ದಾವಣಗೆರೆ : ಈಗ ಎಲ್ಲೆಡೆ ಕ್ರಿಕೆಟ್ ಜ್ವರ, ಅದರದೇ ಚರ್ಚೆ. ಭಾರತ ತಾಯ್ನಡಿನಲ್ಲಿ ಮತ್ತೊಮ್ಮೆ ವಿಶ್ವಕಪ್ ಮುಡಿಗೇರಿಸಿಕೊಳ್ಳಲಿ ಎಂಬುದು ಕೋಟ್ಯಂತರ ಭಾರತೀಯರ ಕನಸು. ನಗರದ ಸಿದ್ಧಗಂಗಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ‘ವರ್ಲ್ಡ್ ಕಪ್ ನಮ್ಮದು’ ಎಂಬ ವಿಡಿಯೋ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ.
ಹನ್ನೆರಡು ವರ್ಷಗಳ ಹಿಂದೆ ನಮ್ಮ ಸಂಸ್ಥೆಯ ಮಕ್ಕಳು ‘ಗೆದ್ದು ಬಾ ಇಂಡಿಯಾ’ ಹಾಡಿನ ಮೂಲಕ ಶುಭ ಹಾರೈಸಿದ್ದರು. ಆಗ ನಾಯಕ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ತಂಡ ವರ್ಲ್ಡ್ ಕಪ್ ಗೆದ್ದು ಬೀಗಿತ್ತು. ಈ ಬಾರಿಯೂ ತಂಡಕ್ಕೆ ಉತ್ತೇಜನ ನೀಡಲು ಮಕ್ಕಳು ಅಂಥದೇ ಹೊಸ ಹಾಡಿಗೆ ಹೆಜ್ಜೆ ಹಾಕಿದ್ದಾರೆ ಎಂದು ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೌಜಾ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಸ್ಫೂರ್ತಿದಾಯಕ ವಿಡಿಯೋವನ್ನು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ತಮ್ಮ ಕಚೇರಿಯಲ್ಲಿ ಶುಕ್ರವಾರ ಬಿಡುಗಡೆಗೊಳಿಸಿದರು.
ಸಿದ್ಧಗಂಗಾ ಶಾಲೆಯ ಯೂಟ್ಯೂಬ್ ಚಾನೆಲ್ ಮೂಲಕ 15 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋ ವೀಕ್ಷಿಸಿ ಭಾರತ ತಂಡವನ್ನು ಬೆಂಬಲಿಸುತ್ತಿದ್ದಾರೆ. ಡಾ. ಜಯಂತ್ ಪರಿಕಲ್ಪನೆ, ನಿರ್ದೇಶನ, ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ವರ್ಲ್ಡ್ ಕಪ್ ನಮ್ಮದು ಹಾಡಿಗೆ ಮಾನಸ ವಿ.ಎಸ್ ಮತ್ತು ಪ್ರಶಾಂತ್ ಧ್ವನಿ ನೀಡಿದ್ದಾರೆ. ಸುಮನ್ ನೃತ್ಯ ಸಂಯೋಜನೆ ಮಾಡಿದ್ದಾರೆ ಎಂದರು.
ರೈಸಿಂಗ್ ಟ್ಯಾಲೆಂಟ್ ಸ್ಟುಡಿಯೋದ ಸಿಕಂದರ್ ರೆಕಾರ್ಡಿಂಗ್ ಮಾಡಿದ್ದಾರೆ. ಸಮೀರ್‌ನ ಅತ್ಯದ್ಭುತ ಕ್ಯಾಮೆರಾ ಕೈಚಳಕ ಹಾಗೂ ಎಡಿಟಿಂಗ್ ಈ ವಿಡಿಯೋದ ಹೈಲೈಟ್. ಶಾಲೆಯ 2 ಸಾವಿರ ವಿದ್ಯಾರ್ಥಿಗಳು ಈ ವಿಡಿಯೋ ರೆಕಾರ್ಡಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ ಎಂದು ಹೇಳಿದರು.
ವಿಡಿಯೋಗಾಗಿ ಯಕ್ಷಗಾನ ಮೇಕಪ್ ಮಾಡಿದವರು ಹಟ್ಟಿಯಂಗಡಿ ಆನಂದ ಶೆಟ್ಟರು ಮತ್ತು ಬೇಳೂರು ಸಂತೋಷ್ ಶೆಟ್ಟರು. ಬೃಂದಾ ಮತ್ತು ಶಿಕ್ಷಕ, ಪಾಲಕರು ಮಕ್ಕಳನ್ನು ವೈವಿಧ್ಯಮಯ ಉಡುಪುಗಳಿಂದ ಸಿಂಗಾರಗೊಳಿಸಿ ಹಾಡಿನ ಮೆರುಗು ಹೆಚ್ಚಿಸಿದ್ದಾರೆ. ಸಂಸ್ಥೆಯ ಕಾರ್ಯದರ್ಶಿ ಹೇಮಂತ್ ಜತೆಗೆ ಹಿರಿಯ ವಿದ್ಯಾರ್ಥಿಗಳಾದ ಹರ್ಷ, ಮನು, ಸಾಮ್ರಾಟ್, ನರೇಂದ್ರ ವಿಡಿಯೋ ಚಿತ್ರೀಕರಣದಲ್ಲಿ ಸಹಕರಿಸಿದ್ದಾರೆ ಎಂದು ತಿಳಿಸಿದರು.
ಸಂಸ್ಥೆಯ ನಿರ್ದೇಶಕ ಡಾ. ಜಯಂತ್ ಮಾತನಾಡಿ, ಈ ವಿಡಿಯೋ ನಿರ್ಮಾಣಕ್ಕೆ 40 ಸಾವಿರ ರೂ. ವೆಚ್ಚವಾಗಿದೆ. ಸಿದ್ಧಗಂಗಾ ಶಾಲಾ ಆವರಣ. ಆನಗೋಡಿನ ಎಂಎಸ್‌ಎಸ್ ಸ್ಮಾರಕ, ಕೊಂಡಜ್ಜಿಯ ಎಂಎಸ್‌ಎಸ್ ತರಬೇತಿ ಕೇಂದ್ರದಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಾದ ವಿ.ಎಸ್. ಮಾನಸ, ಮನು, ಮನುಶ್ರೀ, ಸಮೀರ್, ಸಿಂಚನಾ, ಲಾಸ್ಯಾ, ಧನುಶ್ರೀ ನಾಡಿಗೇರ್, ಪಾಲಕ ಸಿಕಂದರ್ ಸುದ್ದಿಗೋಷ್ಠಿಯಲ್ಲಿದ್ದರು.
‘ವರ್ಲ್ಡ್ ಕಪ್ ನಮ್ಮದು’ ವಿಡಿಯೋ
ಚಳಿಗಾಲದಲ್ಲಿ ಈ ಒಂದು ಹಣ್ಣನ್ನು ತಿಂದರೆ ಸಾಕು.. ರೋಗಗಳೇ ಬರುವುದಿಲ್ಲ..fruits
fruits : ಚಳಿಗಾಲ ಬಂದಿದೆ ಎಂದರೆ ಕೆಮ್ಮು, ನೆಗಡಿ, ಜ್ವರ, ಗಂಟಲು ನೋವು, ಕೀಲು ನೋವು…
ಮಕರ ರಾಶಿಗೆ ಬುಧ ಪ್ರವೇಶ: ಈ 5 ರಾಶಿಯವರಿಗೆ ರಾಜಯೋಗ, ಖುಲಾಯಿಸಲಿದೆ ಅದೃಷ್ಟ! Zodiac Sign
Zodiac Sign : ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ರಾಶಿ, ನಕ್ಷತ್ರ ಹಾಗೂ ಗ್ರಹಗಳ…
ಪೇನ್ ಕಿಲ್ಲರ್ ಮಾತ್ರೆ vs ಜೆಲ್… ಎರಡರಲ್ಲಿ ಯಾವುದು ಉತ್ತಮ? ಇಲ್ಲಿದೆ ಉಪಯುಕ್ತ ಮಾಹಿತಿ… Painkiller Tablet vs Gel
Painkiller Tablet vs Gel : ದೇಹವು ಗಾಯಗೊಂಡಾಗ ಅಥವಾ ಉಳುಕಿದಾಗ ನೋವು ಅನುಭವಿಸುವುದು ಸಹಜ.…