ಸೆಲೆಬ್ರಿಟಿಗಳಿಗಾಗಿ ಪ್ರಾಣತ್ಯಾಗ ಸರಿಯಲ್ಲ, ದಾವಣಗೆರೆಯಲ್ಲಿ ಶರಣರ ಹೇಳಿಕೆ

ದಾವಣಗೆರೆ: ಸೆಲೆಬ್ರಿಟಿ, ಚಿತ್ರನಟ-ನಟಿಯರಿಗಾಗಿ ಪ್ರಾಣತ್ಯಾಗ ಮಾಡಬೇಡಿ ಎಂದು ಚಿತ್ರದುರ್ಗ ಬೃಹನ್ಮಠದ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಶಿವಯೋಗಾಶ್ರಮದಲ್ಲಿ ಶನಿವಾರ ನಡೆದ ಲಿಂ.ಶ್ರೀ ಜಯದೇವ ಸ್ವಾಮೀಜಿಗಳ 62ನೇ ಸ್ಮರಣೋತ್ಸವದ ಸಹಜ ಶಿವಯೋಗ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಸ್ವಾತಂತ್ರೃಕ್ಕಾಗಿ ಮಹಾತ್ಮ ಗಾಂಧೀಜಿ ಪ್ರಾಣತ್ಯಾಗ ಮಾಡಿದರು. ಇತ್ತೀಚೆಗೆ ಸೆಲೆಬ್ರಿಟಿ ಬರ್ತಡೇ ಆಚರಿಸದ್ದಕ್ಕೆ ಅಭಿಮಾನಿಯೊಬ್ಬ ಪೆಟ್ರೋಲ್ ಸುರಿದುಕೊಂಡು ಮೈಮೇಲೆ ಬೆಂಕಿ ಹಚ್ಚಿಕೊಂಡಿದ್ದಾನೆ. ನೀರಾವರಿ, ಶೌಚಗೃಹ ಸೌಲಭ್ಯ ಮೊದಲಾದ ಜನಪರ ಉದ್ದೇಶಕ್ಕಾಗಿ ಯಾರು ಪ್ರಾಣತ್ಯಾಗ ಮಾಡಿದ್ದಾರೆ ಎಂದು ಪ್ರಶ್ನಿಸಿದರು.