ನಮ್ಮ ದವನ ಉತ್ಸವಕ್ಕೆ ತೆರೆ

ದಾವಣಗೆರೆ: ಬಾಪೂಜಿ ಇಂಜಿನಿಯರಿಂಗ್ ಹಾಗೂ ತಾಂತ್ರಿಕ ಕಾಲೇಜಿನಲ್ಲಿ ಮೂರು ದಿನಗಳ ಕಾಲ ನಡೆದ ‘ನಮ್ಮ ದವನ-2019’ ಉತ್ಸವಕ್ಕೆ ಶನಿವಾರ ಸಂಜೆ ತೆರೆ ಬಿತ್ತು.

ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಹೆಚ್ಚು ಅಂಕ ಪಡೆದ ಕಾಲೇಜಿನ ಇನ್‌ಫಾರ್ಮೇಷನ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಸಮಗ್ರ ಪಾರಿತೋಷಕ ಪಡೆದರೆ, ಕಂಪ್ಯೂಟರ್ ಸೈನ್ಸ್ ವಿಭಾಗ ರನ್ನರ್ ಅಫ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡಿತು.

ಸಮಾರೋಪದಲ್ಲಿ ಪಡ್ಡೆಹುಲಿ ಚಿತ್ರದ ನಾಯಕ ಶ್ರೇಯಸ್ ಮಂಜು, ನಟಿ ನಿಶ್ವಿಕಾ ನಾಯ್ಡು, ನಿರ್ದೇಶಕ ಗುರು ದೇಶಪಾಂಡೆ ಮಾತನಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು.

ಕಾಲೇಜಿನ ನಿರ್ದೇಶಕ ಪ್ರೊ.ವೈ.ವೃಷಭೇಂದ್ರಪ್ಪ, ಡೀನ್ ಡಾ.ಎಚ್.ಬಿ.ಅರವಿಂದ್, ಪ್ರಾಚಾರ್ಯ ಡಾ.ಎಂ.ಸಿ.ನಟರಾಜ, ಪತ್ರಕರ್ತ ಲೋಕೇಶ್ ಕೊಪ್ಪದ್ ಇದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

Leave a Reply

Your email address will not be published. Required fields are marked *