ದಾವಣಗೆರೆ: ಖೋಟಾನೋಟು ಚಲಾವಣೆ ಮಾಡಿದ್ದ ದಂಪತಿಗೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 5 ವರ್ಷ ಸಾಧಾರಣ ಶಿಕ್ಷೆ ಹಾಗೂ ತಲಾ 30 ಸಾವಿರ ರೂ. ದಂಡ ವಿಧಿಸಿದೆ.
ಚನ್ನಗಿರಿ ತಾಲೂಕು ನವಿಲೆಹಾಳ್ ಗ್ರಾಮ ಮೂಲದ ಹಾಲಿ ದಾವಣಗೆರೆ ಹೊರವಲಯದ ಆರನೇ ಕಲ್ಲು ಗ್ರಾಮ ನಿವಾಸಿ ಹನುಮಂತಪ್ಪ ಹಾಗೂ ಶಾಂತಾ ಶಿಕ್ಷೆಗೆ ಗುರಿಯಾದ ದಂಪತಿ. ಹರಿಹರದ ತರಕಾರಿ ಮಾರುಕಟ್ಟೆಯಲ್ಲಿ ಮ ವ್ಯಾಪಾರಿ ಫಕ್ರುಸಾಬ್ ಅವರಿಂದ ತೆಂಗಿನಕಾಯಿ ಖರೀದಿಸಿದ್ದ ಹನುಮಂತಪ್ಪ ದಂಪತಿ 2ಸಾವಿರ ರೂ. ಹಾಗೂ 500 ರೂ. ಮುಖಬೆಲೆಯ ನೋಟುಗಳನ್ನು ನೀಡಿದ್ದಾರೆ. ಅವು ಖೋಟಾನೋಟು ಎಂಬುದಾಗಿ ಅನುಮಾನಗೊಂಡ ವ್ಯಾಪಾರಿ, ಗಸ್ತಿನಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ಸಂಪರ್ಕಿಸಿದ್ದು ವಿಚಾರಣೆ ಮಾಡಲಾಗಿ ಖೋಟಾನೋಟು ಚಲಾವಣೆ ಮಾಡಿದ್ದಾಗಿ ದಂಪತಿ ಒಪ್ಪಿಕೊಂಡಿದ್ದು, ನಂತರ ಹರಿಹರ ನಗರ ಠಾಣೆಗೆ ದೂರು ದಾಖಲಾಗಿತ್ತು.
ತನಿಖೆ ಕೈಗೊಂಡ ತನಿಖಾಧಿಕಾರಿ ಹರಿಹರ ಸಿಪಿಐ ಐ. ಎಚ್ ಗುರುನಾಥ, ಪ್ರಕರಣದ ತನಿಖೆ ನಡೆಸಿದ್ದು, ಕೃತ್ಯಕ್ಕೆ ಬಳಸಿದ್ದ
ಕಲರ್ ಜೆರಾಕ್ಸ್ ಪ್ರಿಂಟರ್ ಮತ್ತು ಖೋಟಾ ನೋಟುಗಳನ್ನು ವಶಕ್ಕೆ ಪಡೆದುಕೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶ ಆರ್. ಎನ್. ಪ್ರವೀಣಕುಮಾರ್ ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದರು. ಸರ್ಕಾರದ ಪರ ವಕೀಲ ಜಯಪ್ಪ ವಕಾಲತ್ತು ವಹಿಸಿದ್ದರು.
ಖೋಟಾನೋಟು ಚಲಾವಣೆ, ಅಪರಾಧಿ ದಂಪತಿಗೆ 5 ವರ್ಷ ಸಜೆ
ಪುರುಷರು ಕುಳಿತು or ನಿಂತುಕೊಂಡು ಮೂತ್ರ ವಿಸರ್ಜನೆ ಮಾಡ್ಬೇಕಾ? ಇಲ್ಲಿದೆ ಉಪಯುಕ್ತ ಮಾಹಿತಿ… Urinate Position
ಸಾಮಾನ್ಯವಾಗಿ ಪುರುಷರು ನಿಂತುಕೊಂಡೇ ಮೂತ್ರ ವಿಸರ್ಜನೆ ( Urinate Position ) ಮಾಡುತ್ತಾರೆ. ಆದರೆ, ಈ…
ನಿಮ್ಮ ಅಂಗೈನಲ್ಲಿ H ಚಿಹ್ನೆ ಇದೆಯಾ ನೋಡಿ… ಇದರ ಅರ್ಥ ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ! Palmistry
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Success Secrets: ನಿಮ್ಮ ಜೀವನದಲ್ಲಿ ಈ 4 ಸ್ಥಳಗಳಲ್ಲಿ ಎಂದಿಗೂ ಹಿಂಜರಿಯಬೇಡಿ! ಈ ಕೆಲಸ ಮಾಡಿದ್ರೆ ಸಕ್ಸಸ್ ಗ್ಯಾರೆಂಟಿ
ಬೆಂಗಳೂರು: ಆಚಾರ್ಯ ಚಾಣಕ್ಯರನ್ನು ಭಾರತದ ವಿದ್ವಾಂಸರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ…