ದಾವಣಗೆರೆ : ಬಾಕಿ ಹಣ ಕೇಳಿದ್ದಕ್ಕೆ ನಗರದ ಬೇತೂರು ರಸ್ತೆಯಲ್ಲಿ ಬೇಕರಿ ಮಾಲೀಕನಿಗೆ ಚಾಕುವಿನಿಂದ ಇರಿಯಲಾಗಿದೆ. ಅಯ್ಯಂಗಾರ್ ಬೇಕರಿಯ ಸಿದ್ದೇಶ್, ಚಾಕು ಇರಿತಕ್ಕೆ ಒಳಗಾದ ವ್ಯಕ್ತಿ. ಸಿದ್ದೇಶ್ ಅವರ ಬೇಕರಿಯಲ್ಲಿ ಮಂಜುನಾಥ ಎಂಬಾತ 115 ರೂ. ವಸ್ತುಗಳನ್ನು ಖರೀದಿಸಿದ್ದ. ಹಣ ಕೇಳಿದ್ದರಿಂದ ಮಾತಿಗೆ ಮಾತು ಬೆಳೆದು ಸಿದ್ದೇಶ್‌ಗೆ ಮಂಜುನಾಥ ಚಾಕುವಿನಿಂದ ಇರಿದಿದ್ದಾನೆ. ಕೂಡಲೇ ಸಿದ್ದೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆರೋಪಿ ಮಂಜುನಾಥನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
