ದಾವಣಗೆರೆ : ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಪಾಕಿಸ್ತಾನದ ಹೀರೋಗಳು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ನವರಿಗೆ ಪಾಕಿಸ್ತಾನದಿಂದ ಫ್ರೀ ವೀಸಾ ಕೊಡುತ್ತಾರೆ, ಹೋಗಿ ಎಲ್ಲೆಲ್ಲಿ ಉಗ್ರರ ಕ್ಯಾಂಪ್‌ಮೇಲೆ ದಾಳಿಯಾಗಿದೆ ಎಂದು ನೋಡಿಕೊಂಡು ಬರಲಿ ಎಂದು ತಿಳಿಸಿದರು. ಸೈನಿಕರಿಗೆ ನೈತಿಕ ಬೆಂಬಲ ನೀಡಬೇಕು. ಇಂತಹ ಸನ್ನಿವೇಶದಲ್ಲಿ ಒಗ್ಗಟ್ಟಾಗಿ ಒಂದೇ ಧ್ವನಿಯಿಂದ ಮಾತನಾಡಬೇಕಿದೆ. ಭಯೋತ್ಪಾದಕರ ಅಡ್ಡೆಗಳನ್ನು ನಾಶ ಮಾಡಿದ್ದಾರೆ, ಇಡೀ ಜಗತ್ತಿಗೇ ಗೊತ್ತಿದೆ ಎಂದು ತಿಳಿಸಿದರು. ಸಚಿವರಾದ ಪ್ರಿಯಾಂಕ ಖರ್ಗೆ, ಸಂತೋಷ್ ಲಾಡ್, ದಿನೇಶ್ ಗುಂಡೂರಾವ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಟೀಕೆ ಮಾಡುತ್ತಿದ್ದಾರೆ. ಪಾಕಿಸ್ತಾನಿ ಅಭಿಮಾನಿಗಳನ್ನು ಖುಷಿಡಿಸಲು ಈ ರೀತಿ ಮಾಡುತ್ತಿದ್ದಾರೆ. ಭಾರತದ ಸೈನಿಕರಿಗೆ ಅಪಮಾನ ಮಾಡುತ್ತಿದ್ದಾರೆ.
