More

  ಮಹಿಳಾ ಸಬಲೀಕರಣಕ್ಕೆ ಅಂಚೆ ಇಲಾಖೆ ನೆರವು

  ದಾವಣಗೆರೆ : ವಿಶ್ವ ಮಹಿಳಾ ದಿನಾಚರಣೆ ಪೂರ್ವಭಾವಿಯಾಗಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ದಾವಣಗೆರೆ ಮಹಿಳಾ ವೈದ್ಯಾಧಿಕಾರಿಗಳ ಒಕ್ಕೂಟದಿಂದ, ಮಹಿಳಾ ಸಬಲೀಕರಣದಲ್ಲಿ ಅಂಚೆ ಇಲಾಖೆ ಪಾತ್ರದ ಕುರಿತು ಜಾಗೃತಿ ಕಾರ‌್ಯಕ್ರಮವನ್ನು ಐಎಂಎ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿತ್ತು.
   ಎಸ್.ಎಸ್. ಲೇಔಟ್ ಅಂಚೆ ಕಚೇರಿಯ ಅಂಚೆ ಪಾಲಕ ಎ.ಆರ್. ಹರೀಶ್ ಉಪನ್ಯಾಸ ನೀಡಿ, ಅಂಚೆ ಇಲಾಖೆಯು ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೆಟ್, ಸುಕನ್ಯಾ ಸಮೃದ್ಧಿ ಖಾತೆಗಳಂಥ ಯೋಜನೆಗಳ ಮೂಲಕ ಮಹಿಳಾ ಸಬಲೀಕರಣಕ್ಕೆ ನೆರವಾಗುತ್ತಿದೆ. ಇವುಗಳ ಬಗ್ಗೆ ಮ ಹಿಳೆಯರಲ್ಲಿ ಜಾಗೃತಿ ಮೂಡಬೇಕಿದೆ ಎಂದರು.
   ಮಹಿಳೆಯರು ಈ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು. ಇಲಾಖೆಯು ಜನರ ಮನೆ ಬಾಗಿಲಿಗೆ ಹಲವು ಸೇವೆಗಳನ್ನು ಒದಗಿಸುತ್ತಿದೆ ಎಂದು ತಿಳಿಸಿದರು.
   ಒಕ್ಕೂಟದ ಡಾ.ರಜನಿ, ಡಾ. ರಾಧಾ, ಡಾ.ಚೈತ್ರಾ, ಪ್ರೇಮಾ ಮಹೇಶ್, ಶಿವಪ್ರಭಾ ದೊಡ್ಡಿಕೊಪ್ಪದ್, ಸುಜಾತಾ ರವೀಂದ್ರ, ಅನಿತಾ ಬಸವರಾಜ್, ವಾಸಂತಿ ಗೋಪಲ್ಪುರ, ತುಳಸಿ ಮಹೇಶ್ವರಪ್ಪ, ಉಷಾ ಸಿದ್ದಲಿಂಗಪ್ಪ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts