ದಾವಣಗೆರೆ : ದೇಗುಲ ಸಂಸ್ಕೃತಿ ಉಳಿಸುವ ಮೂಲಕ ಧರ್ಮದ ಸಂರಕ್ಷಣೆಗೆ ಮುಂದಾಗಲು ನಗರದಲ್ಲಿ ಭಾನುವಾರ ನಡೆದ ಜಿಲ್ಲಾಮಟ್ಟದ ಮಂದಿರ ಅಧಿವೇಶನದಲ್ಲಿ ಸಂಕಲ್ಪ ಮಾಡಲಾಯಿತು. ಹಿಂದು ಜನಜಾಗೃತಿ ಸಮಿತಿ ಹಾಗೂ ದೇವಸ್ಥಾನ ಮಹಾಸಂಘದ ವತಿಯಿಂದ ನಗರದ ದಾವಣಗೆರೆ-ಹರಿಹರ ಅರ್ಬನ್ ಸಹಕಾರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಅಧಿವೇಶನದಲ್ಲಿ ದೇವಸ್ಥಾನಗಳ ಸದ್ಯದ ಪರಿಸ್ಥಿತಿ, ಅವುಗಳ ಮೇಲೆ ಸರ್ಕಾರದ ನಿಯಂತ್ರಣವನ್ನು ತಪ್ಪಿಸಿ ಟ್ರಸ್ಟ್‌ಗಳ ಆಡಳಿತದಲ್ಲಿ ಉಳಿಯುವಂತೆ ಮಾಡುವ ಅನಿವಾರ್ಯತೆಯ ಕುರಿತು ಒಮ್ಮತದ ನಿರ್ಣಯಕ್ಕೆ ಬರಲಾಯಿತು. ಹಿಂದು ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕಾರ ಗುರುಪ್ರಸಾದ್ ಗೌಡ ಮಾತನಾಡಿ, ಮುಜರಾಯಿ ಇಲಾಖೆಗೆ ಒಳಪಟ್ಟ ಹಿಂದು ದೇವಸ್ಥಾನಗಳನ್ನು ಮರಳಿ ಸ್ವೀಕರಿಸಲು ಆಯಾ ದೇವಸ್ಥಾನ ಟ್ರಸ್ಟಿಗಳು ಜವಾಬ್ದಾರಿ ತೆಗೆದುಕೊಳ್ಳಬೇಕಿದೆ ಎಂದು ತಿಳಿಸಿದರು. ರಾಜ್ಯದಲ್ಲಿ 34,500ಕ್ಕೂ ಅಧಿಕ ದೇವಸ್ಥಾನಗಳು ಸರ್ಕಾರದ ಸುಪರ್ದಿಯಲ್ಲಿವೆ. ಸರ್ಕಾರ ದೇಗುಲಗಳನ್ನು ಅಭಿವೃದ್ಧಿಗೊಳಿಸುವ ಚಿಂತನೆ ಮಾಡುತ್ತಿಲ್ಲ. ಬದಲಾಗಿ ಭಕ್ತರ ಹಣವನ್ನು ಕಬಳಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು. ಸರ್ಕಾರದ ಅಧೀನದಲ್ಲಿರುವ ಹಿಂದು ದೇವಾಲಯಗಳಿಂದ ಕೋಟಿಗಟ್ಟಲೆ ಹಣ ಸಂಗ್ರಹ ಆಗುತ್ತದೆ. ಈ ಆದಾಯವನ್ನು ಸರ್ಕಾರ ಅನ್ಯ ಮತೀಯರಿಗೆ ಹಾಗೂ ಸರ್ಕಾರದ ಇತರ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿದೆ. ಹಾಗಾಗಿ ನಮ್ಮ ದೇವಸ್ಥಾನದಲ್ಲಿನ ಹಣವನ್ನು ನಮ್ಮಲ್ಲೇ ಉಳಿಸಿಕೊಳ್ಳಲು ಜಾಗೃತರಾಗಬೇಕಿದೆ ಎಂದು ತಿಳಿಸಿದರು. ಸರ್ಕಾರಕ್ಕೆ ಸೇರಿದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ 15 ವರ್ಷದ ಆಡಿಟ್ ವರದಿ ಕೇಳಿದಾಗ, ಲೆಕ್ಕಾಚಾರದಲ್ಲಿ 21 ಕೋಟಿ ರೂ.ಗಳ ವ್ಯತ್ಯಾಸ ಕಂಡು ಬರುತ್ತಿದೆ. ಪಂಢರಾಪುರ ವಿಠ್ಠಲ ದೇವಸ್ಥಾನಕ್ಕೆ ಭಕ್ತರು ಕೊಟ್ಟ ಹಸುಗಳನ್ನು ಕಸಾಯಿಖಾನೆಗೆ ಕಳಿಸಿ ಹಣ ಸಂಗ್ರಹಿಸಿದ್ದಾರೆ ಎಂದು ದೂರಿದರು. ಹೀಗೆ ಮುಜರಾಯಿ ಇಲಾಖೆಯ ಅನೇಕ ಹಿಂದು ದೇವಸ್ಥಾನಗಳ ಜಮೀನು, ಹಣ, ಆಭರಣ ಸೇರಿ ಇತರೆ ಸಂಪತ್ತಿನಲ್ಲಿ ಅಕ್ರಮ ನಡೆದಿದೆ. ಇದರಿಂದ ಹಿಂದುಗಳಿಗೆ ಅನ್ಯಾಯವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ವಾಸವಿ ದೇವಸ್ಥಾನಗಳ ಒಕ್ಕೂಟದ ರಾಜ್ಯಾಧ್ಯಕ್ಷ ಆರ್.ಎಲ್. ಪ್ರಭಾಕರ್ ಮಾತನಾಡಿ, ದೇಗುಲಗಳಲ್ಲಿ ಭಜನೆ, ಯೋಗಾಸನ, ನೃತ್ಯ, ಹಬ್ಬಗಳ ಆಚರಣೆ ನಡೆಯಬೇಕು ಎಂದು ಸಲಹೆ ನೀಡಿದರು. ಮಲೇಬೆನ್ನೂರು ಶ್ರೀ ವೀರಭದ್ರೇಶ್ವರ ದೇವಸ್ಥಾನದ ಅಧ್ಯಕ್ಷ ಚಿದಾನಂದಪ್ಪ ಮಾತನಾಡಿ, ಈ ರೀತಿಯ ಅಧಿವೇಶನಗಳು ತಾಲೂಕು, ಹೋಬಳಿ ಮಟ್ಟದಲ್ಲೂ ಆಗಬೇಕು ಎಂದು ಅಭಿಪ್ರಾಯಪಟ್ಟರು. … (ಬಾಕ್ಸ್) ಮನೆಯಲ್ಲಿ ಸಿಗಲಿ ಸಂಸ್ಕಾರ ಜವಳ ವರ್ತಕ ಬಿ.ಸಿ. ಉಮಾಪತಿ ಮಾತನಾಡಿ, ಯುವಜನರಿಗೆ ಸರಿಯಾದ ಮಾರ್ಗದರ್ಶನದ ಕೊರತೆಯಿದೆ. ಅವಿಭಕ್ತ ಕುಟುಂಬಗಳಿದ್ದಾಗ ಮನೆಯಲ್ಲಿ ಸಂಸ್ಕಾರ ಸಿಗುತ್ತಿತ್ತು. ಈಗ ಆ ಪರಿಸ್ಥಿತಿ ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ದೇವಸ್ಥಾನಗಳನ್ನು ಉಳಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನವಿರಬೇಕು. ನಾವೆಲ್ಲ ಹಿಂದು ಎಂಬ ಭಾವನೆ ಮೂಡಿದಾಗ ದೇಶದ ರಕ್ಷಣೆ ಸಾಧ್ಯವಿದೆ. ದೇವಸ್ಥಾನಗಳಲ್ಲಿ ಉಚ್ಚರಿಸಲಾಗುವ ಮಂತ್ರಗಳು ಸಂಸ್ಕೃತದಲ್ಲಿರುತ್ತವೆ. ಅವುಗಳನ್ನು ಪ್ರಾದೇಶಿಕ ಭಾಷೆಯಲ್ಲೇ ಹೇಳುವಂತಾದರೆ ಜನಸಾಮಾನ್ಯರಿಗೂ ಅವುಗಳ ಅರ್ಥ ತಿಳಿಯುತ್ತದೆ ಎಂದು ಹೇಳಿದರು. … (ಕೋಟ್) ಧರ್ಮದ ರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು. ಮತಾಂತರ ತಡೆಯಬೇಕು. ದೇಗುಲಗಳ ಪ್ರವೇಶವನ್ನು ಎಲ್ಲರಿಗೂ ಮುಕ್ತವಾಗಿ ಇಡಬೇಕು. ಗೋವುಗಳ ರಕ್ಷಣೆಗೆ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕು. ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ, ಹೆಬ್ಬಾಳು ಮಠ
ದೇಗುಲ ಸಂಸ್ಕೃತಿ ಉಳಿಸುವ ಸಂಕಲ್ಪ

ಬೆಣ್ಣೆಯಂತೆ ಕೊಬ್ಬು ಕರಗಬೇಕೆ; ಉತ್ತಮ ಫಲಿತಾಂಶಕ್ಕಾಗಿ ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ | Health Tips
ಕೆಲವರು ಹೊರಗೆ ಊಟ ಮಾಡಿದ ನಂತರವೂ ತೆಳ್ಳಗಿರುತ್ತಾರೆ. ಯಾವುದೇ ಜಿಮ್ ಅಥವಾ ವ್ಯಾಯಾಮವನ್ನೂ ಮಾಡುವುದಿಲ್ಲ. ಏಕೆಂದರೆ…
ಶೀತ & ಜ್ವರವಿದ್ದಾಗ ಹುಳಿ ಮೊಸರು ಸೇವಿಸಬಹುದೇ?; ಇಲ್ಲಿದೆ ಉಪಯುಕ್ತ ಮಾಹಿತಿ | Health Tips
ಶೀತ ಮತ್ತು ಜ್ವರದ ಚಿಕಿತ್ಸೆಯ ಜತೆಗೆ ಹಲವು ರೀತಿಯ ಮುನ್ನೆಚ್ಚರಿಕೆಗಳನ್ನು ಸಹ ತೆಗೆದುಕೊಳ್ಳಬೇಕಾಗುತ್ತದೆ. ಮೊಸರು ಸೇವಿಸದಿರುವುದು…
ವೇಜ್, ನಾನ್ವೆಜ್ ಖಾದ್ಯ ‘ಟೊಮ್ಯಾಟೋ’ ಇಲ್ಲದೆ ಆಗೋದೆ ಇಲ್ವಾ? ಹೆಚ್ಚು Tomato ತಿನ್ನುವ ನಿಮಗಾಗಿ ಈ ಸುದ್ದಿ!
Tomato : ನಾವು ನಮ್ಮ ದೈನಂದಿನ ಅಡುಗೆಗಳಲ್ಲಿ ಟೊಮ್ಯಾಟೋವನ್ನು ಬಳಸುತ್ತೇವೆ. ಟೊಮ್ಯಾಟೋಗಳನ್ನು ಕರಿ, ಗ್ರೇವಿ, ಸೂಪ್…