ದಾವಣಗೆರೆ: ಸಿಬಿಎಸ್‌ಇ ಕ್ಲಸ್ಟರ್-8ರ ಅಥ್ಲೆಟಿಕ್ಸ್ ಕ್ರೀಡಾಕೂಟ ಶುಕ್ರವಾರ ತೋಳಹುಣಸೆಯ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಆಂಗ್ಲ ಮಾಧ್ಯಮ ವಸತಿ ಶಾಲೆ ಮೈದಾನದಲ್ಲಿ ಚಾಲನೆಗೊಂಡಿತು.
ಸೆ. 30ರ ವರೆಗೆ ನಡೆಯುವ ಕ್ರೀಡಾಕೂಟದಲ್ಲಿ 11, 14, 17 ಹಾಗೂ 19ರ ವಯೋಮಿತಿಯೊಳಗಿನ ಬಾಲಕ-ಬಾಲಕಿಯರ ವಿಭಾಗಗಳಲ್ಲಿ ಕ್ರೀಡೆಗಳು ನಡೆಯಲಿವೆ. 295 ಸಿಬಿಎಸ್‌ಇ ಶಾಲೆಗಳ 3 ಸಾವಿರ ಕ್ರೀಡಾಪಟುಗಳು ಭಾಗವಹಿಸಿದ್ದಾರೆ.
ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಶಾಲೆಯ ಮುಖ್ಯಸ್ಥ ಮಂಜುನಾಥ ರಂಗರಾಜು, ವಿದ್ಯಾರ್ಥಿಗಳಲ್ಲಿನ ಶಿಸ್ತು, ಸಂಯಮ ನಿರಂತರ ಸಾಧನೆಯು ಯಶಸ್ಸಿನ ರಹದಾರಿಯಾಗಲಿದೆ. ಇಂತಹ ಕೂಟದಿಂದ ನೀವು ಪ್ರತಿನಿಧಿಸುವ ಶಾಲೆಯ ಗೌರವ ಹೆಚ್ಚಿಸಲಿದೆ. ನೀವು ಕ್ರೀಡಾ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿ ದೇಶವನ್ನು ಪ್ರತಿನಿಧಿಸಿ ಎಂದು ಶುಭ ಹಾರೈಸಿದರು.
ತಾಂತ್ರಿಕ ಸಲಹೆಗಾರ ಪ್ರಮೋದ್ ಪಾಟೀಲ್, ಕ್ರೀಡಾಕೂಟದ ವೀಕ್ಷಕ ಉತ್ತಮ ಕುಮಾರ, ವಿವಿಧ ಶಾಲಾ-ಕಾಲೇಜಿನ ಪ್ರಾಚಾರ್ಯರಾದ ಜಿ.ಎಸ್.ವನಿತಾ, ಅರುಣ್‌ಪ್ರಸಾದ್, ರಾಜೇಶ್ ಪ್ರಸಾದ್, ಬಿ.ಎನ್.ಕಮಲ್, ಉಪ ಪ್ರಾಚಾರ್ಯ ಉಮಾಪತಿ, ರಮೇಶ್, ಬಾಬು, ಕ್ರೀಡಾಕೂಟದ ವೀಕ್ಷಕರಾದ ಸಿದ್ದು ಕೆರೆಸೂರು, ಸಂಜೀವ್ ಕುಮಾರ್ ಇತರರಿದ್ದರು.
ಸಂಗೀತ ಶಿಕ್ಷಕ ಗುರುಮೂರ್ತಿ ಪ್ರಾರ್ಥನಾ ಗೀತೆ ಹಾಡಿದರು. ಶಿಕ್ಷಕಿ ಎಂ. ಲಕ್ಷ್ಮೀ ಕಾರ್ಯಕ್ರಮ ನಿರ್ವಹಿಸಿದರು. ವೈಷ್ಣವಿ- ಅಶ್ವಿಕಾ ಜೋಡಿ ಹಾಗೂ ನವೀನ್ ಮತ್ತು ಅವರ ತಂಡದ ನೃತ್ಯಗಳು ಗಮನ ಸೆಳೆದವು.
ಕೂಟದ ಅಂಗವಾಗಿ ನಿತ್ಯ ಸಂಜೆ ಆರೋಗ್ಯ, ಸಾಧನೆ, ವ್ಯಕ್ತಿತ್ವ ವಿಕಸನ ಮೊದಲಾದ ವಿಷಯಗಳ ಕುರಿತು ಉಪನ್ಯಾಸ, ಸಂಗೀತ ಸಂಜೆ ಕಾರ್ಯಕ್ರಮ ಇರಲಿದೆ.
—
ಸಿಬಿಎಸ್‌ಇ ಕ್ಲಸ್ಟರ್-8ರ ಅಥ್ಲೆಟಿಕ್ಸ್‌ಗೆ ಚಾಲನೆ ಪಿಎಸ್‌ಎಸ್‌ಆರ್ ಮೈದಾನದಲ್ಲಿ ಕ್ರೀಡೆಗಳ ರಂಗು
ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಾಗಲು ಕಾರಣ ಏನು ಗೊತ್ತಾ?; ಇಲ್ಲಿದೆ ಕಂಪ್ಲೀಟ್ ಮಾಹಿತಿ | Health Tips
ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಾಗುವುದು ಸಹಜ. ಈ ಅವಧಿಯಲ್ಲಿ ತೂಕ ಹೆಚ್ಚಾಗುವುದು ಮಗು ಸರಿಯಾಗಿ ಬೆಳೆಯುತ್ತಿದೆ ಎಂಬುದರ…
ಗರ್ಭಿಣಿಯರು ಈ ಪದಾರ್ಥಗಳಿಂದ ದೂರವಿರಿ; ಇಲ್ಲವಾದಲ್ಲಿ ಮಗುವಿಗೆ ಅಪಾಯ ತಪ್ಪಿದ್ದಲ್ಲ | Health Tips
ಪ್ರತಿಯೊಬ್ಬ ಮಹಿಳೆಯೂ ತನ್ನ ಗರ್ಭಾವಸ್ಥೆಯು ಆರೋಗ್ಯಕರವಾಗಿರಬೇಕು ಎಂದು ಬಯಸುತ್ತಾರೆ. ಇದರಿಂದ ತಾಯಿ ಮತ್ತು ಭ್ರೂಣದ ಆರೋಗ್ಯವು…
ಮದುವೆಯಾಗಲು ಸೂಕ್ತ ವಯಸ್ಸು ಯಾವುದು?; ನಿಮ್ಮ ಗೊಂದಲಕ್ಕೆ ಇಲ್ಲಿದೆ ಪರಿಹಾರ … | Marriage
ನಮ್ಮಲ್ಲಿ ಹೆಚ್ಚಿನವರು ತಾವು ಬಯಸಿ ಅಥವಾ ಬಯಸದಿದ್ದರೂ ಒಂದು ಹಂತದಲ್ಲಿ ಮದುವೆಯಾಗಲು ಒತ್ತಡವನ್ನು ಅನುಭವಿಸುತ್ತಾರೆ. ವಯಸ್ಸು…