More

    ದಾವಣಗೆರೆಯಲ್ಲಿ ಸಹಜ ಶಿವಯೋಗ

    ದಾವಣಗೆರೆ: ಶುಕ್ರವಾರ ಆರಂಭವಾದ ಲಿಂ.‌ಜಯದೇವ ಮುರುಘರಾಜೇಂದ್ರ ಸ್ವಾಮೀಜಿಗಳ 63 ನೇ ಸ್ಮರಣೋತ್ಸವದ ಭಾಗವಾಗಿ ಶಿವಯೋಗಾಶ್ರಮ, ಸಹಜ ಶಿವಯೋಗ ಕಾರ್ಯಕ್ರಮ ನಡೆಯಿತು.
    ಚಿತ್ರದುರ್ಗ ಮುರುಘಾ ಮಠದ ಡಾ. ಶ್ರೀ‌ ಶಿವಮೂರ್ತಿ ಮುರುಘಾ ಶರಣರು ಪರಿಣಾಮಕಾರಿ ಶಿವಯೋಗದ ವಿಧಾನಗಳು ಮತ್ತು ಅದರ ಲಾಭಗಳ ಕುರಿತು ವಿವರಿಸಿದರು. ಸಾವಿರ ಸಂಖ್ಯೆಯ ಭಕ್ತರು, ಹರಗುರು ಚರಮೂರ್ತಿಗಳು ಶಿವಯೋಗದಲ್ಲಿ ಭಾಗಿಯಾದರು.
    ಅತಿಯಾದ ಒತ್ತಡ ಆಧುನಿಕ‌ ಜಗತ್ತಿನ ಮಹಾಮಾರಿ. ಅನೇಕ ಭಾರತೀಯರಲ್ಲಿ ಇದರ ಪ್ರಮಾಣ ಹೆಚ್ಚು. ಅನೇಕ ರೋಗಗಳಿಗೆ ಇದು ಕಾರಣವಾಗಲಿದೆ. ಶಿವಯೋಗ ವಿಧಾನದಿಂದ ಬದುಕಿನಲ್ಲಿನ ‌ನಾಟಕೀಯತೆ, ಸಿನಿಕತನ ದೂರವಾಗಲಿದೆ ಎಂದು ಮುರುಘಾ ಶರಣರು ಸಂದೇಶ ನೀಡಿದರು.
    ಕಾರ್ಯಕ್ರಮದಲ್ಲಿ ಹೆಬ್ಬಾಳು ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ, ಖಜೂರಿಯ ಶ್ರೀ ಮುರುಘೇಂದ್ರ ಕೋರಣ್ಯೇಶ್ವರ ಸ್ವಾಮೀಜಿ, ಶ್ರೀ ಬಸವಪ್ರಭು ಸ್ವಾಮೀಜಿ, ಕರ್ನಾಟಕ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ಡಿ. ಬಸವರಾಜ್, ಸೋಮೇಶ್ವರ ಶಾಲೆಯ ಕಾರ್ಯದರ್ಶಿ ಕೆ.ಎಂ.‌ಸುರೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts