ಸಿದ್ಧಗಂಗಾ ಶಾಲೆಗೆ ಎಸ್.ವಿ. ಕೃತಿಕಾ ಪ್ರಥಮ  

blank

ದಾವಣಗೆರೆ : ಕಳೆದ ಫೆಬ್ರವರಿ-ಮಾರ್ಚ್‌ನಲ್ಲಿ ನಡೆದ 10 ನೇ ತರಗತಿ ಸಿಬಿಎಸ್‌ಇ ಬೋರ್ಡ್ ಫಲಿತಾಂಶ ಪ್ರಕಟವಾಗಿದ್ದು, ನಗರದ ಸಿದ್ಧಗಂಗಾ ಶಾಲೆಯ ಎಸ್.ವಿ. ಕೃತಿಕಾ ಶೇ. 96 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾಳೆ.  ಇಂಗ್ಲಿಷ್ 94, ಕನ್ನಡ 99, ಗಣಿತ 95, ವಿಜ್ಞಾನ 98, ಸಮಾಜ 94 ಅಂಕಗಳನ್ನು ಗಳಿಸಿದ್ದಾಳೆ. ಕೃತಿಕಾ-ವೀರಭದ್ರಪ್ಪ ಮತ್ತು ಕೆ.ಸಿ ರಶ್ಮಿ ದಂಪತಿಯ ಪುತ್ರಿ.  ಕೆ.ಸಿ. ದರ್ಶನ್ ಶೇ. 93.80, ಎಂ.ಎಂ. ನಿಖಿಲ್ ಶೇ. 93.80, ಜಿ.ಕೆ. ಡಯಾನಾ ಶೇ. 93.40, ಬಿ.ಕೆ. ಸುಮುಖ್ ಶೇ. 92.20, ಎಂ.ಎಸ್. ಸೃಷ್ಟಿ ಶೇ. 92, ಪ್ರೀತಂ ಎಸ್.ಜಿ. ಸ್ವಾಮಿ ಶೇ. 91.40, ವಿ.ಜಿ. ಸಿಂಚನಾ ಶೇ. 91.40, ಎಲ್.ಎಸ್. ಸೌಕಾರ್ ಶೇ. 90.80, ಸಿ.ಟಿ. ದಾನೀಶ್ ಶೇ. 90.60, ಪಿ.ಐ. ರಾಹುಲ್ ಶೇ. 90.40 ಅಂಕ ಪಡೆದಿದ್ದಾರೆ.  ಶೇ. 95 ಕ್ಕಿಂತ ಹೆಚ್ಚು ಒಬ್ಬ ವಿದ್ಯಾರ್ಥಿನಿ, ಶೇ. 90 ಕ್ಕಿಂತ ಹೆಚ್ಚು 11 ಮಕ್ಕಳು, ಶೇ. 85 ಕ್ಕಿಂತ ಹೆಚ್ಚು 26 ಮಕ್ಕಳು, ಶೇ. 60 ಕ್ಕಿಂತ ಹೆಚ್ಚು 12 ಮಕ್ಕಳು ಅಂಕ ಪಡೆದಿದ್ದಾರೆ. ಎಂ.ಎಂ. ನಿಖಿಲ್ ಮತ್ತು ವಿ.ಜಿ. ಸಿಂಚನಾ ಕನ್ನಡ ವಿಷಯದಲ್ಲಿ 100 ಕ್ಕೆ 100 ಮತ್ತು ಕೆ.ಸಿ. ದರ್ಶನ್ ವಿಜ್ಞಾನದಲ್ಲಿ 100 ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ.  ವಿದ್ಯಾರ್ಥಿಗಳ ಸಾಧನೆಯ ಬಗ್ಗೆ ಪ್ರಾಚಾರ್ಯೆ ಗಾಯತ್ರಿ ಚಿಮ್ಮಡ್ ಮತ್ತು ಅಧ್ಯಾಪಕ ವೃಂದ, ಆಡಳಿತ ಮಂಡಳಿಯ ಮುಖ್ಯಸ್ಥೆ ಜಸ್ಟಿನ್ ಡಿಸೌಜ, ಕಾರ್ಯದರ್ಶಿ ಹೇಮಂತ್ ಮತ್ತು ನಿರ್ದೇಶಕ ಡಾ. ಜಯಂತ್ ಹರ್ಷ ವ್ಯಕ್ತಪಡಿಸಿದ್ದಾರೆ.

blank
Share This Article
blank

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

ದಿನವಿಡೀ ಮೊಬೈಲ್​ ನೋಡ್ತಾನೇ ಇರ್ತೀರಾ? ಈ ಚಟದಿಂದ ಹೊರ ಬರಲು ಇದೇ ಸರಳ ಮಾರ್ಗ…mobile

mobile: ಇಂದಿನ ಡಿಜಿಟಲ್ ಜಗತ್ತಿನಲ್ಲಿ, ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟಿವಿಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ…

blank