ಒಳಿತನ್ನು ಮಾಡುವುದೇ ನಿಜವಾದ ಕಲ್ಯಾಣ

ದಾವಣಗೆರೆ : ಕಲ್ಯಾಣ ಎಂದರೆ ಒಳಿತು ಎಂದರ್ಥ. ಬದುಕಿನಲ್ಲಿ ಒಳಿತನ್ನು ಮಾಡುವುದೇ ನಿಜವಾದ ಕಲ್ಯಾಣವಾಗಿದೆ ಎಂದು ವಿರಕ್ತ ಮಠದ ಡಾ.ಬಸವಪ್ರಭು ಸ್ವಾಮೀಜಿ ಹೇಳಿದರು.  ನಗರದ ವಿರಕ್ತಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಕಲ್ಯಾಣದಿಂದ ಉಳವಿಯಡೆಗೆ’ ಶ್ರಾವಣ ಮಾಸದ 114ನೇ ವರ್ಷದ ಪ್ರವಚನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದರು.  ಆಧುನಿಕ ಕಾಲದ ಜನರು ಯಾಂತ್ರಿಕವಾಗಿ ಜೀವಿಸುತ್ತಿದ್ದು, ಸದಾಕಾಲ ಹಣ ಗಳಿಸುವುದರಲ್ಲೇ ಮುಳುಗಿದ್ದಾರೆ. ಹಣದ ಹಿಂದೆ ಹೋಗಿ ಒಳಿತನ್ನು ಮರೆತಿದ್ದಾರೆ. ಹಣ , ಆಸ್ತಿಯ ಬೆನ್ನುಹತ್ತಿ ಬದುಕಿನ ನೆಮ್ಮದಿ ಕಳೆದುಕೊಂಡಿದ್ದಾರೆ ಎಂದು ವಿಷಾದಿಸಿದರು.  ಹಿಂದಿನ ಕಾಲದಲ್ಲಿ ಓದು ಬರಹ ಬರಲಾರದ ಜನರು ಒಳಿತು ಮಾಡುವುದೇ ಬದುಕಿನ ನಿಜವಾದ ಸಾಧನೆ ಎಂದು ತಿಳಿದಿದ್ದರು. ಎಂದಿಗೂ ಹಣವೇ ಮುಖ್ಯ ಎಂದು ಬಡಿದಾಡಲಿಲ್ಲ. ಹಾಗಾಗಿ, ಅವರ ಬದುಕಿನಲ್ಲಿ ಶಾಂತಿ, ನೆಮ್ಮದಿ ಇತ್ತು ಎಂದರು.  ಬದುಕಿನಲ್ಲಿ ನೆಮ್ಮದಿ ಪಡೆಯುವ ಮಾರ್ಗವೆಂದರೆ ಶ್ರಾವಣ. ಬಸವಾದಿ ಶರಣರ ಆದರ್ಶದ ಬದುಕನ್ನು ಕೇಳಿದಾಗ ಜೀವನದಲ್ಲಿ ಒಳಿತನ್ನು ಕಾಣಲು ಸಾಧ್ಯವಾಗುತ್ತದೆ. ನಮ್ಮ ಅಂತರಂಗ ಶುದ್ದಿಯಾಗಲು, ಮನ ಪರಿವರ್ತಿಸುವ ಕಾರ್ಯ ಮಾಡಲು ಪ್ರವಚನಗಳು ಬೇಕು ಎಂದು ಹೇಳಿದರು.  ವರದಿಗಾರರ ಕೂಟದ ಜಿಲ್ಲಾಧ್ಯಕ್ಷ ನಾಗರಾಜ್ ಬಡದಾಳ್ ವಚನ ಗ್ರಂಥಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಎಲ್ಲರೂ ಟಿವಿ ಹಾಗೂ ಮೊಬೈಲ್‌ಗಳಲ್ಲಿ ಮುಳುಗಿದ್ದು, ಸಂಸ್ಕೃತಿ ಮರೆಯುತ್ತಿದ್ದಾರೆ. ಧಾರಾವಾಹಿಗಳಲ್ಲಿ ಯಾವುದೇ ಸಕಾರಾತ್ಮಕ ವಿಚಾರಗಳಿರುವುದಿಲ್ಲ. ಇವುಗಳಿಂದ ಹೊರಬರಬೇಕು ಎಂದು ತಿಳಿಸಿದರು.  ಪ್ರತಿಯೊಬ್ಬರೂ  ಶರಣರ ವಚನಗಳನ್ನು ಓದಬೇಕು, ಪುರಾಣ ಪ್ರವಚನ ಆಲಿಸಿ ಬದುಕನ್ನು ಕಟ್ಟಿಕೊಳ್ಳಬೇಕು. ಮಕ್ಕಳಿಗೆ ಸಂಸ್ಕಾರದ ಜತೆಗೆ ನೈತಿಕ ಶಿಕ್ಷಣ ನೀಡಬೇಕು. ಶರಣರು, ದಾರ್ಶನಿಕರು ಹಾಗೂ ಮಹಾಪುರುಷರ ಪುಸ್ತಕಗಳನ್ನು ಓದಲು ಪ್ರೇರೇಪಿಸಬೇಕು. ಹಾಗಾದಾಗ ಮಾತ್ರ ಜೀವನಮೌಲ್ಯ ಕಂಡುಕೊಳ್ಳಲು ಸಾಧ್ಯವಾಗಲಿದೆ ಎಂದರು.  ಮೈಸೂರು ಶ್ರೀ ಬಸವ ಧ್ಯಾನ ಮಂದಿರದ ಶ್ರೀ ಬಸವಲಿಂಗಮೂರ್ತಿ ಸ್ವಾಮೀಜಿ ಮಾತನಾಡಿ, ಶ್ರಾವಣ ಬಂಧನದಿಂದ ಬಿಡುಗಡೆ, ದುಃಖದಿಂದ ಆನಂದದ ಕಡೆ ಹಾಗೂ ಅನಂತತೆಯ ಕಡೆಗೆ ಕೊಂಡೊಯ್ಯುತ್ತದೆ. ತತ್ವಜ್ಞಾನದ   ಶ್ರವಣದಿಂದ ನಮ್ಮ ಕಿವಿಗಳು ಸಾರ್ಥಕವಾಗುವುದಲ್ಲದೆ, ಜೀವನ ಪಾವನವಾಗುತ್ತದೆ ಎಂದು ಹೇಳಿದರು.  ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಸ್.ಬಸಪ್ಪ, ಶಿವಯೋಗಾಶ್ರಮ ಟ್ರಸ್ಟ್ ಕಾರ್ಯದರ್ಶಿ ಅಂದನೂರು ಮುಪ್ಪಣ್ಣ, ವಿರಕ್ತಮಠ ಧರ್ಮದರ್ಶಿ ಸಮಿತಿ ಕಾರ್ಯದರ್ಶಿ ಕಣಕುಪ್ಪಿ ಮುರುಗೇಶಪ್ಪ, ಅನಸೂಯಮ್ಮ ಇದ್ದರು. ಬಸವ ಕಲಾಲೋಕದವರು ವಚನ ಗಾಯನ ಹಾಡಿದರು. ಲಂಬಿ ಮುರುಗೇಶ್ ಸ್ವಾಗತಿಸಿದರು.

Share This Article

ತೂಕ ಇಳಿಸಿಕೊಳ್ಳಬೇಕಾ? ಸುಮ್ಮನೆ ಈ ಹಣ್ಣು, ಸೊಪ್ಪಿನ ವಾಸನೆಯನ್ನು ಒಮ್ಮೆ ಉಸಿರಾಡಿದ್ರೆ ಸಾಕು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…

ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿದು ನೋಡಿ; ಆರೋಗ್ಯ ಸಮಸ್ಯೆಗೆ ಸಿಗುತ್ತೆ ಪರಿಹಾರ …

 ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…