ದಾವಣಗೆರೆ: ಶೈಕ್ಷಣಿಕ ಧನಸಹಾಯ ಪಡೆಯುವ ವಿದ್ಯಾರ್ಥಿಗಳು ಭವಿಷ್ಯದಲ್ಲಿ ತಾವೂ ಹಿಂದುಳಿದ ವಿದ್ಯಾರ್ಥಿಗಳಿಗೆ ಉತ್ತೇಜಿಸಬೇಕು ಎಂದು ಆರ್‌ಎಚ್ ರಾಧಾಕೃಷ್ಣ ಗುಪ್ತ ಜ್ಯುಯೆಲರ್ಸ್‌ನ ಆರ್.ಆರ್.ರಮೇಶ್‌ಬಾಬು ಹೇಳಿದರು.

ನಗರದ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ, ವಿದ್ಯಾಪೋಷಕ ಸಂಸ್ಥೆಯಿಂದ ಬಡ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಧನಸಹಾಯ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ವಿದ್ಯಾಪೋಷಕ ಸಂಸ್ಥೆ ನೀಡುವ ನೆರವು ಪಡೆದು ನಂಬಿಕೆ ಉಳಿಸಿಕೊಳ್ಳಿ. ಇದನ್ನು ಶೈಕ್ಷಣಿಕ ಬೆಳವಣಿಗೆ ಮತ್ತು ಭವಿಷ್ಯ ಕಟ್ಟಿಕೊಳ್ಳಲು ವಿನಿಯೋಗಿಸಿಕೊಳ್ಳಿ. ಮುಂದಿನ ಪೀಳಿಗೆಗೆ ಮಾದರಿಯಾಗಿ ಬದುಕು ನಡೆಸಿ ಎಂದು ಕಿವಿಮಾತು ಹೇಳಿದರು.

ಕಿವಿಮೂಗು ಗಂಟಲು ತಜ್ಞ ಡಾ.ಎ.ಎಂ.ಶಿವಕುಮಾರ್ ಮಾತನಾಡಿ, ಉನ್ನತ ಹಂತ ತಲುಪಿದಾಗ ಸಮಾಜ ಸೇವೆಗಾಗಿ ಹಣ ಮೀಸಲಿಡಿ. ಇತರೆ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ನೆರವಾಗಿ ಎಂದರು.

ವಿದ್ಯಾಪೋಷಕ ಸಂಸ್ಥೆಯ ಸ್ವಯಂ ಸೇವಕ ಸುಭಾಷ್ ಆರ್.ಸಿಂಧೆ ಪ್ರಾಸ್ತಾವಿಕವಾಗಿ ಮಾತನಾಡಿದರು. ದಾವಣಗೆರೆ, ಹಾವೇರಿ ಜಿಲ್ಲೆಗಳ 120 ವಿದ್ಯಾರ್ಥಿಗಳಿಗೆ ಧನಸಹಾಯ ವಿತರಿಸಲಾಯಿತು.

ದಾನಿಗಳಾದ ಗಂಗಪ್ಪ ಶೆಟ್ರು, ಆರ್.ಎಸ್.ನಾಗರಾಜ್, ಆದಾಯ ತೆರಿಗೆ ಅಧಿಕಾರಿ ಮಂಜುನಾಥ್, ಡಾ.ಸಿದ್ದಾರ್ಥ, ಡಾ.ಮಲ್ಲಿಕಾರ್ಜುನಪ್ಪ, ನರೇಂದ್ರ ಕುಮಾರ್, ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಟ್ರಸ್ಟ್ ಅಧ್ಯಕ್ಷ ಸಿ.ಆರ್.ವಿರೂಪಾಕ್ಷಪ್ಪ ಇತರರಿದ್ದರು.

ಸಂಸ್ಥೆಯ ವ್ಯವಸ್ಥಾಪಕ ಕೆ.ಸಿ.ಬಸವರಾಜ್ ಸ್ವಾಗತಿಸಿದರು. ಸರಿತಾ ಕಾರ್ಯಕ್ರಮ ನಿರ್ವಹಿಸಿದರು. ನಾಗರಾಜ್ ವಂದಿಸಿದರು.

Leave a Reply

Your email address will not be published. Required fields are marked *