davanagere album song

ಇಟ್ಸ್ ದಾವಣಗೆರೆ ಆಲ್ಬಂ ಸಾಂಗ್ ಬಿಡುಗಡೆ

ದಾವಣಗೆರೆ: ದಾವಣಗೆರೆಯ ವಿಶೇಷತೆಗಳ ಕುರಿತ ಚಿತ್ರಿಕರಣಗೊಂಡಿರುವ ಇಟ್ಸ್ ದಾವಣಗೆರೆ ಆಲ್ಬಂ ಸಾಂಗ್ ಯುಟ್ಯೂಬ್ ಬ್ರಾೃಂಡ್ ಸ್ಟುಡಿಯೋ ಚಾನೆಲ್‌ನಲ್ಲಿ ಗುರುವಾರ ಬಿಡುಗಡೆ ಮಾಡಲಾಯಿತು.

ಇಟ್ಸ್ ದಾವಣಗೆರೆ ತಂಡದಿಂದ ಸಿದ್ಧಗೊಂಡಿರುವ ಆಲ್ಬಂ ಹಾಡಿಗೆ ಆಕಾಶ್, ಕಾರ್ತಿಕ್ ಸಾಹಿತ್ಯ ನೀಡಿದ್ದು, ನಿರ್ಮಾಣಕ್ಕೆ 70ಸಾವಿರ ರೂ. ಖರ್ಚು ಮಾಡಲಾಗಿದೆ ಎಂದು ತಂಡದ ಹಾಲೇಶ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೂರು ನಿಮಿಷದ ಹಾಡು ರ‌್ಯಾಪ್, ಸೆಮಿ ಕ್ಲಾಸಿಕಲ್, ರಾಕ್ ಬ್ಯಾಂಡ್ ಶೈಲಿಯಲ್ಲಿ ಚಿತ್ರಿಕರಣಗೊಂಡಿದ್ದು, ದಾವಣಗೆರೆಯನ್ನು ಉತ್ತಮವಾಗಿ ತೋರಿಸುವ ಉದ್ದೇಶದಿಂದ ಆಲ್ಬಂ ಹಾಡು ನಿರ್ಮಿಸಲಾಗಿದೆ ಎಂದು ಹೇಳಿದರು.

ಬೆಣ್ಣೆ ದೋಸೆ, ಗಾಜಿನ ಮನೆ, ಸೂಳೆಕೆರೆ, ಇಂಜಿನಿಯರಿಂಗ್ ಕಾಲೇಜುಗಳು ಸೇರಿ ವಿವಿಧ ಸ್ಥಳಗಳಲ್ಲಿ ಚಿತ್ರಿಕರಿಸಲಾಗಿದೆ.ತಂಡದ ಕಾರ್ತಿಕ್, ಸುಕೃತ, ವಿಷು ಕ್ರೇನಿ, ಸುಷ್ಮಿತಾ, ಸನತ್, ಆಕಾಶ್ ಇತರರಿದ್ದರು.