More

    ಕಾಲೇಜು ವಿದ್ಯಾರ್ಥಿಗಳಿಗೆ ನಾಳೆ ಪ್ರಬಂಧ ಸ್ಪರ್ಧೆ

    ದಾವಣಗೆರೆ: ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ 24*7 ವತಿಯಿಂದ, ಲಯನ್ಸ್ ಕ್ಲಬ್ ದಾವಣಗೆರೆ ಸಹಕಾರದೊಂದಿಗೆ ಸ್ವಾತಂತ್ರೃದ ಅಮೃತ ಮಹೋತ್ಸವ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ನಗರದ ಎ.ಆರ್.ಜಿ. ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಆ.10ರ ಬುಧವಾರ ಬೆಳಗ್ಗೆ 11ರಿಂದ 12 ಗಂಟೆವರೆಗೆ ಹಮ್ಮಿಕೊಳ್ಳಲಾಗಿದೆ.

    ‘ಸ್ವಾತಂತ್ರೃದ ಶತಮಾನೋತ್ಸವದ ವೇಳೆಗೆ ಭಾರತ ಸಾಧಿಸಬೇಕಿರುವುದೇನು? ಇದರಲ್ಲಿ ಯುವಜನರ ಪಾತ್ರ ಏನು? (ಟಾರ್ಗೆಟ್ 2047)’ ಎಂಬುದು ಸ್ಪರ್ಧೆಯ ವಿಷಯವಾಗಿದೆ. ವಿಜೇತರಿಗೆ ಪ್ರಥಮ ಬಹುಮಾನ 5 ಸಾವಿರ ರೂ., ದ್ವಿತೀಯ 3 ಸಾವಿರ ರೂ., ತೃತೀಯ ಬಹುಮಾನ 2 ಸಾವಿರ ರೂ. ನೀಡಲಾಗುವುದು.

    ಹೆಸರು ನೋಂದಣಿಗೆ ಮೊಬೈಲ್ ನಂ.

    9148713856 ಅಥವಾ 9738226802 ಸಂಪರ್ಕಿಸಬಹುದು. ಸ್ಥಳದಲ್ಲೂ ನೋಂದಣಿ ಮಾಡಿಕೊಳ್ಳಬಹುದು.

    ಟಾರ್ಗೆಟ್ 2047

    • ಸ್ಪರ್ಧೆಯಲ್ಲಿ ಭಾಗವಹಿಸುವವರು ಬೆಳಗ್ಗೆ 10.30ಕ್ಕೆ ಹಾಜರಿರಬೇಕು.
    • ಪ್ರತಿ ವಿದ್ಯಾರ್ಥಿಗೆ ಎ4 ಅಳತೆಯ ಜೋಡಿ ಹಾಳೆ (4 ಪುಟ) ನೀಡಲಾಗುವುದು. ಅಷ್ಟರಲ್ಲೇ ಪ್ರಬಂಧ ಬರೆಯಬೇಕು. ಹೆಚ್ಚುವರಿ ಪುಟ ನೀಡಲಾಗುವುದಿಲ್ಲ.
    • ನೀಡಲಾಗಿರುವ ವಿಷಯದ ಬಗ್ಗೆಯೇ ಕನ್ನಡದಲ್ಲಿ ಮಾತ್ರ ಪ್ರಬಂಧ ಬರೆಯಬೇಕು.
    • ಇಂಗ್ಲಿಷ್ ಅಥವಾ ಬೇರೆ ಭಾಷೆಗಳಲ್ಲಿ ಅವಕಾಶವಿಲ್ಲ.
    • ಸ್ಪರ್ಧಾ ಕೊಠಡಿ ಪ್ರವೇಶಿಸುತ್ತಿದ್ದಂತೆ ಎಲ್ಲ ವಿದ್ಯಾರ್ಥಿಗಳು ಕಡ್ಡಾಯವಾಗಿ ಮೊಬೈಲ್ ಸ್ವಿಚ್‌ಆಫ್ ಮಾಡಬೇಕು.
    • ಯಾವುದೇ ಇತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸುವಂತಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts