ದಾವಣಗೆರೆ: ದೀಪಾವಳಿ ಎಂದರೆ ಒಂದೆಡೆ ಬೆಳಕಿನ ಹಬ್ಬವಾದರೆ, ಇನ್ನೊಂದೆಡೆ ರಾಶಿ ರಾಶಿ ಕಸಕ್ಕೂ ಅಪಖ್ಯಾತಿ ಮಾಮೂಲು. ಪ್ರತಿ ವರ್ಷದಂತೆ ಈ ಬಾರಿಯೂ ತ್ಯಾಜ್ಯ ಸಂಗ್ರಹಣೆ ಪೌರಕಾರ್ಮಿಕರಿಗೆ ಸವಾಲೇ ಸರಿ.
ನಗರದ ವಿವಿಧೆಡೆ ರಸ್ತೆ ಬದಿ ಬಾಳೆಕಂದು, ಬೂದುಗುಂಬಳ, ಕಾಚಿಹುಲ್ಲು, ಕಬ್ಬಿನ ಜಲ್ಲೆ, ಮಾವಿನಸೊಪ್ಪು, ಹೂವಿನ ಮಾರಾಟಗಾರರು ತಾವು ತಂದಿದ್ದ ಸಾಮಗ್ರಿಗಳನ್ನು ಶನಿವಾರ ಬೆಳಗ್ಗೆಯೇ ಗ್ರಾಹಕರಿಲ್ಲದೇ ಮಾರಾಟ ಸ್ಥಳದಲ್ಲೇ ಬಿಟ್ಟು ಕದಲಿದ್ದರು.
ಮಾರಾಟಕ್ಕೆ ತಂದಿದ್ದ ವಸ್ತುಗಳು ವಾರಸುದಾರರಿಲ್ಲದೆ ಅನಾಥವಾಗಿ ರಸ್ತೆಯಲ್ಲಿ ಬಿದ್ದಿದ್ದವು. ವಾಹನ ಸವಾರರು, ಪಾದಚಾರಿಗಳು ಇದನ್ನು ಕಂಡು ‘ಅಯ್ಯೋ..’ ಎಂದು ಮರುಕ ಪಟ್ಟಿದ್ದೂ ಇದೆ.
ಗಡಿಯಾರ ಕಂಬ, ಹಳೇ ಪ್ರವಾಸಿ ಮಂದಿರ ರಸ್ತೆ, ಪಿ.ಬಿ.ರಸ್ತೆ, ಕೆ.ಆರ್. ಮಾರುಕಟ್ಟೆ, ನಿಟುವಳ್ಳಿ, ಹದಡಿ ರಸ್ತೆ, ಶಾಮನೂರು, ಗುಂಡಿ ಮಹದೇವಪ್ಪ ವೃತ್ತ, ನೀಲಮ್ಮನ ತೋಟ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮತ್ತಿತರೆಡೆ ಇಂತಹ ಕಸದ ತಾಜ್ಯ ಕಂಡುಬಂದಿತು.
ಎರಡು ದಿನ ಪಟಾಕಿ ಸದ್ದಿಗೆ ನಗರ ತಿರುಗಿತ್ತು. ಹೈಸ್ಕೂಲ್ ಮೈದಾನದಲ್ಲಿದ್ದ ತಾತ್ಕಾಲಿಕ ಮಳಿಗೆಗಳು ಮೈದಾನದ ತುಂಬ ಹರಡಿದ್ದ ರಟ್ಟಿನ ಪಟ್ಟಿಗೆಗಳು, ಪ್ಲಾಸ್ಟಿಕ್ ಕವರ್‌ಗಳು ಇತರೆ ತ್ಯಾಜ್ಯ ಕೂಡ ಕ್ರೀಡಾಪಟುಗಳು ಹಾಗೂ ವಾಯುವಿಹಾರಿಗಳು ಕೂಡ ಅಬ್ಬಾ ಎನ್ನುವಂತಿತ್ತು. ಪಟಾಕಿ ವರ್ತಕರಿಂದ ಕಸ ಸಂಗ್ರಹಣೆ ವೆಚ್ಚವಾಗಿ ತಲಾ 500 ರೂ. ಏನಕ್ಕೂ ಸಾಲದು ಎಂಬ ಮಾತು ಕೇಳಿಬಂತು.
ಇನ್ನು ಮನೆ- ಅಂಗಡಿಗಳು, ಕಚೇರಿ, ವಿವಿಧ ಶೋ ರೂಂ ಆವರಣಗಳಲ್ಲಿ ಹಚ್ಚಿದ್ದ ಪಟಾಕಿಗಳ ಚಿಂದಿಯಾದ ಪೇಪರ್ ತುಂಡುಗಳು, ಬಳಸಿ ಬಿಸಾಡಿದ್ದ ಕಾಚಿಹುಲ್ಲಿನ ಕಸ ಕೂಡ ಬೀದಿಪಾಲಾಗಿದ್ದವು.
ಮಾಮೂಲಿ ದಿನಗಳಲ್ಲಿ ಒಂದು ದಿನಕ್ಕೆ 180 ಟನ್ ಕಸ ಸಂಗ್ರಹಣೆಯಾಗುತ್ತದೆ. ಆದರೆ ಈ ದೀಪಾವಳಿಗೆ ಇನ್ನೂ 70 ಟನ್ ಹೆಚ್ಚುವರಿ ತ್ಯಾಜ್ಯ ಉತ್ಪತ್ತಿಯಾಗಿದೆ ಎಂಬುದು ಪಾಲಿಕೆ ಅಧಿಕಾರಿಗಳ ಮಾತು.
ಹೀಗಾಗಿ ಪೌರಕಾರ್ಮಿಕರಿಗೆ ಶನಿವಾರ ರಾತ್ರಿಯಿಂದಲೇ ಕಸ ಎತ್ತುವಳಿ ಕೆಲಸ ಜೋರಾಗಿತ್ತು. ಪೌರಕಾರ್ಮಿಕರು, ಸ್ವಚ್ಛತಾ ವಾಹನಗಳ ಚಾಲಕರು, ಲೋಡರ್ಸ್‌ಗಳು ಸೇರಿ ಸುಮಾರು 800 ಮಂದಿ ಕಾರ್ಯಾಚರಣೆಗಿಳಿದರು.
ಕಸದ ಟ್ಯಾಕ್ಟರ್, ಲಾರಿಗಳು, ಟಿಪ್ಪರ್‌ಗಳೊಂದಿಗೆ ಸಜ್ಜಾಗಿದ್ದ ಪೌರಕಾರ್ಮಿಕ ಸಿಬ್ಬಂದಿ ಕಸ ತೆರವುಗೊಳಿಸಲು ಮುಂದಾದರು. ಭಾನುವಾರವೂ ಕೂಡ ಮೊಗೆದಷ್ಟು ತ್ಯಾಜ್ಯದೊಂದಿಗೆ ಮರಳಿದರು. ಕೆಲವು ರಸ್ತೆಗಳಲ್ಲಿ ಒಗ್ಗೂಡಿಸಿದ್ದ ತ್ಯಾಜ್ಯದ ಗುಂಪುಗಳು ಅಲ್ಲಲ್ಲಿ ರಾಚಿದವು.
ದಾವಣಗೆರೆ ಸ್ವಚ್ಛಗೊಳಿಸಿ ನಿಜವಾದ ಸ್ಮಾರ್ಟ್‌ಸಿಟಿ ಮಾಡುವ ಪೌರಕಾರ್ಮಿಕರ ಶ್ರಮ ಅರಿವಾಗುವುದೇ ದೀಪಾವಳಿ ಹಬ್ಬದಲ್ಲಿ. ಕಸ ಎತ್ತುವಳಿ ಮಾಡಿ ಜನರಿಗೆ ಸ್ವಚ್ಛ ಪರಿಸರ ಕಲ್ಪಿಸುವ ಕಸರತ್ತು ಇನ್ನೆರಡು ದಿನ ನಡೆಯಲಿಕ್ಕಿದೆ.
ಪಟಾಕಿ ವಹಿವಾಟು 7.5 ಕೋಟಿ!
ನಗರದ ಬಾಲಕರ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸಿದ್ದ ತಾತ್ಕಾಲಿಕ ಪಟಾಕಿ ಮಳಿಗೆಗಳಿಂದ ನಾಲ್ಕು ದಿನದಲ್ಲಿ ಸುಮಾರು 7.5 ಕೋಟಿ ರೂ.ಗಳಷ್ಟು ವಹಿವಾಟಾಗಿದೆ.
ಒಟ್ಟು 74 ಮಳಿಗೆದಾರರು ಇಲ್ಲಿ ವ್ಯಾಪಾರ ನಡೆಸಿದ್ದು, ಸರಿಸುಮಾರು ತಲಾ ಗರಿಷ್ಠ 10 ಲಕ್ಷ ರೂ.ಗಳ ವಹಿವಾಟು ನಡೆಸಿದ್ದಾರೆ. ಹಸಿರು ಪಟಾಕಿಗೆ ಬೇಡಿಕೆ ಇದ್ದಾಗ್ಯೂ ದೊಡ್ಡ ಪಟಾಕಿಗಳೂ ಹೆಚ್ಚು ಸದ್ದು ಮಾಡಿದ್ದವು ಎಂಬುದಕ್ಕೆ ತ್ಯಾಜ್ಯರಾಶಿಯ ಪಳೆಯುಳಿಕೆಗಳೇ ಸಾಕ್ಷಿ!
—-
ದೀಪಾವಳಿಗೆ 250 ಟನ್ ತ್ಯಾಜ್ಯ!

ಖಾಲಿ ಹೊಟ್ಟೆಯಲ್ಲಿ ಮೊಟ್ಟೆ ತಿನ್ನುತ್ತಿದ್ದೀರಾ? ಜಾಗರೂಕರಾಗಿರಿ, ನೀವು ಅಪಾಯದಲ್ಲಿದ್ದೀರಿ! Eating eggs on an empty stomach
Eating eggs on an empty stomach : ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು…
ನೀವು ಪ್ರತಿನಿತ್ಯ ಮಾಂಸಾಹಾರ ಸೇವಿಸಿದ್ರೆ ದೇಹದಲ್ಲಿ ಏನೆಲ್ಲ ಬದಲಾವಣೆ ಆಗುತ್ತೆ? ಇಲ್ಲಿದೆ ಉಪಯುಕ್ತ ಮಾಹಿತಿ… Non Vegetarian Food
Non Vegetarian Food : ಮಾಂಸಾಹಾರ ಬಹುತೇಕರ ಪ್ರಿಯವಾದ ಆಹಾರ. ಬೇರೆ ಯಾವುದನ್ನು ಬೇಕಾದರೂ ಬಿಡುತ್ತೇನೆ…
ಲಕ್ಷ್ಮಿ ದೇವಿಯ ಆಶೀರ್ವಾದ ಬೇಕಾ? ಇರುವೆಗಳಿಗೆ ಈ ಆಹಾರವನ್ನು ತಿನ್ನಿಸಬೇಕು! Goddess Lakshmi blessings
Goddess Lakshmi blessings : ಪ್ರಕೃತಿಯನ್ನು ರಕ್ಷಿಸುವವರಿಗೆ ದೇವರುಗಳ ಆಶೀರ್ವಾದ ಖಂಡಿತವಾಗಿಯೂ ಸಿಗುತ್ತದೆ ಎಂದು ಹೇಳಲಾಗುತ್ತದೆ.…