ಬಾಲ್ಯವಿವಾಹ, ಪೋಕ್ಸೋ ಪ್ರಕರಣ ನಿಯಂತ್ರಿಸಿ

ದಾವಣಗೆರೆ: ಜಿಲ್ಲೆಯಲ್ಲಿ ಬಾಲ್ಯವಿವಾಹ, ಪೋಕ್ಸೋ ಪ್ರಕರಣಗಳ ನಿಯಂತ್ರಣಕ್ಕೆ ಜಾಗೃತಿ ಅಭಿಯಾನ ನಡೆಸುವಂತೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ರಾಜೇಶ್ವರಿ ಎನ್.ಹೆಗಡೆ ಸೂಚಿಸಿದರು.
ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಡಿಎಲ್‌ಎಸ್‌ಎ ದ್ವಿಮಾಸಿಕ ಸಭೆ ಹಾಗೂ ಜಿಲ್ಲಾ ಮಟ್ಟದ ವಿಶೇಷ ಕಾರ್ಯಪಡೆ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಣ ಇಲಾಖೆ ಮೂಲಕ ಅರಿವು ಮೂಡಿಸಬೇಕು. ಬಾಲ್ಯವಿವಾಹ ಆಗಿದ್ದಲ್ಲಿ ಸಂತ್ರಸ್ತರಿಗೆ ಕಾನೂನಿನಡಿ ಮಾಹಿತಿ, ಕಾನೂನಿನ ಕ್ಷಣೆ, ಪುನರ್ವಸತಿ ಕಲ್ಪಿಸಬೇಕು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜಾನಾಯ್ಕ ಮಾತನಾಡಿ 2024ರ ಏಪ್ರಿಲ್‌ನಿಂದ ಇದುವರೆಗೆ 31 ಕೇಸ್ ದಾಖಲಾಗಿದೆ. ಇದರಲ್ಲಿ 28ನ್ನು ತಡೆಯಲಾಗಿದೆ.  ಮೂರು ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ವಿವರಿಸಿದರು.
2013ರಿಂದ 2024ರ ಆಗಸ್ಟ್ 12ರವರೆಗೆ ಜಿಲ್ಲೆಯಲ್ಲಿ 731 ಪೋಕ್ಸೋ ಪ್ರಕರಣ ದಾಖಲಾಗಿದ್ದು 86 ಕೇಸ್‌ಗಳಲ್ಲಿ ಶಿಕ್ಷೆಯಾಗಿದೆ. 2024ರ ಏಪ್ರಿಲ್‌ನಿಂದ ಜೂನ್ ಅಂತ್ಯದವರೆಗೆ 25 ಪ್ರಕರಣ ದಾಖಲಾಗಿವೆ. ಇದುವರೆಗೆ 247 ಪ್ರಕರಣ ಬಾಕಿ ಇವೆ. ಆರ್‌ಸಿಎಚ್ ಪೋರ್ಟಲ್‌ನಲ್ಲಿ ದಾಖಲಾದ ಹದಿಹರೆಯದ ಗರ್ಭಿಣಿಯರ ವರದಿಯಂತೆ 254 ಕೇಸ್‌ಗಳಿದ್ದು ಸರ್ವೇಯಲ್ಲಿ 231 ಮಕ್ಕಳು ಕಂಡುಬಂದಿದ್ದು 23 ತಾಯಂದಿರು 18 ವರ್ಷ ಪೂರೈಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದರು.
ವ್ಯಾಜ್ಯಮುಕ್ತ ಗ್ರಾಮಗಳ ಘೋಷಣೆಗೆ ಕ್ರಮ
ಸೆ. 14ಂದು ಜಿಲ್ಲೆಯಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ನಡೆಯಲಿದ್ದು ವ್ಯಾಜ್ಯಮುಕ್ತ ಗ್ರಾಮ ಘೋಷಣೆಗೆ ಯೋಜನೆ ರೂಪಿಸಲಾಗಿದೆ ಎಂದು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಕರೆಣ್ಣನವರ್ ತಿಳಿಸಿದರು.
ದಾವಣಗೆರೆ ತಾಲೂಕಿನಲ್ಲಿ ಬಾವಿಹಾಳ್, ಓಬಣ್ಣನಹಳ್ಳಿ, ಕೆ. ಕೋಡಿಹಳ್ಳಿ. ಗಾಂಧಿನಗರ ಗ್ರಾಮಗಳನ್ನು ಗುರುತಿಸಲಾಗಿದೆ. ಉಳಿದ ತಾಲೂಕಿನ 2-3 ಗ್ರಾಮಗಳಲ್ಲಿ ಅದಾಲತ್ ಪೂರ್ವದಲ್ಲಿ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿ ಎಂದು ಹೇಳಿದರು.
ಕೆಲವು ಭೂಸ್ವಾಧೀನ ಪ್ರಕರಣಗಳಲ್ಲಿ ತ್ವರಿತ ಪರಿಹಾರ ಒದಗಿಸಲು ಜಿಲ್ಲಾಡಳಿತ ಗಮನ ಹರಿಸಬೇಕು. ಪರಿಹಾರ ವಿಳಂಬವಾದಂತೆ ವಾರ್ಷಿಕ ಶೇ.15ರಷ್ಟು ಬಡ್ಡಿಯ ಹೊರೆ ಸರ್ಕಾರಕ್ಕೆ ಆಗುತ್ತಿದೆ. ಇದನ್ನು ತಪ್ಪಿಸಬೇಕು ಎಂದೂ ತಿಳಿಸಿದರು.
ಅಧಿಕಾರಿಗಳು ಸಹೃದಯಿಗಳಾಗಲಿ
ಜನನ ಮತ್ತು ಮರಣ ಪ್ರಮಾಣಪತ್ರ ಬಹಳಷ್ಟು ಪ್ರಕರಣಗಳು ಬಾಕಿ ಇವೆ. ಅಸಲಿ ದಾಖಲೆಯಿದ್ದರೂ ಕೆಲ ಪ್ರಕರಣಗಳಲ್ಲಿ ಅಲೆದಾಡಿಸಿದ ಪ್ರಸಂಗಗಳಿವೆ. ಇದನ್ನು ತಪ್ಪಿಸುವ ಮೂಲಕ ಅಧಿಕಾರಿಗಳು ಸಹೃದಯಿಗಳಾಗಬೇಕು. ಸುಪ್ರೀಂಕೋರ್ಟ್ ನ್ಯಾಯಾಧೀಶರು ಕೂಡ ಈ ವಿಚಾರದಲ್ಲಿ ಗಮನ ಸೆಳೆಯುವಂತೆ ತಿಳಿಸಿದ್ದಾಗಿ ನ್ಯಾಯಾಧೀಶರು ಹೇಳಿದರು.
ಕೆಲವು ಮರಣ ಪ್ರಮಾಣಪತ್ರ ವಿಚಾರದ ವಕಾಲತ್ತಿಗಾಗಿ ವಕೀಲರಿಗೆ ಪ್ತತಿ ಕೇಸ್‌ನಲ್ಲಿ 25 ಸಾವಿರ ರೂ. ನೀಡಬೇಕಿದೆ ಎಂದು ಪಾಲಿಕೆರ ಆಯುಕ್ತೆ ರೇಣುಕಾ ತಿಳಿಸಿದರು. ಬಾಕಿ ಇರುವ ಜನನ-ಮರಣ ಪ್ರಮಾಣಪತ್ರ ವಿತರಿಸುವ ವಿಚಾರದಲ್ಲಿ ಶೀಘ್ರವೇ ಗಮನಹರಿಸುವುದಾಗಿಯೂ, ವಕೀಲರಿಗೆ ತಲಾ ಕೇಸ್‌ಗೆ 500 ರೂ. ನೀಡುವಂತೆಯೂ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿದರು. ಅಂಗನವಾಡಿಗಳಲ್ಲಿ ವ್ಯವಸ್ಥೆ ಸುಧಾರಿಸು ಸಂಬಂಧ ತಾವು ಹಾಗೂ ಜಿಪಂ ಸಿಇಒ ಜಂಟಿ ಸುತ್ತೋಲೆ ಹೊರಡಿಸುವುದಾಗಿಯೂ ತಿಳಿಸಿದರು.
ಮೊಬೈಲ್ ಬಸ್
ಶಾಲೆಗೆ ಹೋಗದ ಅಲೆಮಾರಿ ಜನರ ಮಕ್ಕಳನ್ನು ಗುರ್ತಿಸಿ ವ್ಯವಸ್ಥೆ ಮಾಡಬೇಕೆಂದು ಜಿಲ್ಲಾ ನ್ಯಾಯಾಧೀಶರು ಸೂಚಿಸಿದರು. ಕೆಎಸ್‌ಆರ್‌ಟಿಸಿಗೆ ಪತ್ರ ಬರೆದು ಬಸ್‌ನಲ್ಲೇ ಇಂತಹ ಮಕ್ಕಳಿಗೆ ಶಿಕ್ಷಣ ಕೊಡಿಸುವ ಪ್ರಾಯೋಗಿಕ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದರು.
ಇಟ್ಟಿಗೆ ಭಟ್ಟಿ, ಕಲ್ಲು ಗಣಿಗಾರಿಕೆ ಪ್ರದೇಶಗಳಲ್ಲಿ ಬಾಲಕಾರ್ಮಿಕರಿದ್ದು, ನಿಯಮಿತ ದಾಳಿ ನಡೆಸಿ ತಡೆಯುವ ಜತೆಗೆ ಮಕ್ಕಳಿಗೆ ಶಿಕ್ಷಣ ಕಲ್ಪಿಸುವಂತೆ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸೂಚನೆಯನ್ನು ಹಿಂದೆಯೇ ನೀಡಿದ್ದೇನೆ ಎಂದು ಡಿಸಿ ಇದೇ ವೇಳೆ ತಿಳಿಸಿದರು.
ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ ಕೃಷ್ಣಾನಾಯ್ಕ, ಎಎಸ್ಪಿ ವಿಜಯಕುಮಾರ್ ಎಂ. ಸಂತೋಷ್, ಡಿಎಚ್‌ಒ ಡಾ. ಷಣ್ಮುಖಪ್ಪ, ಡಿಡಿಪಿಐ ಎಚ್. ಕೊಟ್ರೇಶ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಾಗರಾಜ್ ಇತರರಿದ್ದರು.

Share This Article

ನವರಾತ್ರಿಯಲ್ಲಿ 9 ದಿನ ಉಪವಾಸ ಮಾಡುತ್ತಿದ್ದರೆ ಈ ಸಲಹೆಗಳು ನಿಮಗಾಗಿ…Navratri Fasting

ಬೆಂಗಳೂರು:  ನವರಾತ್ರಿ ( Navratri ) ಆಚರಣೆಗಳು ಪ್ರಾರಂಭವಾಗಿವೆ. ಈ ಹಬ್ಬದ 9 ದಿನಗಳ ಕಾಲ…

ನೀವು 1 ತಿಂಗಳ ಕಾಲ ಬೆಳಗಿನ ತಿಂಡಿ ತಿನ್ನುವುದನ್ನ ಬಿಟ್ಟರೆ ಏನಾಗುತ್ತದೆ? ಪ್ರತಿಯೊಬ್ಬರೂ ಇದನ್ನ ತಿಳಿದಿರಲೇಬೇಕು..Health Tips

ಬೆಂಗಳೂರು:  ಇಂದಿನ ಬಿಡುವಿಲ್ಲದ ಜೀವನದಲ್ಲಿ ಸಮಯದ ಅಭಾವ ಹಾಗೂ ಇನ್ನಿತರ ಕಾರಣಗಳಿಂದಾಗಿ ಅನೇಕರು ಬೆಳಗಿನ ಉಪಾಹಾರವನ್ನು…

ನಿಮ್ಮ ಅಂಗೈನಲ್ಲಿ ಈ ಚಿಹ್ನೆ ಇದೆಯಾ ನೋಡಿ… ಇದ್ರೆ ಎಂದಿಗೂ ಹಣಕಾಸಿನ ಸಮಸ್ಯೆಗಳು ಎದುರಾಗಲ್ಲ | Palmistry

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…