ಟನ್ ಕಬ್ಬಿಗೆ ಕನಿಷ್ಠ 3500 ರೂ. ನಿಗದಿಪಡಿಸಿ

blank

ದಾವಣಗೆರೆ : ಕುಕ್ಕವಾಡದ ದಾವಣಗೆರೆ ಸಕ್ಕರೆ ಕಾರ್ಖಾನೆಯಲ್ಲಿ ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ ಕನಿಷ್ಠ 3500 ರೂ. ನಿಗದಿಪಡಿಸುವಂತೆ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.  ಉತ್ತರ ಕರ್ನಾಟಕದಲ್ಲಿ ಪ್ರತಿ ಟನ್‌ಗೆ 4,500 ರೂ. ವರೆಗೆ ನಿಗದಿ ಮಾಡಿದ್ದಾರೆ. ಕಬ್ಬು ಕಡಿದು ಸಾಗಾಣಿಕೆ ವೆಚ್ಚವನ್ನೂ ಸಕ್ಕರೆ ಕಂಪನಿಯವರೇ ನೀಡುತ್ತಾರೆ. ಆದರೆ ದಾವಣಗೆರೆ ಸಕ್ಕರೆ ಕಾರ್ಖಾನೆಯಲ್ಲಿ ಕಂಪನಿಯು ಪ್ರಸ್ತುತ 3151 ರೂ. ಬೆಲೆ ನಿಗದಿಪಡಿಸಿರುವುದು ಸಾಕಾಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಈ ಕಾರ್ಖಾನೆಯಲ್ಲಿ ವಿದ್ಯುತ್ ಉತ್ಪಾದನಾ ಘಟಕವಿದೆ. ಎಥೆನಾಲ್ ಶೇ. 40 ರಷ್ಟು ಮಾರಾಟ ಮಾಡಬಹುದು. 3151 ರೂ. ಪಡೆದು ರೈತರು ಕಡಿಯುವ ಕೂಲಿ ಟನ್‌ಗೆ 800 ರೂ, ಸಾಗಾಣಿಕೆ ವೆಚ್ಚ 500 ರೂ. ಕೊಟ್ಟು ರೈತರಿಗೆ ನಷ್ಟವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.    

Share This Article

ಗ್ಯಾಸ್​ಗೆ ವಾಸನೆಯೇ ಇಲ್ಲ! ಹೀಗಿದ್ದರೂ​ ಸಿಲಿಂಡರ್​ ಲೀಕ್​ ಆಗ್ತಿದೆ ಅಂತ ತಿಳಿಸೋದು ಈ ಕೆಮಿಕಲ್​ ಮಾತ್ರ​ | Gas Leakage

Gas Leakage: ಇಂದು ಪ್ರತಿಯೊಬ್ಬರ ಮನೆಯಲ್ಲಿಯೂ ಎಲ್​ಪಿಜಿ ಗ್ಯಾಸ್​ ಸಿಲಿಂಡರ್​ಗಳನ್ನು ಬಳಕೆ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ…

ಊಟದ ನಂತರ ಸಿಹಿ ತಿನ್ನುವುದು ಒಳ್ಳೆಯದೇ? ವೈದ್ಯರ ಸಲಹೆ..!  sweet

sweet:  ಸಿಹಿ ತಿಂಡಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ... ನಾಲಿಗೆ ಚಪ್ಪರಿಸಿ ಸಿಹಿ ತಿಂಡಿ…

astrology : ಈ ದಿನ ಉಗುರು, ಕೂದಲನ್ನು ಕತ್ತರಿಸಿದ್ರೆ ಕಾದಿದೆ ಸಂಕಷ್ಟ! ಈ ಕೆಲಸಕ್ಕೂ ಇದೆ ಒಳ್ಳೆಯ ದಿನ

astrology: ವಾರದ ಕೆಲವು ದಿನಗಳಲ್ಲಿ ಉಗುರುಗಳನ್ನು ಕತ್ತರಿಸುವುದು ಮತ್ತು ಕೂದಲನ್ನು ಕತ್ತರಿಸುವು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. …