ಭಜನಾ ಕಲೆ ಉಳಿಸಿ ಬೆಳೆಸಿ

ದಾವಣಗೆರೆ: ಇತ್ತೀಚಿನ ದಿನಗಳಲ್ಲಿ ಭಜನಾ ಮಂಡಳಿಗಳು ಕಣ್ಮರೆಯಾಗುತ್ತಿದ್ದು, ಈ ಕಲೆಯನ್ನು ಉಳಿಸಿ ಬೆಳೆಸುವ ಅಗತ್ಯವಿದೆ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.

ಸಮೀಪದ ಹೊಸ ಕುಂದುವಾಡ ಗ್ರಾಮದ ಸೌರಾಂಬಿಕಾ ದೇವಿ ದೇವಸ್ಥಾನದ ಆವರಣದಲ್ಲಿ ಭಾನುವಾರ, ಶ್ರೀ ಸೌರಾಂಬಿಕಾ ದೇವಿ ಭಜನಾ ಜಾನಪದ ಸಾಂಸ್ಕೃತಿಕ ಕಲಾ ಸಂಘದ ಉದ್ಘಾಟನೆ ಹಾಗೂ ಸಸಿ ನೆಡುವ ಸಮಾರಂಭದಲ್ಲಿ ಮಾತನಾಡಿದರು.

ಸಂಘದವರು ಭಜನೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಹೆಸರು ತರಬೇಕು. ಮುಂದಿನ ಯುವಪೀಳಿಗೆಗೂ ಭಜನಾ ಕಲೆಯನ್ನು ಕಲಿಸಬೇಕು ಎಂದು ತಿಳಿಸಿದರು.

ಗ್ರಾಮದ ಮುಖಂಡ ಬೊಮ್ಮಜ್ಜರ ಪತಿಯಪ್ಪ ಮಾತನಾಡಿ, ಭಜನೆ ಸಂಘದವರು ಪ್ರತಿಯೊಂದು ಕಾರ್ಯಕ್ರಮದಲ್ಲಿ ಭಾಗಿಯಾಗಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಸರ್ಕಾರದಿಂದ ಸೌಲಭ್ಯಗಳು ಸಿಗಬೇಕು ಎಂದರು.

ಹೊಸ ಕುಂದುವಾಡ ಎಪಿಎಂಸಿ ಮಾಜಿ ಅಧ್ಯಕ್ಷ ಆರುಂಡಿ ಶಿವಕುಮಾರ ಗೌಡ್ರು, ಭಜನಾ ಸಂಘದ ಅಧ್ಯಕ್ಷ ವೀರಭದ್ರಪ್ಪ, ಬಣಕಾರ್ ಮಹೇಶ್ವರಪ್ಪ, ಎ.ಪ್ರಕಾಶ್, ಹನುಮಂತಪ್ಪ, ಸುವರ್ಣಮ್ಮ, ಗಣೇಶಪ್ಪ, ಮಹೇಶಪ್ಪ, ಶ್ರೀನಿವಾಸ್, ಅಜ್ಜಯ್ಯ, ಕೆ.ಮಲ್ಲಪ್ಪ ಉತ್ತಂಗಿ, ಚಂದ್ರಕುಮಾರ್, ನಿಂಗಪ್ಪ, ಹನುಮಂತಪ್ಪ, ವಾಮಣ್ಣ, ಹನುಮಕ್ಕ, ಪೂಜಾರಿ ನಾಗಪ್ಪ, ಶಿಕ್ಷಕರಾದ ಮಂಜುನಾಥ್, ತಿಪ್ಪೇಶ್ ಇದ್ದರು.

ಸಿದ್ದಾರೂಢಸ್ವಾಮಿ ಭಜನಾ ಸಂಘ ಕತ್ತಲಗೆರೆ, ದುರ್ಗಾಂಬಿಕಾ ದೇವಿ ಭಜನಾ ಸಂಘ ನಿಟುವಳ್ಳಿ, ಗಲ್ಲಿ ದುರ್ಗಮ್ಮ ಭಜನಾ ಸಂಘ ಹೊಸಕುಂದುವಾಡ, ಮಡಿವಾಳೇಶ್ವರ ಭಜನಾ ಸಂಘ ಹಳೇಕುಂದುವಾಡ, ಸೌರಾಂಬಿಕಾ ದೇವಿ ಭಜನಾ ಸಂಘ ಹೊಸಕುಂದುವಾಡ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು.

Leave a Reply

Your email address will not be published. Required fields are marked *