ಜಿಲ್ಲೆಯ 13 ಗ್ರಾಮಗಳು ರಾಜ್ಯಕ್ಕೆ ಪ್ರಥಮ  

blank

ದಾವಣಗೆರೆ : ಸುಸ್ಥಿರ ಗ್ರಾಮೀಣ ಕುಡಿಯುವ ನೀರು ಸರಬರಾಜು ಜೆಜೆಎಂ ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ 32 ಗ್ರಾಮಗಳು 24*7 ಶುದ್ಧ ಕುಡಿಯುವ ನೀರು ಪೂರೈಕೆ ಮಾಡುತ್ತಿವೆ. ಈ ಪೈಕಿ ದಾವಣಗೆರೆ ಜಿಲ್ಲೆಯಲ್ಲಿ 13 ಗ್ರಾಮಗಳು ಶುದ್ಧ ಹಾಗೂ ಸುರಕ್ಷಿತ ನೀರು ಒದಗಿಸುವ ಮೂಲಕ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿವೆ ಎಂದು ವಿಶ್ವಬ್ಯಾಂಕ್ ಟಾಸ್ಕ್ ಟೀಮ್ ಲೀಡರ್ ಮರಿಯಪ್ಪ ಕುಳ್ಳಪ್ಪ ಹೇಳಿದರು.  ದಾವಣಗೆರೆ ಮಹಾನಗರ ಪಾಲಿಕೆಯ ಡಾ.ಶಾಮನೂರು ಶಿವಶಂಕರಪ್ಪ ಸಭಾಂಗಣದಲ್ಲಿ ಶುಕ್ರವಾರ, ಸುಸ್ಥಿರ ಗ್ರಾಮೀಣ ಕುಡಿಯುವ ನೀರು ಸರಬರಾಜು ಕುರಿತು ಏರ್ಪಡಿಸಲಾಗಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.  ಸಾರ್ವಜನಿಕರಿಗೆ, ಶ್ರಮಿಕರಿಗೆ ದಿನದ 24 ಗಂಟೆಯೂ ಸುಸ್ಥಿರ, ಸುರಕ್ಷಿತವಾದ ನೀರು ಪೂರೈಕೆ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಇದರಿಂದ ನೀರು ಕಲುಷಿತವಾಗುವ, ಅನಗತ್ಯ ಪೋಲಾಗುವ ಹಾಗೂ ಇನ್ನಿತರೆ ಸಮಸ್ಯೆಗಳನ್ನು ತಪ್ಪಿಸಬಹುದು. ಪ್ರತಿ 3-6 ತಿಂಗಳಿಗೊಮ್ಮೆ ನೀರಿನ ಮೌಲ್ಯವನ್ನು ಪರಿಶೀಲನೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.  ಈ ಯೋಜನೆಗೆ ವಿಶ್ವ ಬ್ಯಾಂಕ್ 3 ಸಾವಿರ ಕೋಟಿ ರೂ. ನೀಡಿದೆ. ಇಲ್ಲಿನ ಅಧಿಕಾರಿಗಳ ಸಹಕಾರದಿಂದ ಇಂದು 13 ಗ್ರಾಮಗಳಲ್ಲಿ ದಿನದ 24 ತಾಸು ನೀರು ಒದಗಿಸುವಂತಾಗಿದೆ ಎಂದರು.  ವಿಶ್ವಬ್ಯಾಂಕ್ ಟಾಸ್ಕ್ ಟೀಮ್ ಲೀಡರ್ ಕ್ರಿಸ್ಟೋಫರ್ ವಿಲಿಯಮ್ಸ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸರ್ಕಾರದ ಉಪ ಕಾರ್ಯದರ್ಶಿ ಜಾಫರ್ ಷರೀಫ್ ಸುತಾರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಂಜಿನಿಯರುಗಳು, ಪಿಡಿಒಗಳು, ಚುನಾಯಿತ ಪ್ರತಿನಿಧಿಗಳು, ಸ್ವ-ಸಹಾಯ ಸಂಘದ ಸದಸ್ಯರು ಇದ್ದರು.  …  (ಬಾಕ್ಸ್)  ನಿರ್ವಹಣೆ ದೊಡ್ಡ ಸಾಧನೆ  ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸುರೇಶ್ ಬಿ. ಇಟ್ನಾಳ್ ಮಾತನಾಡಿ, ಜೆಜೆಎಂ ಯೋಜನೆಯಡಿ ಎಲ್ಲ ಗ್ರಾಮಗಳಿಗೂ ಅಳವಡಿಸಿ 24*7 ನೀರು ಪೂರೈಕೆ ಗ್ರಾಮಗಳು ಎಂದು ಘೋಷಣೆ ಮಾಡುವುದು ಸಾಧನೆಯಲ್ಲ. ಘೋಷಣೆ ಮಾಡಿದ ಗ್ರಾಮಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವುದು ದೊಡ್ಡ ಸಾಧನೆ ಎಂದು ಅಭಿಪ್ರಾಯಪಟ್ಟರು.  ಕನಸಿನ 100 ಗ್ರಾಮಗಳ ಘೋಷಣೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವ ಸಲುವಾಗಿ ನಿಧಾನ ಗತಿಯಲ್ಲಿ ಸಾಗುತ್ತಿದೆ. ಜೆಜೆಎಂ ಅಳವಡಿಕೆಯಾದ ಗ್ರಾಮಗಳಲ್ಲಿ ನೀರಿನ ಬಳಕೆ ಪ್ರಮಾಣದ ಆಧಾರದ ಮೇಲೆ ಶುಲ್ಕ ವಿಧಿಸಿ. ಮಿತಿಗಿಂತಲೂ ಹೆಚ್ಚು ನೀರನ್ನು ಬಳಕೆ ಮಾಡಿದಲ್ಲಿ ಉದ್ದಿಮೆಗಳಿಗೆ ವಿಧಿಸುವಂತೆ ಶುಲ್ಕವನ್ನು ವಿಧಿಸಿ ಕಂದಾಯ ವಸೂಲಾತಿ ಮಾಡಬೇಕು ಎಂದು ಸಲಹೆ ನೀಡಿದರು.

Share This Article

ಚಿಕ್ಕ ಮಕ್ಕಳು ಹಗಲಲ್ಲಿ ಅಧಿಕ ನಿದ್ರಿಸಲು ಇದೇ ಕಾರಣವಂತೆ! ವೈದ್ಯರು ಹೇಳೊದೇನು? | Children Sleep

Children Sleep: ಸಾಮಾನ್ಯವಾಗಿ ಹುಟ್ಟಿನಿಂದ 6 ತಿಂಗಳವರೆಗೆ, ಮಕ್ಕಳು ಯಾವಾಗ ಮಲಗುತ್ತಾರೆ ಮತ್ತು ಯಾವಾಗ ಎಚ್ಚರಗೊಳ್ಳುತ್ತಾರೆ…

ಇವುಗಳ ಜೊತೆ ಮುಲ್ತಾನಿ ಮೆಟ್ಟಿ ಫೇಸ್‌ ಪ್ಯಾಕ್‌ ಮಾಡಿ ಮುಖಕ್ಕೆ ಹಚ್ಚಿ, ರಿಸಲ್ಟ್‌ ನೀವೇ ನೋಡಿ! Skin Care

Skin Care : ತ್ವಚೆಯ ಆರೈಕೆಯಲ್ಲಿ ನಾವು ನೈಸರ್ಗಿಕವಾಗಿ ಬಳಸುವ ಮುಲ್ತಾನಿ ಮಿಟ್ಟಿ ಕೂಡ ಒಂದು.…