ಅಂಬಿಗರ ಚೌಡಯ್ಯ ಜಯಂತ್ಯುತ್ಸವ

ದಾವಣಗೆರೆ: ನಗರದ ಕುವೆಂಪು ಕನ್ನಡ ಭವನದಲ್ಲಿ ಸೋಮವಾರ ಶ್ರೀ ಶಿವಯೋಗಿ ಸಿದ್ದರಾಮ, ಮಹಾಯೋಗಿ ಶ್ರೀ ವೇಮನ, ಶ್ರೀ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಆಚರಿಸಲಾಯಿತು.

ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪಾಲಿಕೆ, ಜಿಲ್ಲಾ ಭೋವಿ ಸಮಾಜ, ಜಿಲ್ಲಾ ರೆಡ್ಡಿ ಸಮಾಜ ಹಾಗೂ ಜಿಲ್ಲಾ ಗಂಗಾಮತಸ್ಥರ ಸಮಾಜದಿಂದ ಸೋಮವಾರ ಕಾರ್ಯಕ್ರಮ ಆಯೋಜಿಸಿಲಾಗಿತ್ತು.

ಸಮಾರಂಭ ಉದ್ಘಾಟಿಸಿದ ಶಾಸಕ ಎಸ್.ಎ. ರವೀಂದ್ರನಾಥ್, ಸಮಾಜದ ಅಂಕುಡೊಂಕು ತಿದ್ದಲು ದಾರ್ಶನಿಕರು ಕೊಡುಗೆ ನೀಡಿದ್ದಾರೆ ಎಂದರು.

ರಾಣೆಬೆನ್ನೂರಿನ ಪ್ರಾಧ್ಯಾಪಕ ಡಾ. ರಾಮರೆಡ್ಡಿ ರಡ್ಡೇರ, ಹಿರೇಕೋಗಲೂರಿನ ಉಪನ್ಯಾಸಕ ಮಹಾಂತೇಶ್ ಬಿ. ನಿಟ್ಟೂರು ಉಪನ್ಯಾಸ ನೀಡಿದರು.