ದಾವಣಗೆರೆ : ಮಕ್ಕಳನ್ನು ಸುಸಂಸ್ಕೃತರನ್ನಾಗಿ ಬೆಳೆಸುವತ್ತ ಪಾಲಕರು ಗಮನ ಕೊಡಬೇಕು ಎಂದು ಹರಿಹರದ ಸಾಹಿತಿ ಪ್ರೊ. ಎಚ್.ಎ. ಭಿಕ್ಷಾವರ್ತಿಮಠ್ ಹೇಳಿದರು. ನಗರದ ವಿಶ್ವಚೇತನ ವಿದ್ಯಾನಿಕೇತನ ವಸತಿಯುತ ಪ್ರೌಢಶಾಲೆಯಲ್ಲಿ ಸೋಮವಾರ ನಡೆದ 38 ನೇ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಬಾಲ್ಯದಿಂದಲೂ ಮಕ್ಕಳಿಗೆ ಉತ್ತಮ ವಾತಾವರಣದೊಂದಿಗೆ ಒಳ್ಳೆಯ ಸಂಸ್ಕಾರ ನೀಡಬೇಕು. ಇತ್ತೀಚಿಗೆ ವಿದ್ಯಾವಂತ ಯುವಕ ಯುವತಿಯರು, ಅಧಿಕಾರಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದಕ್ಕೆ ಅವರಲ್ಲಿನ ಸಂಸ್ಕಾರ ಕೊರತೆಯೇ ಕಾರಣ. ಮಕ್ಕಳಿಗೆ ಕೇವಲ ಅಂಕ ಗಳಿಸಲು ಪ್ರೇರೇಪಿಸದೇ, ಅವರನ್ನು ಸೃಜನಶೀಲರನ್ನಾಗಿ ಮಾಡೋಣ ಎಂದು ತಿಳಿಸಿದರು. ಡಿಡಿಪಿಐ ಜಿ. ಕೊಟ್ರೇಶ್, ಶಾಲೆಯ ನಿರ್ದೇಶಕ ರಾಘವೇಂದ್ರ ಪ್ರಸಾದ್ ಮಾತನಾಡಿದರು. ಪ್ರಾಚಾರ್ಯ ಎಂ. ಕಿರಣ್ ಕುಮಾರ್, ಪ್ರಾಚಾರ್ಯರಾದ ವಿನೋದ್, ಪ್ರದೀಪ್, ಪ್ರಕಾಶ್ ಜೋಗಿ, ಮುಖ್ಯ ಶಿಕ್ಷಕ ಬಿ.ಎಂ. ಬಸವರಾಜಯ್ಯ, ಉಪ ಪ್ರಾಚಾರ್ಯ ಕೆ. ಯುವರಾಜ್, ಅಪೇಕ್ಷಾ ಇದ್ದರು. ಪ್ರಾಚಾರ್ಯೆ ಶಾಜಿಯಾ ಬಾನು ಸ್ವಾಗತಿಸಿದರು. ಶಿಕ್ಷಕ ಜಿ. ಸಿದ್ದಪ್ಪ ವಂದಿಸಿದರು. ಬಿ. ನಾಗರಾಜ್, ವಿನಾಯಕ ಖಮಿತ್ಕರ್ ಹಾಗೂ ವಿದ್ಯಾರ್ಥಿಗಳಾದ ಅನುಷಾ, ಪ್ರೇರಣಾ, ಕೀರ್ತನಾ, ಯಶ್ಚಿಕಾ, ಸಯ್ಯದ್ ಅಬುಸನ್ನಾನ್, ಖುಷಿ, ಹರ್ಷಿಣಿ, ಪ್ರತ್ಯುಶ್ ಪಾಲ್ಗೊಂಡಿದ್ದರು.
ಮಕ್ಕಳಿಗೆ ಸಿಗಲಿ ಒಳ್ಳೆಯ ಸಂಸ್ಕಾರ

ಹುಡುಗಿಯರೇ.. ಬೇಸಿಗೆಯಲ್ಲಿ ಸುಂದರವಾಗಿ ಕಾಣಬೇಕಾದರೆ ಈ ತಪ್ಪುಗಳನ್ನು ಮಾಡಬೇಡಿ! Beauty Tips
Beauty Tips: ಬೇಸಿಗೆ ಸಮೀಪಿಸುತ್ತಿರುವುದರಿಂದ, ಅನೇಕ ಜನರು ತಮ್ಮ ಚರ್ಮವನ್ನು ರಕ್ಷಿಸಲು ಹೆಣಗಾಡುತ್ತಿದ್ದಾರೆ. ಹುಡುಗಿಯರು ಹೊರಗೆ…
ನಿಮಗೆ ಕೂದಲು ಉದುರುವ ಸಮಸ್ಯೆ ಇದೆಯೇ? ಹಾಗಲಕಾಯಿ ರಸವನ್ನು ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ…bitter gourd
bitter gourd : ನಮ್ಮಲ್ಲಿ ಹಲವರಿಗೆ ಹಾಗಲಕಾಯಿ ತಿನ್ನುವುದು ಇಷ್ಟವಾಗುವುದಿಲ್ಲ. ಹಾಗಲಕಾಯಿ ತಿನ್ನಲು ಸ್ವಲ್ಪ ಕಹಿಯಾಗಿದ್ದರೂ,…
ಸುರಕ್ಷಿತ ಪ್ರಯಾಣಕ್ಕಾಗಿ ನಿಮ್ಮ ಕಾರಿನಲ್ಲಿ ಇರಲೇಬೇಕಾದ 6 ವಸ್ತುಗಳು ಯಾವವು ಗೊತ್ತಾ? Vastu Tips
Vastu Tips: ನಮ್ಮ ಮನೆಗಳು ಮತ್ತು ಕಚೇರಿಗಳಿಗೆ ಮಾತ್ರವಲ್ಲದೆ, ನಮ್ಮ ವಾಹನಗಳಿಗೂ ಕೆಲವು ವಾಸ್ತು ನಂಬಿಕೆಗಳಿವೆ.…