ಕುಂದೂರು ಗ್ರಾಪಂ ಅವ್ಯವಹಾರ ಆರೋಪ

ದಾವಣಗೆರೆ: ಹೊನ್ನಾಳಿ ತಾಲೂಕು ಕುಂದೂರು ಗ್ರಾಪಂನಲ್ಲಿ ನಡೆದಿದೆ ಎನ್ನಲಾದ ಲಕ್ಷಾಂತರ ರೂ.ಗಳ ಅವ್ಯವಹಾರ ಆರೋಪ ಸಂಬಂಧ ಕೋರ್ಟ್ ಆದೇಶದಂತೆ ಹೊನ್ನಾಳಿ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಪಂ ಇಒ, ಜಿಪಂ ಸಿಇಒ ಅವರಿಗೆ ದಾಖಲೆ ಸಹಿತ ದೂರು ನೀಡಿ ವರ್ಷವಾಗಿದ್ದರೂ ಅವ್ಯವಹಾರ ವಿರುದ್ಧ ಕ್ರಮವಾಗಿರಲಿಲ್ಲ. ಹೊನ್ನಾಳಿಯ ಸಿವಿಲ್ ಜಡ್ಜ್ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಲಾಗಿತ್ತು ಎಂದು ಭ್ರಷ್ಟಾಚಾರ ವಿರೋಧಿ ವೇದಿಕೆ ರಾಜ್ಯಾಧ್ಯಕ್ಷ ಗುರುಪಾದಯ್ಯ ಮಠದ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದನ್ನು ಮಾನ್ಯ ಮಾಡಿದ ಕೋರ್ಟ್ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಹೊನ್ನಾಳಿ ಠಾಣೆಗೆ ಆದೇಶ ನೀಡಿದೆ. ಅಧಿಕಾರಿ, ಜನಪ್ರತಿನಿಧಿಗಳು ಸೇರಿ ಒಂಬತ್ತು ಜನರ ವಿರುದ್ಧ ಆ.14ರಂದು ದೂರು ದಾಖಲಾಗಿದೆ.

ಕ್ರಿಮಿನಲ್ ದಾವೆ ದಾಖಲಿಸಲು ಅವಕಾಶವಿದ್ದರೂ ತಾಪಂ ಇಒ ಕ್ರಮ ಕೊಂಡಿಲ್ಲ. ಹಾಗಾಗಿ ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಆರೋಪಿಗಳು ಹಲ್ಲೆ ಮಾಡುವ ಸಂಭವವಿದ್ದು, ಸೂಕ್ತ ಭದ್ರತೆ ಒದಗಿಸುವಂತೆ ಎಸ್ಪಿ ಅವರಿಗೆ ಮನವಿ ಮಾಡಿರುವುದಾಗಿ ದೂರುದಾರರಾದ ಆರ್.ಪುಷ್ಪಾ ಪ್ರಸನ್ನಕುಮಾರ್ ತಿಳಿಸಿದರು.

ವೇದಿಕೆ ಉಪಾಧ್ಯಕ್ಷ ಎ.ಉಮೇಶ್, ನಿರ್ದೇಶಕ ಡಾ. ಉಮೇಶ್ ಹಿರೇಮಠ್, ಉಪಾಧ್ಯಕ್ಷ ರಾಜು ಕಣಗಣ್ಣಾರ, ಬಿ.ಎಲ್. ಶಾಂತರಾಜ್, ಹನುಮಂತಪ್ಪ ಗೋಷ್ಠಿಯಲ್ಲಿದ್ದರು.