ವೇತನ, ಪಿಂಚಣಿ ಪರಿಷ್ಕರಣೆಗಾಗಿ ಬಿಎಸ್ಸೆನ್ನೆಲ್ ನೌಕರರ ಪ್ರತಿಭಟನೆ

ದಾವಣಗೆರೆ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಚಿತ್ರದುರ್ಗ ಟೆಲಿಕಾಂ ಜಿಲ್ಲೆಯ ಬಿಎಸ್ಸೆನ್ನೆಲ್ ಅಧಿಕಾರಿ- ಅಧಿಕಾರೇತರ ನೌಕರರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಯದೇವ ವೃತ್ತದಿಂದ ಮಹಾತ್ಮ ಗಾಂಧಿ ವೃತ್ತದ ಮೂಲಕ ಆರ್‌ಎಚ್ ಕಲ್ಯಾಣಮಂದಿರ ಬಳಿಯ ಹಳೆ ಬಿಸ್ಸೆನ್ನೆಲ್ ಕಚೇರಿಗೆ ಮೆರವಣಿಗೆ ನಡೆಸಿದರು.

2017ರ ಜನವರಿ ಒಂದರಿಂದಲೇ ಅನ್ವಯವಾಗುವಂತೆ ನೂತನ ವೇತನ ಹಾಗೂ ಪಿಂಚಣಿ ಪರಿಷ್ಕರಿಸಬೇಕು. ಬಿಎಸ್ಸೆನ್ನೆಲ್ ನಿಗಮದ ನಷ್ಟದ ನೆಪದಲ್ಲಿ ಇದನ್ನು ಕೈಬಿಡುವುದು ಸರಿಯಲ್ಲ. ಪಿಂಚಣಿ ವಂತಿಕೆಯನ್ನು ಇರುವ ಮೂಲ ವೇತನಕ್ಕೆ ನಿಗದಿಪಡಿಸಬೇಕು.

ಆರ್ಥಿಕ ನೆರವು ಕಲ್ಪಿಸಬೇಕು. ಇಲಾಖೆಗೆ ಬ್ಯಾಂಕ್ ಸಾಲಕ್ಕೆ ಅನುಮತಿ ನೀಡಬೇಕು. ಟವರ್‌ಗಳ ನಿರ್ವಹಣೆಯನ್ನು ಗುತ್ತಿಗೆದಾರರಿಗೆ ನೀಡುವುದನ್ನು ಹಿಂಪಡೆಯಬೇಕು. ಖಾಲಿ ಇರುವ ನಿರ್ದೇಶಕರ ಹುದ್ದೆಗಳನ್ನು ತುಂಬಬೇಕೆಂದು ಆಗ್ರಹಿಸಿದರು.