೀಶ್, ವೀರೇಂದ್ರ, ಸೊಸೆಯಂದಿರಾದ ಭಾರ್ಗವಿ, ನೇತ್ರಾವತಿ ನೆರವಾಗುತ್ತಾರೆ. ಹೀಗಾಗಿ ಕೂಲಿಕಾರರ ಸಮಸ್ಯೆಯಿಲ್ಲ ಎನ್ನುತ್ತಾರೆ ಸೂರ್ಯನಾರಾಯಣ. ಮಾಹಿತಿ ಗೆ ಮೊ.ಸಂ.9448248963 ಸಂಪರ್ಕಿಸಬಹುದು.

- Advertisement -

Stay connected

278,453FansLike
561FollowersFollow
607,000SubscribersSubscribe

ವಿಡಿಯೋ ನ್ಯೂಸ್

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....

VIDEO: ಅವಿಸ್ಮರಣೀಯ ಕ್ಷಣಗಳು:...

ಹ್ಯೂಸ್ಟನ್​: ಇಲ್ಲಿ ಭಾನುವಾರ ಆಯೋಜನೆಗೊಂಡಿದ್ದ ಹೌಡಿ ಮೋದಿ ಕಾರ್ಯಕ್ರಮ ಮುಗಿದ ಬಳಿಕ ವೇದಿಕೆಯಿಂದ ಇಳಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತೆರಳುತ್ತಿದ್ದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ...

VIDEO: ಅಮೆರಿಕ ತಲುಪಿದ...

ಹ್ಯೂಸ್ಟನ್​: ಪ್ರಧಾನಿ ನರೇಂದ್ರ ಮೋದಿ ಶನಿವಾರ ಅಮೆರಿಕ ತಲುಪಿದರು. ಹ್ಯೂಸ್ಟನ್​ನ ಜಾರ್ಜ್ ಬುಷ್​ ಇಂಟರ್​ಕಾಂಟಿನೆಂಟಲ್​ ಏರ್​ಪೋರ್ಟ್​ಗೆ ಬಂದಿಳಿದ ಅವರನ್ನು ಭಾರತದಲ್ಲಿನ ಅಮೆರಿಕ ರಾಯಭಾರಿ ಕೆನ್ನೆತ್​ ಜಸ್ಟರ್​, ಅಮೆರಿಕದಲ್ಲಿನ ಭಾರತದ ರಾಯಭಾರಿ...

ಹೈಕೋರ್ಟ್ ಜಡ್ಜ್​ ವಿರುದ್ಧ...

ಹೈದರಾಬಾದ್​: ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ನೂಟಿ ರಾಮಮೋಹನ ರಾವ್​ ವಿರುದ್ಧ ಅವರ ಸೊಸೆಯೇ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ. ಬರೀ ಮಾವನ ವಿರುದ್ಧವಷ್ಟೇ ಅಲ್ಲದೆ, ಅತ್ತೆ ನೂಟಿ ದುರ್ಗಾ ಜಯ ಲಕ್ಷ್ಮೀ ಮತ್ತು...

ಉಪಚುನಾವಣೆಯಲ್ಲಿ ಮೈತ್ರಿ ಕುರಿತು...

ಬೆಂಗಳೂರು: ಉಪಚುನಾವಣೆಯಲ್ಲಿ ಎಲ್ಲಾ 15 ಕ್ಷೇತ್ರಗಳಲ್ಲಿ ಜೆಡಿಎಸ್​ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದು ಜೆಡಿಎಸ್​ ಟ್ವೀಟ್​ ಮಾಡಿದೆ. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ...

ಮಸ್ಕಿ ಮತ್ತು ಆರ್​.ಆರ್​....

ಬೆಂಗಳೂರು: ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಳ ಜತೆಯಲ್ಲೇ ರಾಜ್ಯದಲ್ಲಿ ತೆರವಾಗಿದ್ದ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಆದರೆ ಮಸ್ಕಿ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳಿಗೆ ಚುನಾವಣಾ ಆಯೋಗ...

ಅಕ್ರಮ ಹಣ ಪತ್ತೆ...

ನವದೆಹಲಿ: ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಡಿ.ಕೆ. ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ತೀರ್ಪನ್ನು ಸೆ.25ಕ್ಕೆ ಕಾಯ್ದಿರಿಸಲಾಗಿದೆ. ಇಂದು ಇ.ಡಿ. ವಿಶೇಷ...

VIDEO: ರೋಹಿತ್​ ಶರ್ಮಾ...

ಟೀಂ ಇಂಡಿಯಾ ಓಪನರ್​ ರೋಹಿತ್​ ಶರ್ಮಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶಿಖರ್​ ಧವನ್​ ಅವರ ಕ್ಯೂಟ್​ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ವಿಡಿಯೋವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಸಿಕ್ಕಾಪಟೆ, ಲೈಕ್ಸ್​, ಕಾಮೆಂಟ್ಸ್​ಗಳು ಬರುತ್ತಿವೆ. ರೋಹಿತ್​ ಶರ್ಮಾ ಹಾಗೂ...

VIDEO: ಹೊಸ ಟ್ರಾಫಿಕ್​...

ಸದ್ಯಕ್ಕಂತೂ ಹೊಸ ಮೋಟಾರು ವಾಹನ ಕಾಯ್ದೆಯಡಿ ಟ್ರಾಫಿಕ್​ ರೂಲ್ಸ್​ ಬ್ರೇಕ್​ ಮಾಡಿದವರಿಗೆ ವಿಧಿಸುತ್ತಿರುವ ದಂಡದ ಬಗ್ಗೆಯೇ ಚರ್ಚೆ. ಇದೇ ವಿಚಾರವಾಗಿ ಹಲವು ರೀತಿಯ ವಿಡಿಯೋಗಳು, ಮೆಸೇಜ್​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಮೊದಲಿದ್ದ...

VIDEO| ಈ​ ವಿಡಿಯೋ...

ಬೀಜಿಂಗ್​: ಕಣ್ಣಿಗೆ ಕಾಣುವುದೆಲ್ಲಾ ಸತ್ಯವಲ್ಲ ಎಂಬುದಕ್ಕೆ ಈ ಘಟನೆ ಒಳ್ಳೆಯ ಉದಾಹರಣೆ. ಚೀನಾದ ಯಾಂಗ್ಜೆ ನದಿಯಲ್ಲಿ ನಿಗೂಢವಾಗಿ ಹಾಗೂ ವಿಚಿತ್ರವಾಗಿ ಗೋಚರವಾದ ಕಪ್ಪುಬಣ್ಣದ ಜೀವಿಯನ್ನು ಹೋಲುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲ...