ದಾವಣಗೆರೆ: ಶಿವಶರಣ ಚನ್ನಬಸವಣ್ಣನವರ ವಚನಗಳು ಪಂಡಿತರು ಮಾತ್ರವಲ್ಲದೆ ಜನಸಾಮಾನ್ಯರಿಗೂ ಮಾರ್ಗದರ್ಶಿಯಾಗಿವೆ ಎಂದು ಮೈಸೂರಿನ ಬಸವ ಧ್ಯಾನ ಮಂದಿರದ ಶ್ರೀ ಬಸವಲಿಂಗಮೂರ್ತಿ ಸ್ವಾಮೀಜಿ ಹೇಳಿದರು.
ಶ್ರಾವಣ ಮಾಸದ ನಿಮಿತ್ತ ವಿರಕ್ತಮಠದಲ್ಲಿ ಹಮ್ಮಿಕೊಂಡಿರುವ, ಕಲ್ಯಾಣದಿಂದ ಉಳವಿಯಡೆಗೆ-114ನೇ ವರ್ಷದ ಪ್ರವಚನ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.
ಪ್ರತಿಯೊಬ್ಬರೂ ಸಹ ಚನ್ನಬಸವಣ್ಣನ ವಚನಗಳನ್ನು ಅಧ್ಯಯನ ಮಾಡಬೇಕಾಗಿದೆ. ಸಾವಿರಾರು ಜನರು ಚನ್ನಬಸವಣ್ಣನವರ ಅನುಯಾಯಿಗಳಾಗಿದ್ದರು. ಅವರು ಕಲ್ಯಾಣದಿಂದ ತೆರಳಿ ಸೊಲ್ಲಾಪುರಕ್ಕೆ ಬಂದು ಸಿದ್ದರಾಮ ಶಿವಯೋಗಿಗಳ ಆಶ್ರಯದಲ್ಲಿದ್ದು ಶರಣರ ಸಮೂಹದೊಂದಿಗೆ ಉಳಿವಿಯ ಕಡೆ ತೆರಳಿದರು ಎಂದು ಹೇಳಿದರು.
ಸರ್ವಸಂಗ ಪರಿತ್ಯಾಗ ಮಾಡಿದ ಶಿವಶರಣನ.. ವಚನ ಉಲ್ಲೇಖಿಸಿದ ಸ್ವಾಮೀಜಿ, ಜಗತ್ತು ಏನೇ ನಿಂದಿಸಿದರೂ ಶಿವಶರಣರು ತಮ್ಮ ಕಾಯಕ, ಪೂಜೆ, ಸಿದ್ಧಾಂತ ಹಾಗೂ ಆಚಾರ-ವಿಚಾರದಲ್ಲಿ ತಲ್ಲೀನರಾಗುತ್ತಿದ್ದರು. ಲೋಕದ ಟೀಕೆ ಮರೆಯುವ ಶರಣರು, ಲೋಕದ ಜನರಿಗೂ, ಪ್ರಾಪಂಚಿಕರಿಗೂ ಮಾರ್ಗದರ್ಶನ ನೀಡುತ್ತ ಬಂದಿದ್ದಾರೆ ಎಂದು ಸ್ಮರಿಸಿದರು.
ಶರಣರು ಲೋಕದ ಇಚ್ಛೆಯಂತೆ ನಡೆಯರು. ಏಕೆಂದರೆ ಈ ಶರೀರ ಮತ್ತು ಮನಸ್ಸನ್ನು ನಿಗ್ರಹ ಮಾಡಲು ನಮಗೆ ನಾವೇ ಕೆಲವು ಕಾನೂನುಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಈ ಆಧ್ಯಾತ್ಮಿಕ, ಧಾರ್ಮಿಕ ಕಾನೂನುಗಳು ನಮ್ಮ ಮನಸ್ಸನ್ನು ನಿಯಂತ್ರಿಸಿ, ಜನಗಳಿಗೆ ಅನುಕೂಲವಾಗುವಂತೆ, ಸರಳ ಆಚಾರ, ವಿಚಾರಗಳನ್ನು ಬೋಧಿಸಿವೆ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಶರಣರ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದು ನುಡಿದರು.
ಸಂಸ್ಕಾರ, ಆಚಾರ, ವಿಚಾರವಿಲ್ಲದ ಜನ ಶಿವಶರಣರನ್ನು ನಂಬಲಾರರು. ಏಕೆಂದರೆ ಅವರು ಗುರುವನ್ನು ಪಡೆದಿರಲಾರರು. ಸಹಜವಾಗಿ ಅಜ್ಞಾನ, ಸಂಶಯ, ವಿಪರೀತ ಭಾವನೆಗಳು ಅವರ ಮನಸ್ಸಿನಲ್ಲಿ ಮನೆ ಮಾಡಿಕೊಂಡಿರುತ್ತವೆ. ಆದ್ದರಿಂದ ಅವರು ಸಜ್ಜನರನ್ನು ತಮ್ಮಂತೆ ಭಾವಿಸುತ್ತಾರೆ, ಶರಣರನ್ನು ನಿಂದನೆ ಮಾಡುತ್ತಾರೆ ಎಂದರು.
ಅವರು ಅಧ್ಯಯನಶೀಲರಾಗಿ ಇರುವುದಿಲ್ಲ. ಅವಿವೇಕಿಗಳ, ಅಜ್ಞಾನಿಗಳ ಸಂಗದಲ್ಲಿ ಇರುತ್ತಾರೆ. ಅದಕ್ಕೆ ತಕ್ಕಂತೆ ಮಾತನಾಡುತ್ತಾರೆ. ಸಜ್ಜನರು, ಶರಣರು ಅಂಥವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ, ತಾವಾಯಿತು ತಮ್ಮ ಧ್ಯಾನವಾಯಿತು, ಅಧ್ಯಯನವಾಯಿತು. ತಮ್ಮ ಸಾಧನೆ, ಜನಸೇವೆ ಹೀಗೆ ಬಾಹ್ಯದ ಅರಿವಿಲ್ಲದೆ ಸೇವೆ ಮಾಡುತ್ತಿರುತ್ತಾರೆ. ಹಾಗಾಗಿ ಕೂಡಲ ಚನ್ನ ಸಂಗನ ಶರಣರು ಲೋಕದ ಇಚ್ಛೆಯಂತೆ ನಡೆಯಲು ಲೋಕದ ಇಚ್ಛೆಯಂತೆ ನುಡಿಯಲು ಎಂಬುವ ಚನ್ನ ಬಸವಣ್ಣನವರ ವಚನ ವೈಜ್ಞಾನಿಕ, ವೈಚಾರಿಕವಾಗಿದೆ ಎಂದು ಹೇಳಿದರು.
ಮಾರ್ಗದರ್ಶಿಯಾದ ಚನ್ನಬಸವಣ್ಣನ ವಚನ ಪ್ರವಚನ ಕಾರ್ಯಕ್ರಮ
ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?
ಬೆಂಗಳೂರು: ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
ಈ ದಿನಾಂಕದಂದು ಜನಿಸಿದವರು ದಾನದಲ್ಲಿ ಕರ್ಣನನ್ನು ಮೀರಿಸುತ್ತಾರೆ! ನೀವೂ ಹುಟ್ಟಿದ್ದು ಇದೇ ದಿನಾನಾ?
ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…
ಗೋಲ್ಡನ್ ಅವರ್ ರಹಸ್ಯ: ಮುಂಜಾನೆ ಬೇಗ ಏಳುವುದರಿಂದ ಇದೆ 6 ಪ್ರಯೋಜನಗಳು
ಬೆಂಗಳೂರು: ಮನೆಯಲ್ಲಿ ಕೆಲವರು ಸೂರ್ಯೋದಯಕ್ಕೂ ಮೊದಲೇ ಏಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಮುಂಜಾನೆ ಬೇಗ ಏಳುವುದನ್ನು ರೂಢಿ…