Davanagere Sri Basavaprabhu Swamiji Buttermilk Health

ದಾವಣಗೆರೆಯಲ್ಲಿ ಮಜ್ಜಿಗೆ ವಿತರಣೆ

ದಾವಣಗೆರೆ: ತಂಪು ಪಾನೀಯಗಳು ನಾಲಿಗೆಗೆ ರುಚಿ ನೀಡಿದರೂ ಆರೋಗ್ಯಕ್ಕೆ ಕಂಟಕ. ಮಜ್ಜಿಗೆ ನಮ್ಮ ಸ್ವಾಸ್ಥೃ ಕಾಪಾಡುತ್ತದೆ ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.

ಕರುಣಾ ಜೀವಕಲ್ಯಾಣ ಟ್ರಸ್ಟ್‌ನಿಂದ ನಗರದ ಜಯದೇವ ವೃತ್ತದಲ್ಲಿ ಸೋಮವಾರ ಆಯೋಜಿಸಿದ್ದ, ಉಚಿತ ಮಜ್ಜಿಗೆ ಹಾಗೂ ನೀರಿನ ವಿತರಣೆಯ ಅರವಟ್ಟಿಗೆಗಳ ಪ್ರಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಂಪು ಪಾನೀಯಗಳಲ್ಲಿ ರಾಸಾಯನಿಕ ಪದಾರ್ಥಗಳಿರುತ್ತವೆ. ಅವುಗಳು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಮಜ್ಜಿಗೆಯಲ್ಲಿ ಆರೋಗ್ಯ ವೃದ್ಧಿಸುವ ಶಕ್ತಿ ಇರುತ್ತದೆ, ದೇಹಕ್ಕೂ ತಂಪೆರೆಯುತ್ತದೆ ಎಂದು ಹೇಳಿದರು.

ಈ ಬೇಸಿಗೆಯಲ್ಲಿ ರಣಬಿಸಿಲಿದೆ. ಜನಸಾಮಾನ್ಯರು ಬಿಸಿಲಿನಲ್ಲಿ ಕೆಲಸ ಮಾಡುತ್ತಾರೆ. ಶ್ರಮಜೀವಿಗಳಾದ ಬಡವರು, ಕಾರ್ಮಿಕರ ಬಳಿ ಹಣ ಇರುವುದಿಲ್ಲ. ನಿರ್ಗತಿಕರಿಗೆ ಮ್ಜಜಿಗೆ ದಾನ ಮಾಡುವ ಕಾರ್ಯ ಸ್ತುತ್ಯರ್ಹ ಎಂದರು.

ಉಚಿತವಾಗಿ 1 ತಿಂಗಳು ಮಜ್ಜಿಗೆ ನೀಡುವುದು ದಾಸೋಹ ತತ್ವದ ಪಾಲನೆಯಾಗಿದೆ. ಸಮಾಜಸೇವೆ ಮಾಡುವ ಸಂಘಟನೆಗಳಿಗೆ ಇದು ಪ್ರೇರಣೆ ನೀಡಲಿ ಎಂದು ಆಶಿಸಿದರು. ಟ್ರಸ್ಟ್ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಮಾತನಾಡಿದರು, ಮಂಜುಳಾ ಬಸವಲಿಂಗಪ್ಪ, ಡಾ.ಮಲ್ಲಿಕಾರ್ಜುನ್ ಇತರರಿದ್ದರು.