More

  ಅಕ್ಷರ ಸಿಂಗಾರೋತ್ಸವ ಕಲಾ ಪ್ರದರ್ಶನ 14ಕ್ಕೆ

  ದಾವಣಗೆರೆ: ಕನ್ನಡದ ಅಕ್ಷರಗಳನ್ನು ಕ್ಯಾಲಿಗ್ರಫಿ ವಿನ್ಯಾಸದಲ್ಲಿ ಮೂಡಿಸಿದ, ಅಕ್ಷರ ಸಿಂಗಾರೋತ್ಸವ-3 ವಿಶೇಷ ಕಲಾಕೃತಿಗಳ ಪ್ರದರ್ಶನ ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಜೂನ್ 14ರಿಂದ 28ವರೆಗೆ ನಡೆಯಲಿದೆ.
  ದಾವಣಗೆರೆ ವಿಶ್ವವಿದ್ಯಾಲಯ, ದೃಶ್ಯಕಲಾ ಮಹಾವಿದ್ಯಾಲಯ ಹಾಗೂ ದಾವಣಗೆರೆ ಕಲಾ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಸುಮಾರು 50 ಕಲಾಕೃತಿಗಳು ಪ್ರದರ್ಶಿತವಾಗಲಿವೆ ಎಂದು ಬೋಧನಾ ಸಹಾಯಕ ದತ್ತಾತ್ರೇಯ ಎನ್. ಭಟ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
  ಕಲಾವಿದರಾದ ಸುರೇಶ್ ವಾಘ್ಮೋರೆ, ಪ್ರಸನ್ನ ರೇವನ್, ಅನಿಮೀಶ್ ನಾಗನೂರು, ಮೋಹನ್‌ಕುಮಾರ್ ಈರಪ್ಪ, ಟಿ.ಬಿ.ಕೋಡಿಹಳ್ಳಿ,  ಜಿ.ಹರಿಕುಮಾರ್, ನಾಗೇಂದ್ರ ಆಚಾರ್ಯ, ಎನ್.ಶ್ವೇತಾ ಈ ಪ್ರದರ್ಶನ ನೀಡುವರು.
  ಕನ್ನಡ ಅಕ್ಷರಗಳಿಗೆ ಸುಂದರ, ಕಲಾತ್ಮಕ, ಲಿಪಿಗಾರಿಕೆಯ ಮೆರಗನ್ನು ನೀಡಿ, ಕನ್ನಡ ಅಕ್ಷರ ಪ್ರೀತಿಯ ಜತೆಗೆ ಭಾಷೆ ಸಂಸ್ಕೃತಿಯನ್ನು ಸಹ ಪ್ರೀತಿಸಲು ಉತ್ತೇಜಿಸುವ ಸಮಾನಮನಸ್ಕ ಕಲಾವಿದರ ಗುಂಪು ಅಕ್ಷರ ಸಿಂಗಾರೋತ್ಸವ ಆಯೋಜಿಸುತ್ತ ಬಂದಿದೆ ಎಂದರು.
  ಜೂ.14ರ ಸಂಜೆ 4.30ಕ್ಕೆ ಕರ್ನಾಟಕ ಲಲಿತಕಲಾ ಅಕಾಡೆಮಿ ನಿಯೋಜಿತ ಅಧ್ಯಕ್ಷ ಪ.ಸ.ಕುಮಾರ ಪ್ರದರ್ಶನ ಉದ್ಘಾಟಿಸುವರು. ಪ್ರಾಚಾರ್ಯ ಜೈರಾಜ ಎಂ. ಚಿಕ್ಕಪಾಟೀಲ, ಸಹಾಯಕ ಪ್ರಾಧ್ಯಾಪಕ  ಡಾ.ಸತೀಶಕುಮಾರ್ ಪಿ ವಲ್ಲೇಪುರೆ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
  ಸುದ್ದಿಗೋಷ್ಠಿಯಲ್ಲಿ ಮಹಾವಿದ್ಯಾಲಯದ ಪ್ರಮೋದ್ ಆಚಾರ್, ಹರೀಶ್, ನವೀನ್‌ಕುಮಾರ್ ಇದ್ದರು.

  See also  ಜಿಲ್ಲಾದ್ಯಂತ ಆಶಾ ಕಾರ್ಯಕರ್ತೆಯರ ಮನವಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts