ದಾವಣಗೆರೆ: ನಟ ದಿ.ಡಾ.ವಿಷ್ಣುವರ್ಧನ್ ಅವರಿಗೆ ಕೇಂದ್ರ ಸರ್ಕಾರ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ನೀಡಬೇಕೆಂದು ಡಾ. ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ವಿ. ತಿರುಮಲೇಶ್ ಆಗ್ರಹಿಸಿದರು.
ಇಲ್ಲಿನ ಭಗತ್‌ಸಿಂಗ್ ಆಟೋ ನಿಲ್ದಾಣ ಆವರಣದಲ್ಲಿ , ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ 15ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಉಭಯ ಸರ್ಕಾರಗಳು ವಿಷ್ಣು ಅವರಿಗೆ ಯಾವುದೇ ಪ್ರಶಸ್ತಿ ನೀಡಿಲ್ಲ. ಇನ್ನಾದರೂ ಗಮನ ಹರಿಸಬೇಕು ಎಂದರು.
ಬೆಂಗಳೂರಿನಲ್ಲಿ ಡಾ.ವಿಷ್ಣು ಸ್ಮಾರಕ ನಿರ್ಮಾಣ ಇರುವರೆಗೆ ನನೆಗುದಿಯಲ್ಲಿದೆ. ಮುಖ್ಯಮಂತ್ರಿ ಸಿದ್ದ್ಧರಾಮಯ್ಯ ಇತ್ತ ಗಮನಹರಿಸಿ ಸ್ಮಾರಕ ನಿರ್ಮಾಣಕ್ಕೆ ಆಸಕ್ತಿ ವಹಿಸಬೇಕೆಂದು ಮನವಿ ಮಾಡಿದರು.
ಅಡ್ಡಿ-ಆತಂಕದ ಬಗ್ಗೆ ಮೇರು ನಟರಾಗಿ ಬೆಳೆದು, ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಿದ್ದ ಕೀರ್ತಿ ಸಾಹಸಸಿಂಹ ಡಾ. ವಿಷ್ಣುವರ್ಧನ್‌ರವರಿಗೆ ಸಲ್ಲುತ್ತದೆ. ಅವರು ಕೇವಲ ಕಲಾವಿದರಾಗಿರದೆ, ಸಮಾಜದ ಒಳಿತಿಗಾಗಿ ಶ್ರಮಿಸಿದ್ದರು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಸದಸ್ಯ ಎನ್.ಜೆ. ನಿಂಗಣ್ಣ, ಪತ್ರಕರ್ತ ಎಸ್. ಹನುಮಂತಪ್ಪ ಹಾಲಿವಾಣ, ವಿನಾಯಕ ಪಗಡೆ, ಬಿಜೆಪಿ ಮುಖಂಡ ಲಕ್ಷ್ಮಣ್, ಆವರಗೆರೆ ಶೇಖರಪ್ಪ, ಮಲ್ಲಯ್ಯ ಹಿರೇಮಠ್, ಶಿವಕುಮಾರ್, ಆಟೋ ಚಾಲಕರು, ಅಭಿಮಾನಿಗಳಿದ್ದರು.
—-
