ದಾವಣಗೆರೆ : ಪ್ರೊ.ಬಿ.ವಿ. ವೀರಭದ್ರಪ್ಪ ತಮ್ಮ ಕೃತಿಗಳ ಮೂಲಕ ಜನರಲ್ಲಿ ವೈಚಾರಿಕತೆಯನ್ನು ಮೂಡಿಸಿದರು ಎಂದು ಜಾನಪದ ತಜ್ಞ ಡಾ.ಎಂ.ಜಿ. ಈಶ್ವರಪ್ಪ ಹೇಳಿದರು.
ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ಮಂಗಳವಾರ ಆಯೋಜಿಸಿದ್ದ, ‘ಬಿ.ವಿ.ವೀ ನೆನಪು’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಲೋಕಾಯತ ಮನೋಭಾವದ ಅವರು ನಾಸ್ತಿಕವಾದಿಯಾಗಿದ್ದರು. ಅವರು ರಚಿಸಿದ ‘ಲೋಕಾಯತ’, ‘ವಾಸ್ತು ಎಷ್ಟು ವಾಸ್ತವ’, ‘ವೇದಾಂತ ರೆಜಿಮೆಂಟ್’ನಂಥ ಪ್ರಖರ ಚಿಂತನೆಯ ಕೃತಿಗಳನ್ನು ನಾಡಿಗೆ ನೀಡಿದ್ದಾರೆ. ಕನ್ನಡದ ವಿಚಾರ ಸಾಹಿತ್ಯದಲ್ಲಿ ಬಿವಿವೀ ದೊಡ್ಡ ಹೆಸರು ಎಂದರು.
ಭಗವದ್ಗೀತೆ, ವೇದ, ಉಪನಿಷತ್ತುಗಳನ್ನು ಆಳವಾಗಿ ಓದಿಕೊಂಡಿದ್ದ ಅವರು ಅವುಗಳ ಬಗ್ಗೆ ತಮ್ಮದೇ ಆದ ಒಳನೋಟವನ್ನು ಬರವಣಿಗೆಯಲ್ಲಿ ನೀಡಿದ್ದರು. ಅವರ ಪುಸ್ತಕಗಳನ್ನು ಓದುವುದೇ ಅವರಿಗೆ ನೀಡುವ ಗೌರವ ಎಂದು ತಿಳಿಸಿದರು.
ಗಟ್ಟಿ ನಿಲುವಿನೊಂದಿಗೆ ಅವರು ರಚಿಸುತ್ತಿದ್ದ ಬರಹಗಳು ಸಂಪ್ರದಾಯವಾದಿಗಳಿಗೆ ಇರುಸುಮುರುಸು ಉಂಟು ಮಾಡುತ್ತಿದ್ದವು. ಅವರ ವಿಚಾರಗಳು ಇಂದಿಗೂ ಪ್ರಸ್ತುತ ಎಂದು ಹೇಳಿದರು.
ತಾವು ದಾವಣಗೆರೆಗೆ ಬಂದಾಗ ಕಾಲೇಜಿನಲ್ಲಿ ಬಿವಿವೀ ತಮಗೆ ಹಿರಿಯ ಸಹೋದ್ಯೋಗಿಯಾಗಿದ್ದರು. ಜತೆಯಲ್ಲಿದ್ದವರಿಗೆ ಒಳಿತನ್ನು ಬಯಸಿದರು ಎಂದು ಮೆಲುಕು ಹಾಕಿದರು.
ಮಾಜಿ ಶಾಸಕ ಮಹಿಮ ಜೆ. ಪಟೇಲ್ ಮಾತನಾಡಿ, ಸಾವಿರಾರು ವರ್ಷಗಳಿಂದ ಅನೇಕ ಚಿಂತಕರು ನಮ್ಮಲ್ಲಿ ವೈಚಾರಿಕ ಪ್ರಜ್ಞೆಯನ್ನು ಬೆಳೆಸುತ್ತ ಬಂದಿದ್ದಾರೆ ಎಂದು ತಿಳಿಸಿದರು.
ತಾವು ಸಾವಯವ ಕೃಷಿ, ಸಾವಯವ ರಾಜಕಾರಣದಲ್ಲಿ ನಂಬಿಕೆ ಇಟ್ಟಿದ್ದು ಭವಿಷ್ಯದ ಬಗ್ಗೆ ಚಿಂತನೆ ನಡೆಸಬೇಕಿದೆ. ವಿಷಮುಕ್ತ ಆಹಾರದ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.
ವಿವಿಧ ಕ್ಷೇತ್ರಗಳು ವ್ಯಾಪಾರೀಕರಣಗೊಂಡಿವೆ, ರಾಜಕಾರಣವೂ ದಂಧೆಯಂತಾಗಿದೆ. ಕೃಷಿಯೂ ಹಣಕ್ಕಾಗಿ ಎನ್ನುವಂತಾಗಬಾರದು ಎಂದು ತಿಳಿಸಿದರು.
ವೈಚಾರಿಕ ಪ್ರಜ್ಞೆ ಮೂಡಿಸಿದ ಲೇಖಕ ಪ್ರೊ. ಬಿವಿವೀ
ಚಳಿಗಾಲದಲ್ಲಿ ಈ ಒಂದು ಹಣ್ಣನ್ನು ತಿಂದರೆ ಸಾಕು.. ರೋಗಗಳೇ ಬರುವುದಿಲ್ಲ..fruits
fruits : ಚಳಿಗಾಲ ಬಂದಿದೆ ಎಂದರೆ ಕೆಮ್ಮು, ನೆಗಡಿ, ಜ್ವರ, ಗಂಟಲು ನೋವು, ಕೀಲು ನೋವು…
ಮಕರ ರಾಶಿಗೆ ಬುಧ ಪ್ರವೇಶ: ಈ 5 ರಾಶಿಯವರಿಗೆ ರಾಜಯೋಗ, ಖುಲಾಯಿಸಲಿದೆ ಅದೃಷ್ಟ! Zodiac Sign
Zodiac Sign : ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ರಾಶಿ, ನಕ್ಷತ್ರ ಹಾಗೂ ಗ್ರಹಗಳ…
ಪೇನ್ ಕಿಲ್ಲರ್ ಮಾತ್ರೆ vs ಜೆಲ್… ಎರಡರಲ್ಲಿ ಯಾವುದು ಉತ್ತಮ? ಇಲ್ಲಿದೆ ಉಪಯುಕ್ತ ಮಾಹಿತಿ… Painkiller Tablet vs Gel
Painkiller Tablet vs Gel : ದೇಹವು ಗಾಯಗೊಂಡಾಗ ಅಥವಾ ಉಳುಕಿದಾಗ ನೋವು ಅನುಭವಿಸುವುದು ಸಹಜ.…