ನ್ಯಾಮತಿ : ತುಂಗಾ, ಭದ್ರಾ ನದಿಗಳ ನೀರಿನ ನೈರ್ಮಲ್ಯ ಕಾಪಾಡುವ ಕೆಲಸ ಪ್ರತಿಯೊಬ್ಬರಿಂದ ಆಗಬೇಕಿದೆ ಎಂದು ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು. ತಾಲೂಕಿನ ಗೋವಿನಕೋವಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ನಿರ್ಮಲ ತುಂಗಾ- ಭದ್ರಾ ಅಭಿಯಾನದ ಪಾದಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು. ನದಿಯಲ್ಲಿ ಕೊಳಚೆ ಸೇರದಂತೆ ತಡೆಯುವಲ್ಲಿ ಸರ್ಕಾರದ ಪಾತ್ರ ಮುಖ್ಯವಾಗಿದೆ. ಆದರೂ ಸಮಾಜ ಜಾಗೃತವಾಗಬೇಕಿದೆ. ನದಿ ಸ್ವಚ್ಛತೆ ಬಗ್ಗೆ ಜನ ಕಳಕಳಿ ತೋರಬೇಕಿದೆ. ತುಂಗಾ ಕುಡಿಯಲು ಮಾತ್ರವಲ್ಲ, ಕೃಷಿ ವಲಯಕ್ಕೂ ಪ್ರಯೋಜನಕಾರಿಯಾಗಿದೆ. ನದಿ ಸ್ವಚ್ಛತಾ ಯೋಜನೆ ಭಾಷಣಕ್ಕೆ ಸೀಮಿತವಾಗದೆ ಕಾರ್ಯರೂಪಕ್ಕೆ ತರುವ ಕೆಲಸವಾಗಬೇಕು ಎಂದು ಹೇಳಿದರು. ರಾಂಪುರದ ಗಿರೀಶ್ ಪಟೇಲ್ ಮಾತನಾಡಿ, ರೈತರು ಪ್ರತಿ ಬೆಳೆಗೂ ಅಗತ್ಯಕ್ಕಿಂತ ಹೆಚ್ಚು ರಸಗೊಬ್ಬರ, ಔಷಧಗಳನ್ನು ಬಳಸಲಾಗುತ್ತದೆ. ಅಲ್ಲದೇ ಹಳ್ಳಿ, ಪಟ್ಟಣಗಳ ತ್ಯಾಜ್ಯ ನೀರು ಸೇರಿ ತುಂಗಾ, ಭದ್ರಾ ನದಿ ನೀರು ಕಲುಷಿತಗೊಂಡಿದೆ ಎಂದು ಕಳವಳ ವ್ಯಕ್ತಪಡಿಸಿದರು. ತುಂಗಾಭದ್ರಾ ನದಿಯಲ್ಲಿ ಹರಿಯುವ ರಾಸಾಯನಿಕ ಯುಕ್ತ ನೀರನ್ನು ಬಳಸುವುದರಿಂದ ಮನುಷ್ಯ ಮತ್ತು ಪ್ರಾಣಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಹಾಗಾಗಿ ನದಿಯನ್ನು ಸ್ವಚ್ಛವಾಗಿಡಬೇಕು ಎಂಬ ಉದ್ದೇಶದಿಂದ ನಿರ್ಮಲ ತುಂಗಭದ್ರಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಅಭಿಯಾನದ ಮುಖಂಡ ಪ್ರೊ.ಬಿ.ಎಂ. ಕುಮಾರಸ್ವಾಮಿ ಮಾತನಾಡಿ, ತುಂಗಾ ಭದ್ರಾ ನದಿ ನೀರು ಕುಡಿಯುವುದಕ್ಕಷ್ಟೇ ಅಲ್ಲ ಸ್ನಾನಕ್ಕೂ ಯೋಗ್ಯವಿಲ್ಲದಂತಾಗಿದ್ದು, ರೋಗರುಜಿನಗಳಿಗೆ ದಾರಿಯಾಗಿದೆ. ಜನ ಜಾಗೃತಿಗಾಗಿ ನಿರ್ಮಲ ತುಂಗಾ ಭದ್ರಾ ಅಭಿಯಾನದ ಪಾದಯಾತ್ರೆ ನ.6 ರಂದು ಆರಂಭವಾಗಿ ಸುಮಾರು 400 ಕಿಮೀ ಸಂಚರಿಸಿಲಿದೆ ಎಂದು ಹೇಳಿದರು. ಪಾದಯಾತ್ರೆಯಲ್ಲಿ ವೈದ್ಯ ಮಾಧವನ್, ವಿವೇಕ್ ತ್ಯಾಗಿ, ಭೀಮರಾವ್, ನಿವೃತ್ತ ಪ್ರಾಂಶುಪಾಲ ನಾಗಭೂಷಣ, ಬಾಲಕೃಷ್ಣ, ಪ್ರೇಮಕುಮಾರ್ ಬಂಡಿಗಡಿ, ಎ.ಬಿ. ಹನುಮಂತಪ್ಪ, ನ್ಯಾಮತಿಯ ಆರುಂಡಿ ಹಂಪಣ್ಣ, ಕೆ.ವಿ. ಚನ್ನಪ್ಪ, ಮಾಜಿ ಸೈನಿಕ ಎಂ. ವಾಸಪ್ಪ, ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು, ರೈತರು ಭಾಗವಹಿಸಿದ್ದರು. ಪಾದಯಾತ್ರೆ ನ್ಯಾಮತಿ ತಾಲೂಕಿನ ಟಿ.ಗೋಪಗೊಂಡನಹಳ್ಳಿ, ಚೀಲೂರು, ಚಿ.ಕಡದಕಟ್ಟೆ, ಕುರುವ, ಗೋವಿನಕೋವಿ ಗ್ರಾಮದ ಮೂಲಕ ಹರಳಹಳ್ಳಿ, ದಿಡಗೂರು ಕ್ರಾಸ್ ಮೂಲಕ ಹೊನ್ನಾಳಿ ಪಟ್ಟಣ ತಲುಪಿತು.
ನದಿ ನೀರು ಸ್ವಚ್ಛತೆ ಎಲ್ಲರ ಹೊಣೆ
ಋತುಸ್ರಾವದ ಸಮಯದಲ್ಲಿ ಮೊಸರು ಸೇವಸಬಹುದೇ.. ಬೇಡವೇ; ಗೊಂದಲಕ್ಕೆ ಇಲ್ಲಿದೆ ಪರಿಹಾರ | Health Tips
ಮೊಸರು ಅಥವಾ ಉಪ್ಪಿನಕಾಯಿ ತಿನ್ನುವುದರಿಂದ ಋತುಸ್ರಾವದ ಸಮಯದಲ್ಲಿ ಸಮಸ್ಯೆಯಾಗುತ್ತದೆ ಎಂಬ ನಂಬಿಕೆಯಿದೆ. ಆದರೆ ಯಾವುದೇ ಆಹಾರವು…
ಉಸಿರಾಟದ ವ್ಯಾಯಾಮ ಗೊರಕೆ ಸಮಸ್ಯೆಗೆ ಪರಿಹಾರ; ಇದು ಸುಳ್ಳೋ-ಸತ್ಯವೋ.. ವೈದ್ಯರು ಹೇಳೋದೇನು? | Health Tips
ನಿದ್ರಿಸುವಾಗ ಗೊರಕೆ ಹೊಡೆಯುವ ವ್ಯಕ್ತಿಗೆ ಮಾತ್ರವಲ್ಲದೆ ಸುತ್ತಮುತ್ತಲಿನವರಿಗೂ ತೊಂದರೆಯ ಅನುಭವವಾಗುತ್ತದೆ. ಸಾಮಾನ್ಯವಾಗಿ ಇದನ್ನು ಲಘುವಾಗಿ ತೆಗೆದುಕೊಳ್ಳಲಾಗುತ್ತದೆ.…
Vastu Tips : ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ!ಸಾಲದ ಸುಳಿಗೆ ಸಿಲುಕುತ್ತೀರಿ..!
Vastu Tips: ದೃಷ್ಟ ಚೆನ್ನಾಗಿದ್ದರೆ ಕೆಲವರು ರಾತ್ರೋರಾತ್ರಿ ಲಕ್ಷಾಧಿಪತಿಗಳಾಗುತ್ತಾರೆ. ಕೆಲವರು ಐಷಾರಾಮಿ ಜೀವನ ನಡೆಸಲು ಕಷ್ಟಪಡುತ್ತಾರೆ. ಅವರು…