ದಾವಣಗೆರೆ: ಜಿಲ್ಲೆಯಲ್ಲಿರುವ ನಕಲಿ ವೈದ್ಯರು ಮತ್ತು ನಕಲಿ ಕ್ಲಿನಿಕ್‌ಗಳ ಪತ್ತೆಗೆ ಶೀಘ್ರವೇ ಜಿಲ್ಲಾಡಳಿತದಿಂದ ಅಭಿಯಾನ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೊನ್ನಾಳಿ ತಾಲೂಕಿನಲ್ಲಿ ಇಬ್ಬರು ನಕಲಿ ವೈದ್ಯರನ್ನು ಪತ್ತೆ ಹಚ್ಚಿ, ತಲಾ 1 ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ. ಕ್ಲಿನಿಕ್‌ಗಳ ಪರವಾನಗಿ ಬಂದ್ ಮಾಡಿ ಮುಚ್ಚಿಸಿ ಅವರನ್ನು ಗಡಿಪಾರು ಮಾಡಲಾಗಿದೆ ಎಂದು ತಿಳಿಸಿದರು.
ಕೊಲ್ಕತ್ತಾದಿಂದ ಕೆಲ ನಕಲಿ ವೈದ್ಯರು ಗ್ರಾಮಗಳಿಗೆ ಬರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಸಿ ‘ಇದರ ಬಗ್ಗೆ ಜನರೇ ಮಾಹಿತಿ ನೀಡಬೇಕು. ನಕಲಿ ವೈದ್ಯರಿದ್ದಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ’ ಎಂದು ಹೇಳಿದರು.
ತಾಲೂಕು ಆರೋಗ್ಯಾಧಿಕಾರಿಗಳ ಮೂಲಕ ಅಭಿಯಾನ ನಡೆಸಿ ನಕಲಿಗಳು ಕಂಡುಬಂದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅಡಕೆ ಸಿಪ್ಪೆ ಹಾಕಿ ಸುಟ್ಟಿದ್ದರ ಹಿನ್ನೆಲೆಯಲ್ಲಿ ಹೊಗೆಯಲ್ಲಿ ದಾರಿ ಕಾಣದೆ ಅಪಘಾತವಾಗಿ ಇಬ್ಬರು ಮೃತಪಟ್ಟ ನಿದರ್ಶನವಿದೆ. ಹೀಗಾಗಿ ರೈತರು ಅಡಕೆ ಸಿಪ್ಪೆಯನ್ನು ರಸ್ತೆ ಮೇಲೆ ಹಾಕದೆ, ಗೊಬ್ಬರವಾಗಿ ಪರಿವರ್ತಿಸಲು ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ರಸ್ತೆ ಮೇಲೆ ಅಡಕೆ ಸಿಪ್ಪೆ ಹಾಕಿದ್ದರ ಸಂಬಂಧ ಬಸವಾಪಟ್ಟಣ ವ್ಯಾಪ್ತಿಯಲ್ಲಿ ನೋಟಿಸ್ ನೀಡಲಾಗಿತ್ತು. ಅಡಕೆ ಸಿಪ್ಪೆಯನ್ನು ರಸ್ತೆಗೆ ಹಾಕದೆ ಕಣ, ಹೊಲಗಳಲ್ಲಿ ಹಾಕಬೇಕು. ಸುಗಮ ಸಂಚಾರಕ್ಕೆ ರೈತರು ಅನುವು ಮಾಡಿಕೊಡಬೇಕು ಎಂದು ಕೋರಿದರು.
18 ವರ್ಷದವರೆಗೂ ನೆರವಿನ ಯೋಜನೆಯಿಲ್ಲ
ಅನಾಥರು, ಏಕ ಪಾಲಕರ ಮಕ್ಕಳಿಗೆ 18 ವರ್ಷದವರೆಗೂ ಹಣಕಾಸು ನೆರವು ಕಲ್ಪಿಸಲಾಗುತ್ತದೆ ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ಬಿಂಬಿಸುತ್ತಿರುವುದು ವದಂತಿ ಎಂದು ಜಿಲ್ಲಾಧಿಕಾರಿ ಇದೇ ವೇಳೆ ತಿಳಿಸಿದರು.
ನೆರವು ಕಲ್ಪಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಅನೇಕರು ಅರ್ಜಿ ಸಲ್ಲಿಸುತ್ತಿದ್ದಾರೆ. ಜಿಲ್ಲಾಡಳಿತದ ವ್ಯಾಪ್ತಿಯಲ್ಲಿ ಈ ರೀತಿಯ ಯೋಜನೆಯಿಲ್ಲ ಎಂದು ಸ್ಪಷ್ಟಪಡಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆಯಡಿ 2012ರಿಂದಲೂ ಚಾಲ್ತಿಯಲ್ಲಿರುವ ಪ್ರಾಯೋಜಕತ್ವ ಯೋಜನೆಯಡಿ ಅನಾಥರು, ಏಲ ಪಾಲಕರ ಮಕ್ಕಳಿಗೆ ವೈದ್ಯಕೀಯ, ಶೈಕ್ಷಣಿಕ ಉದ್ದೇಶಕ್ಕಾಗಿ ಕೆಲವು ಮಾನದಂಡಗಳಡಿ ಹಣಕಾಸು ನೆರವು ಅಥವಾ ಸಹಕಾರ ನೀಡಲಾಗುತ್ತದೆ.
2021-22ರಲ್ಲಿ 403, 22-23ನೇ ಸಾಲಿನಲ್ಲಿ 210 ಹಾಘೂ 23-24ನೇ ಸಾಲಿನಲ್ಲಿ 96 ಮಕ್ಕಳಿಗೆ ಈ ನೆರವು ದಕ್ಕಿದೆ. ಮಾಹಿತಿಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜೆ.ಎಚ್. ಪಟೇಲ್ ಬಡಾವಣೆ, ಟ್ರೈನ್ ಪಾರ್ಕ್, ಶಾಮನೂರು, ದಾವಣಗೆರೆ. ದೂ. ಸಂ. 08192- 222701 ಇಲ್ಲಿಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.
—
ನಕಲಿ ವೈದ್ಯರ ಪತ್ತೆಗೆ ಅಭಿಯಾನ
ಪುರುಷರು ಕುಳಿತು or ನಿಂತುಕೊಂಡು ಮೂತ್ರ ವಿಸರ್ಜನೆ ಮಾಡ್ಬೇಕಾ? ಇಲ್ಲಿದೆ ಉಪಯುಕ್ತ ಮಾಹಿತಿ… Urinate Position
ಸಾಮಾನ್ಯವಾಗಿ ಪುರುಷರು ನಿಂತುಕೊಂಡೇ ಮೂತ್ರ ವಿಸರ್ಜನೆ ( Urinate Position ) ಮಾಡುತ್ತಾರೆ. ಆದರೆ, ಈ…
ನಿಮ್ಮ ಅಂಗೈನಲ್ಲಿ H ಚಿಹ್ನೆ ಇದೆಯಾ ನೋಡಿ… ಇದರ ಅರ್ಥ ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ! Palmistry
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Success Secrets: ನಿಮ್ಮ ಜೀವನದಲ್ಲಿ ಈ 4 ಸ್ಥಳಗಳಲ್ಲಿ ಎಂದಿಗೂ ಹಿಂಜರಿಯಬೇಡಿ! ಈ ಕೆಲಸ ಮಾಡಿದ್ರೆ ಸಕ್ಸಸ್ ಗ್ಯಾರೆಂಟಿ
ಬೆಂಗಳೂರು: ಆಚಾರ್ಯ ಚಾಣಕ್ಯರನ್ನು ಭಾರತದ ವಿದ್ವಾಂಸರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ…