ಚನ್ನಗಿರಿ : ಕನ್ನಡಿಗರು ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆ ಉಳಿಸಲು ಸದಾ ಕಟಿಬದ್ಧರಾಗಬೇಕು ಎಂದು ಕರ್ನಾಟಕ ಕಾರು ಚಾಲಕರ ಸಂಘದ ಜಿಲ್ಲಾ ಸಂಚಾಲಕ ಅರವಿಂದ ಅಕ್ಷಯ್ ಹೇಳಿದರು. ಕರ್ನಾಟಕ ಕಾರು ಚಾಲಕರ ಸಂಘ, ಚನ್ನಮ್ಮಾಜಿ ಕಾರು ಚಾಲಕರ ಸಂಘದ ಸಹಯೋಗದಡಿ ಗಾಂಧಿವೃತ್ತದ ಬಳಿ ಶನಿವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಸಿರಿನ ಸಿರಿ ಹೊದ್ದ ಸುಂದರ ಬೆಟ್ಟ ಗುಡ್ಡಗಳು, ಹರಿಯುವ ನದಿಗಳು, ಸಾಧು ಸಂತರು, ದಾಸರು, ಶಿವಶರಣರು ಹಾಗೂ ಕವಿಗಳಿಂದ ಕಂಗೊಳಿಸುತ್ತಿರುವ ಸಮೃದ್ಧ ನಾಡಿನಲ್ಲಿ ಜನಿಸಿರುವುದೇ ನಮ್ಮೆಲ್ಲರ ಪುಣ್ಯ. ಈ ನೆಲದ ಅಸ್ಮಿತೆ ಉಳಿಸಬೇಕು ಎಂದರು. ಕೇವಲ ನವೆಂಬರ್ ತಿಂಗಳ ಕನ್ನಡಿಗರಾಗದೆ ನಾಡಿನ ಜವಾಬ್ದಾರಿಯುತ ಪ್ರಜೆಗಳಾಗಿ ನಿತ್ಯ ವ್ಯವಹಾರದಲ್ಲಿ ಕನ್ನಡ ಬಳಕೆ ಮಾಡುವುದನ್ನು ರೂಢಿಸಿಕೊಳ್ಳಬೇಕು. ಅನ್ಯ ಭಾಷಿಕರಿಗೂ ಕನ್ನಡ ಕಲಿಸಬೇಕು ಎಂದರು. ಚನ್ನಮ್ಮಾಜಿ ಕಾರು ಚಾಲಕರ ಸಂಘದ ಅಧ್ಯಕ್ಷ ಎನ್.ಮಧುಚಂದ್ರ ಮಾತನಾಡಿ, ಮಕ್ಕಳನ್ನು ಕನ್ನಡ ಶಾಲೆಗಳಿಗೆ ದಾಖಲಿಸಬೇಕು. ಆಂಗ್ಲ ಮಾಧ್ಯಮಕ್ಕೆ ಸೇರಿಸಿದರೆ ಮಾತ್ರ ಗೌರವ ಎಂಬ ಭಾವನೆಯಿಂದ ಹೊರಬರಬೇಕು. ಪ್ರತಿ ಮನೆಯಲ್ಲಿ ಕನ್ನಡ ದೀಪ ಬೆಳಗಬೇಕು ಎಂದು ತಿಳಿಸಿದರು. ರಾಜ್ಯೋತ್ಸವ ಅಂಗವಾಗಿ ಅನ್ನ ಸಂತರ್ಪಣೆ ನಡೆಯಿತು. ಕಾರು ಚಾಲಕರ ಸಂಘದ ಕಾರ್ಯದರ್ಶಿ ಇಮ್ರಾನ್, ಸಾದಿಕ್, ಗೌರವ ಅಧ್ಯಕ್ಷ ಅಣ್ಣಪ್ಪ, ಖಜಾಂಚಿ ಅಶೋಕ್, ಪೃಥ್ವಿಗೌಡ, ಸಂಚಾಲಕ ಜೋಳದಾಳು ವಿಜಯಕುಮಾರ್, ಲಾರಿ ಮಂಜಪ್ಪ, ರಾಕೇಶ್, ಇಫ್ರಾನ್, ಟಿ.ಎನ್.ಸಂಜಯ್ ಇದ್ದರು.
ಮನೆ, ಮನೆಯಲ್ಲಿ ಹಚ್ಚಬೇಕು ಕನ್ನಡದ ಹಣತೆ
ಉಪ್ಪಿನಕಾಯಿ ಸೇವನೆಯಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ; ತಿಳಿದ್ರೆ ನೀವು ಮಿಸ್ ಮಾಡೋದೆ ಇಲ್ಲ | Health Tips
ಈ ವರ್ಷ ಗೂಗಲ್ನಲ್ಲಿ ಅತಿ ಹೆಚ್ಚು ಹುಡುಕಿದ ಪಾಕವಿಧಾನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಇದರಲ್ಲಿ ಉಪ್ಪಿನಕಾಯಿ ಭಾರತದಲ್ಲಿ…
ಟಾಯ್ಲೆಟ್ನ ಕೊಳಕು ವಾಸನೆ, ಹಳದಿ ಕಲೆ ತೆಗೆದುಹಾಕುವುದೇಗೆ?; ಇಲ್ಲಿದೆ ಸಿಂಪಲ್ ವಿಧಾನ | Tips
ಮನೆಯನ್ನು ಸ್ವಚ್ಛಗೊಳಿಸಲು ಮತ್ತು ಅಲಂಕರಿಸಲು ಜನರು ಶ್ರಮಿಸುತ್ತಾರೆ. ಹೊರಗಿನಿಂದ ಅವರ ಮನೆಯು ಸಾಕಷ್ಟು ಐಷಾರಾಮಿಯಾಗಿ ಕಾಣುತ್ತದೆ.…
ಚಳಿಗಾಲದಲ್ಲಿ ಬಿಸಿ ಚಹಾ ಮತ್ತು ಕಾಫಿ ಸೇವಿಸುತ್ತಿದ್ದೀರಾ; ಅಪಾಯ ತಪ್ಪಿದಲ್ಲ.. ಎಚ್ಚರದಿಂದಿರಿ | Health Tips
ಚಳಿಗಾಲ ಬಂದ ಕೂಡಲೆ ಟೀ, ಕಾಫಿ ಸೇವನೆ ಹೆಚ್ಚುತ್ತದೆ. ಈ ಬಿಸಿ ಪಾನೀಯವು ದೇಹಕ್ಕೆ ಶಾಖವನ್ನು…