ಸಶಕ್ತ ದೇಶಕ್ಕಾಗಿ ಗ್ರಾಮಗಳು ತಂಬಾಕು ಮುಕ್ತವಾಗಲಿ

blank

ದಾವಣಗೆರೆ :  ಉತ್ತಮ ಸಮಾಜ ಹಾಗೂ ಸಶಕ್ತ ದೇಶ ನಿರ್ಮಾಣಕ್ಕಾಗಿ ಗ್ರಾಮಗಳು ತಂಬಾಕುಮುಕ್ತವಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಎಂ. ಕರೆಣ್ಣವರ ಹೇಳಿದರು.  ತಂಬಾಕುಮುಕ್ತ ಯುವ ಅಭಿಯಾನದ ಅಂಗವಾಗಿ ನಗರದ ಗಾಂಧಿ ಭವನದಲ್ಲಿ ಸೋಮವಾರ ಸಮುದಾಯ ಆರೋಗ್ಯಾಧಿಕಾರಿಗಳಿಗೆ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.  ಜನರು ತಪ್ಪು ಕಲ್ಪನೆಗಳಿಂದ ತಂಬಾಕಿನಂತಹ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಯುವಕರು ಕೆಟ್ಟವರ ಸಹವಾಸದಿಂದ ದುಶ್ಚಟ, ದುರಭ್ಯಾಸಗಳಿಗೆ ಒಳಗಾಗಿ ತಮ್ಮ ಬದುಕನ್ನೇ ನಾಶಪಡಿಸಿಕೊಳ್ಳುತ್ತಿದ್ದಾರೆ ಎಂದರು.  ಕೋಟ್ಪಾ-2003 ರ ಕಾಯ್ದೆಯ ಅನುಷ್ಠಾನ ಮತ್ತು ತಂಬಾಕುಮುಕ್ತ ಯುವ ಅಭಿಯಾನ 2.0 ಮಾರ್ಗದರ್ಶನದ ಅನುಸಾರ ಜಿಲ್ಲೆಯಲ್ಲಿ ತಂಬಾಕುಮುಕ್ತ ಗ್ರಾಮ ಮಾಡಲು ಸಮುದಾಯ ಆರೋಗ್ಯ ಅಧಿಕಾರಿಗಳ ಪಾತ್ರ ಮಹತ್ವವಾಗಿದೆ ಎಂದು ತಿಳಿಸಿದರು.  ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಮಾತನಾಡಿ, ಪಾಲಕರು ಮಕ್ಕಳ ಮೂಲಕ ತಂಬಾಕು ಉತ್ಪನ್ನ ಖರೀದಿಸುವುದರಿಂದ ಮಕ್ಕಳೇ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಹದಿಹರೆಯದ ವಯಸ್ಸಿನ 293 ಮಕ್ಕಳು ಪ್ರತಿದಿನ ಹೊಸದಾಗಿ ತಂಬಾಕು ಸೇವಿಸಲು ಪ್ರಾರಂಭಿಸುತ್ತಿರುವುದು ವಿಷಾದನೀಯ ಸಂಗತಿ. ಈ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳು ಆಗಬೇಕಾಗಿದೆ ಎಂದು ಹೇಳಿದರು.  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್.ಷಣ್ಮುಖಪ್ಪ,  ಬಾಪೂಜಿ ದಂತ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಸಿ.ಶುಭ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ, ಸತೀಶ್ ಕಲಹಾಳ್, ಸಮಾಜ ಕಾರ್ಯಕರ್ತೆ ಶೈಲಾ ಶಾಮನೂರು, ಜಿಲ್ಲೆಯ ಸಮುದಾಯ ಆರೋಗ್ಯಾಧಿಕಾರಿಗಳು ಇದ್ದರು.  ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಇವರ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Share This Article

ನೋಡೋಕೆ ಚೆನ್ನಾಗಿದೆ ಅಂತ ಮೋಸ ಹೋಗ್ಬೇಡಿ…ತಾಜಾ, ರುಚಿಯಾದ ಕಿತ್ತಳೆ ಹಣ್ಣು ಖರೀದಿಸಲು ಇಲ್ಲಿದೆ ಟಿಪ್ಸ್​! Orange

Orange : ಕಿತ್ತಳೆ ಹಣ್ಣು ಕೇವಲ ರುಚಿಗೆ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು. ಇದರಲ್ಲಿ ವಿಟಮಿನ್​ ಸಿ…

ಹಾವು ಕಚ್ಚಿದ ಬಳಿಕ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ; First Aid ಎಂದು ಮಾಡುವ ವಿಧಾನ ಪ್ರಾಣಕ್ಕೆ ಸಂಚಕಾರ

ಸಾಮಾನ್ಯವಾಗಿ ಹಾವು ಕಚ್ಚಿದ ಬಳಿಕ ಸುತ್ತಮುತ್ತ ಇರುವ ಜನರು ಪ್ರಥಮ ಚಿಕಿತ್ಸೆ(First Aid) ಎಂದು ಹಲವು…

ಚಳಿಗಾಲದಲ್ಲಿ ಎಳನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೇ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ | Tender coconut

Tender coconut : ನೈಸರ್ಗಿಕವಾಗಿ ಹೇರಳವಾಗಿ ದೊರೆಯುವ ಎಳನೀರು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಎಲೆಕ್ಟ್ರೋಲೈಟ್ಸ್​, ವಿಟಮಿನ್ಸ್​,…