ಹೊನ್ನಾಳಿ : ರಾಷ್ಟ್ರೀಯತೆ, ರಾಷ್ಟ್ರಗೀತೆ ಮತ್ತು ಧ್ವಜದ ಬಗ್ಗೆ ಜಾಗೃತಿ ಮೂಡಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಪಟ್ಟಣದ ಗುರುಭವನದಲ್ಲಿ ಶುಕ್ರವಾರ ರಾಷ್ಟ್ರಗೀತೆ, ರಾಷ್ಟ್ರ ಧ್ವಜ ಹಾಗೂ ಡ್ರಮ್‌ಸೆಟ್ ನಿರ್ವಹಣೆ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಯುವಜನರು ಟಿವಿ ವೀಕ್ಷಣೆ ಹಾಗೂ ಮೊಬೈಲ್ ಬಳಕೆಯಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಹಾಗೂ ಓದಿನ ಒತ್ತಡದಿಂದಾಗಿ ರಾಷ್ಟ್ರಗೀತೆ ನಿರರ್ಗಳವಾಗಿ ಹಾಡುವುದು, ರಾಷ್ಟ್ರಧ್ವಜದ ಬಗ್ಗೆ ಮಾಹಿತಿಯ ಕೊರತೆಯಿದೆ ಎಂದು ತಿಳಿಸಿದರು. ಕೆಲವು ಶಿಕ್ಷಕರಲ್ಲಿ ರಾಷ್ಟ್ರ ಧ್ವಜ ನಿರ್ವಹಣೆ ಮಾಹಿತಿ ಕೊರತೆಯಿಂದ ರಾಷ್ಟ್ರೀಯ ಹಬ್ಬಗಳಲ್ಲಿ ಲೋಪದೋಷ ಉಂಟಾಗುವ ಸಂಭವ ಇದ್ದು, ದೈಹಿಕ ಶಿಕ್ಷಣ ಶಿಕ್ಷಕರಿಗೆ ಕಾರ್ಯಾಗಾರದ ಮೂಲಕ ಮಾಹಿತಿ ನೀಡುತ್ತಿರುವುದು ಸಮಯೋಚಿತವಾಗಿದೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಟಿ. ನಿಂಗಪ್ಪ ಮಾತನಾಡಿ, ಶಿಕ್ಷಕರಿಗೆ ರಾಷ್ಟ್ರಗೀತೆ ಯಾವರೀತಿ ಹಾಡಬೇಕು, ರಾಷ್ಟ್ರೀಯ ಹಬ್ಬಗಳಲ್ಲಿ ರಾಷ್ಟ್ರ ಧ್ವಜದ ಕ್ರಮಬದ್ಧ ನಿರ್ವಹಣೆ ಬಗ್ಗೆ ತಿಳಿವಳಿಕೆ ನೀಡುವ ಕಾರ್ಯಕ್ರಮ ಪ್ರಸ್ತುತವಾಗಿದೆ ಎಂದು ಹೇಳಿದರು. ಭಾರತ್ ಸೇವಾದಳ ಜಿಲ್ಲಾ ಸಂಚಾಲಕ ಜಯಣ್ಣ , ಬಿಆರ್‌ಸಿ ತಿಪ್ಪೇಶಪ್ಪ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಜಗದೀಶ್ ಮಾತನಾಡಿದರು. ಜಿಲ್ಲಾ ಸಂಘಟಕ ಫಕ್ಕೀರಗೌಡ, ಜಿಲ್ಲಾ ಕೋಶಾಧ್ಯಕ್ಷ ಕೆ.ರುದ್ರಯ್ಯ, ಸಂಪನ್ಮೂಲ ವ್ಯಕ್ತಿಗಳಾದ ಭೀಮಣ್ಣ, ಹನುಮಂತಪ್ಪ, ಮಂಜುನಾಥ್, ಲಕ್ಷ್ಮಣ್, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಗಂಡುಗಲಿ, ಕಾರ್ಯದರ್ಶಿ ಹಾಲೇಶ್, ದಿನಕರ್, ಇಸಿಒಸ ಅಪ್ಸರ್ ಅಹಮ್ಮದ್ ಇದ್ದರು. ಜಿಲ್ಲಾ ಮತ್ತು ತಾಲೂಕು ಸೇವಾದಳ ಘಟಕ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಸಂಪನ್ಮೂಲಾಧಿಕಾರಿ ಕಚೇರಿ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ರಾಷ್ಟ್ರಗೀತೆ, ಧ್ವಜದ ಬಗ್ಗೆ ಜಾಗೃತಿ ಅಗತ್ಯ

ಕಲ್ಲಂಗಡಿ ಹಣ್ಣು ತಿಂದು ಸಿಪ್ಪೆ ಬಿಸಾಡ್ತೀರಾ? ಹಣ್ಣಿನ ಸಿಪ್ಪೆ ತಿಂದ್ರೆ ಪುರುಷರಿಗೆ ಆ ಸಾಮರ್ಥ್ಯ ಹೆಚ್ಚಾಗುವುದು! watermelon
watermelon: ಬೇಸಿಗೆ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು ಕಲ್ಲಂಗಡಿ ಹಣ್ಣು. ನಾವು ಕಲ್ಲಂಗಡಿ ಹಣ್ಣುಗಳನ್ನು…
ಕುತ್ತಿಗೆ-ತಲೆ ನೋವನ್ನು ನಿರ್ಲಕ್ಷಿಸುತ್ತಿದ್ದೀರಾ?; ಎಚ್ಚರದಿಂದಿರಿ.. ಇದು ಅಪಾಯದ ಮುನ್ಸೂಚನೆ | Health Tips
ಕುತ್ತಿಗೆ ಮತ್ತು ಭುಜದ ಸುತ್ತಲಿನ ಪ್ರದೇಶದಲ್ಲಿನ ನೋವನ್ನು ನಿರ್ಲಕ್ಷಿಸುವ ತಪ್ಪನ್ನು ಮಾಡಬೇಡಿ. ಏಕೆಂದರೆ ಇದು ಸರ್ವಿಕಲ್…
ಅಳದಿದ್ದರು ಕಣ್ಣೀರು ಬರುತ್ತಿದೆಯೇ; ತಜ್ಞರು ಸೂಚಿಸಿರುವ ಸಿಂಪಲ್ ಪರಿಹಾರ ಹೀಗಿದೆ.. Health Tips
ಸೌಂದರ್ಯವನ್ನು ಅಳೆಯಲು ಕಣ್ಣುಗಳು ಒಂದು ಪ್ರಮುಖ ಮಾನದಂಡವಾಗಿದೆ. ಇದು ಪ್ರಮುಖ ಇಂದ್ರಿಯಗಳಲ್ಲಿ ಒಂದಾಗಿದೆ. ಅದಿಲ್ಲದೆ ಜೀವನವನ್ನು…