ದಾವಣಗೆರೆ : ಸಂಸ್ಕಾರದ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸೋಣ ಎಂದು ಸಂಸ್ಕಾರ ಭಾರತೀ ಕರ್ನಾಟಕ-ದಕ್ಷಿಣ ಪ್ರಾಂತ ಅಧ್ಯಕ್ಷ, ನಟ ಕೆ. ಸುಚೇಂದ್ರ ಪ್ರಸಾದ್ ಹೇಳಿದರು. ಸಂಸ್ಕಾರ ಭಾರತೀ ಜಿಲ್ಲಾ ಸಮಿತಿಯಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಆಯೋಜಿಸಿದ್ದ, ಕಾರ್ಯಕರ್ತ ಪ್ರಬೋಧನಾ ವರ್ಗ ಮತ್ತು ಕಲಾ ದರ್ಶನ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಸ್ಕಾರ ಭಾರತೀ ಸಂಘಟನೆ 4 ದಶಕಗಳಿಂದ ತಾಯಿ ಭಾರತಿಯ ಸೇವೆ ಮಾಡುತ್ತಿರುವ ಮುಂಚೂಣಿ ಕಲಾ ಸಂಸ್ಥೆಯಾಗಿದೆ. ಈ ಸಂಸ್ಥೆಯಲ್ಲಿ ಸಂಸ್ಕಾರಕ್ಕೆ ಮಹತ್ವ ನೀಡುತ್ತೇವೆ. ಸಹಭಾಗಿತ್ವ, ಸಾಮರಸ್ಯ ಇದರ ಮಂತ್ರವಾಗಿವೆ ಎಂದು ತಿಳಿಸಿದರು. ನಮ್ಮ ಸುತ್ತಲೂ ಸಮಾಧಾನ ಇಲ್ಲದ ಸ್ಥಿತಿಯನ್ನು ನೋಡುತ್ತಿದ್ದೇವೆ. ಹೀಗಿರುವಾಗ ಸಂಸ್ಕಾರದ ಮೂಲಕ ಸರಿಪಡಿಸಬೇಕಿದೆ. ಮೊದಲು ನಮ್ಮನ್ನು ನಾವು ಸರಿಪಡಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗೋಣ. ಮುಂದಿನ ತಲೆಮಾರಿಗೆ ಮೌಲ್ಯಗಳನ್ನು ಕಲಿಸೋಣ ಎಂದು ಹೇಳಿದರು. ಸಂಸ್ಕಾರ ಭಾರತೀ ವೈಚಾರಿಕ ಸಂಸ್ಥೆಯಾಗಿದೆ. ನಾವೆಲ್ಲ ಕಲೆಯ ಮೂಲಕ ದೇಶ ಸೇವೆಯಲ್ಲಿ ತೊಡಗೋಣ. ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಕೈ ಜೋಡಿಸೋಣ. ಸಾಧನೆಯ ಹಾದಿಯಲ್ಲಿ ಸಾಗೋಣ ಎಂದು ತಿಳಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿದರು. ಸಂಸ್ಕಾರ ಭಾರತೀ ಪ್ರಾಂತ ಸಹ ಪ್ರಧಾನ ಕಾರ್ಯದರ್ಶಿ ರೇಖಾ ಪ್ರೇಮಕುಮಾರ್, ಜಿಲ್ಲಾಧ್ಯಕ್ಷ ಬಿ. ದಿಳ್ಯಪ್ಪ, ಭರತಾಂಜಲಿ ಅಕಾಡೆಮಿ ಫಾರ್ ಪರ್‌ಫಾರ್ಮಿಂಗ್ ಆರ್ಟ್ಸ್‌ನ ನಿರ್ದೇಶಕಿ ಡಾ. ಮಂಗಳಾ ಶೇಖರ್, ರಾಮಚಂದ್ರ, ಕಲಾವಿದ ಎ. ಮಹಾಲಿಂಗಪ್ಪ ಇದ್ದರು. ವಾಸುದೇವ ರಾಯ್ಕರ್ ಸ್ವಾಗತಿಸಿದರು. ಭಾನುಶ್ರೀ ಪ್ರಾರ್ಥಿಸಿದರು. ವಿವಿಧ ಸಂಘ ಸಂಸ್ಥೆ, ಕಲಾ ತಂಡಗಳಿಂದ ಸಾಂಸ್ಕೃತಿಕ ಪ್ರದರ್ಶನ ನಡೆಯಿತು.
ಸಂಸ್ಕಾರದಿಂದ ಸ್ವಸ್ಥ ಸಮಾಜ ನಿರ್ಮಾಣ

ಒಂದು ತಿಂಗಳು ಸಕ್ಕರೆ ಮತ್ತು ಉಪ್ಪು ಬಿಟ್ಟರೆ ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ? | Sugar
Sugar: ಸಾಮಾನ್ಯವಾಗಿ ಮನುಷ್ಯನ ದೇಹ ಅನಾರೋಗ್ಯಕ್ಕೊಳಗಾದಾಗ ಆಹಾರದಲ್ಲಿ ಸಕ್ಕೆರೆ ಮತ್ತು ಉಪ್ಪುನಂತಹ ಅಂಶಗಳನ್ನು ತ್ಯಜಿಸಬೇಕಾಗುತ್ತದೆ. ಇದರಿಂದ…
ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits
Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…