ದಾವಣಗೆರೆಯಲ್ಲಿ ಸಾಂಪ್ರಾಯಿಕ ಉಡುಗೆ ತೊಟ್ಟು ಯುವತಿಯರ ಸಂಭ್ರಮ!

ದಾವಣಗೆರೆ: ನಗರದ ಎಂಬಿಎ ಕಾಲೇಜಿನಲ್ಲಿ ಬುಧವಾರ ಕಲಾ ಲೋಕ ಅನಾವಣಗೊಂಡಿತ್ತು.
ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ಉಟ್ಟು ಗಮನ ಸೆಳೆದರು. ಯುವತಿಯರು ವಿವಿಧ ಬಣ್ಣದ ಸೀರೆ ತೊಟ್ಟು ಸಂಭ್ರಮಿಸಿದರು. ಯುವಕರು ಲುಂಗಿ ಧರಿಸಿ ಕೂಲಿಂಗ್ ಗ್ಲಾಸ್ ನಾವೇನ್ ಕಮ್ಮಿ ಎಂದು ಪೋಸ್ ನೀಡಿದರು.

ಕೆಲ ವಿದ್ಯಾರ್ಥಿಗಳು ಅಲ್ಲಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಮತ್ತೆ ಕೆಲವರು ಸಡಗರದಲ್ಲಿ ಓಡಾಡುತ್ತಿದ್ದರು. ಕೊಠಡಿಗಳನ್ನು ಬಾಳೆಕಂಬಗಳಿಂದ ಸಿಂಗರಿಸಲಾಗಿತ್ತು. ರಂಗೋಲಿ ಬಿಡಿಸಿ ಕಾಲೇಜಿನ ಕಳೆಗಟ್ಟುವಂತೆ ಸಿದ್ಧಗೊಳಿಸಿದ್ದರು.