ಪೊಲೀಸ್ ಇಲಾಖೇಲಿ ಮೀಸಲಿಗೆ ಮನವಿ

ದಾವಣಗೆರೆ: ಸ್ಕೌಟ್ಸ್-ಗೈಡ್ಸ್ ಮಕ್ಕಳಿಗೆ ಪೊಲೀಸ್, ಕೆಎಸ್‌ಆರ್‌ಟಿಸಿ ನೇಮಕಾತಿಯಲ್ಲಿ ಮೀಸಲು ಕಲ್ಪಿಸಲು ರಾಜ್ಯ ಸರ್ಕಾರಕ್ಕೆ ಕೋರಲಾಗಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಪುರಸ್ಕಾರ ಪ್ರಶಸ್ತಿ ಹಾಗೂ ಸೇವಾ ಪದಕ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ವೈದ್ಯಕೀಯ, ಇಂಜಿನಿಯರಿಂಗ್‌ನಲ್ಲೂ ಸೀಟು ಹೆಚ್ಚಳಕ್ಕೆ ಸಿಎಂ ಒಪ್ಪಿದ್ದಾರೆ. ದಾವಣಗೆರೆ ವಿವಿಯಲ್ಲಿ ಸ್ನಾತಕ ಪದವಿ ವ್ಯಾಸಂಗದಲ್ಲೂ ಮೀಸಲು ಜಾರಿಯಲ್ಲಿದೆ. ಇತರೆ ವಿವಿಗಳೂ ಪರಿಶೀಲಿಸುತ್ತಿವೆ ಎಂದರು.

ಅಮೆರಿಕಾ ಮಾದರಿಯಲ್ಲಿ ಸೇನೆಗೆ ಸೇರುವುದು ಭಾರತದಲ್ಲೂ ಕಡ್ಡಾಯವಾದಲ್ಲಿ ಶಿಸ್ತು ಹೆಚ್ಚಲಿದೆ. ರಾಜ್ಯದಿಂದ ವರ್ಷಕ್ಕೆ 6 ಸಾವಿರ ಕೋಟಾ ಖಾಲಿ ಉಳಿಯುತ್ತಿದೆ. ಸಾವಿನ ಭಯಕ್ಕೆ ಸೇನೆಗೆ ಸೇರಲು ಹಿಂಜರಿಕೆ ಸರಿಯಲ್ಲ ಎಂದರು.

ಜಿಲ್ಲಾ ಸಂಸ್ಥೆ ಉಪಾಧ್ಯಕ್ಷ ಜಯಪ್ರಕಾಶ್ ಜೆ.ಚಿಗಟೇರಿ, ಮುರುಘರಾಜೇಂದ್ರ ಚಿಗಟೇರಿ ಮತ್ತಿತರರಿದ್ದರು.